ಥಾಣೆ, ಡಿ.26-ಮನೆ ಮುಂದೆ ಆಟವಾಡುತ್ತಿದ್ದ 12 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯನ್ನು ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಿಂದ ಬಂಧಿಸಿದ ಇಲ್ಲಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಪ್ರಮುಖ ವಿಶಾಲ್ ಗಾವ್‌ಲಿ ಎಂದು ಗುರುತಿಸಲಾಗಿದೆ.
ಆತ ವಾಸವಾಗಿದ್ದ ಕಲ್ಯಾಣ್ ಬಳಿಯ ಗ್ರಾಮದಲ್ಲಿ ಬಾಲಕಿಯ ಶವ ಪತ್ತೆಯಾದ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ ಪತ್ನಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಸಹ ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬುಲ್ಧಾನಾದ ಶೆಗಾಂವ್‌ನಿಂದ ಬಂಧನಕ್ಕೊಳಗಾದ ಗಾವ್‌ಲಿಯನ್ನು ಇಂದು ಬೆಳಿಗೆ 6 ಗಂಟೆಗೆ ಇಲ್ಲಿಗೆ ಕರೆತರಲಾಯಿತು ಎಂದು ಅಪರಾಧ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಗುರುತನ್ನುಮರೆಮಾಚುವ ಉದ್ದೇಶದಿಂದ ಗಡ್ಡವನ್ನು ಬೋಳಿಸಿಕೊಂಡು ಸಲೂನ್‌ನಿಂದ ಹೊರಬರುತ್ತಿದ್ದಾಗ ಶೆಗಾಂವ್‌ನ ಪೊಲೀಸ್ ತಂಡವು ಗಾವ್‌ಲಿಯನ್ನು ಬಂಧಿಸಿದೆ.
ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ,ಆರೋಪಿಯ ಸಂಬಂಧಿಕರು ಮತ್ತು ಸ್ನೇಹಿತರು ಸೇರಿದಂತೆ ಸುಮಾರು 10 ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಮತ್ತು ಅತ್ಯಾಚಾರ ದೃಢಪಟ್ಟರೆ, ಪ್ರಕರಣಕ್ಕೆ ಇತರ ಕಾನೂನು ವಿಭಾಗಗಳನ್ನು ಸೇರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಈ ಹಿಂದೆ ಹೇಳಿದ್ದಾರೆ. ಅಪರಾಧಕ್ಕೆ ಬಳಸಿದ್ದ ಆಟೋರಿಕ್ಷಾವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗಾವ್‌ಲಿ ಅವರ ವಿರುದ್ಧ ಈಗಾಗಲೇ ಕೆಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧಕ್ಕೆ ಸಂಬಂಧಿಸಿದಂತೆ ಅವರ ಮೂರನೇ ಪತ್ನಿ ಸಾಕ್ಷಿ ಗಾವ್‌ಲಿ ಮತ್ತು ಇನ್ನೊಬ್ಬ ವ್ಯಯಕ್ತಿಯನ್ನು ಸಹ ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವ ಸಾಕ್ಷಿ ಗಾವ್‌ಲಿಯನ್ನು ಬುಧವಾರ ಸ್ಥಳೀಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸೋಮವಾರ ಮಧ್ಯಾಹ್ನ ಕಲ್ಯಾಣ್‌ನ ಕೋಲ್ಸೆವಾಡಿಯಿಂದ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ಬಾಲಕಿಯನ್ನು ಅಪಹರಿಸಲಾಗಿತ್ತು. ಥಾಣೆ ಜಿಲ್ಲೆಯ ಭಿವಂಡಿ ಬಳಿ ಮಂಗಳವಾರ ಬೆಳಗ್ಗೆ ಶವ ಪತ್ತೆಯಾಗಿತ್ತು.