ಬೆಂಗಳೂರು,ಮಾ.19- ಸ್ಕೂಟರ್‌ನಲ್ಲಿ ವೀಲಿಂಗ್ ಮಾಡುತ್ತಾ ಕೈಯಲ್ಲಿ ಲಾಂಗ್ ಹಿಡಿದು ರಸ್ತೆಗೆ ಉಜ್ಜಿ ಬೆಂಕಿ ಬರಿಸಿ ಸಾರ್ವಜನಿಕರಿಗೆ ಭಯ ಭೀತಿ ಉಂಟುಮಾಡಿದ್ದ ಇಬ್ಬರು ಸವಾರರ ವಿರುದ್ಧ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.ಅಪ್ರಾಪ್ತ ಯುವಕರು ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾಭ್ಯಾಸ ಮೊಟುಕುಗೊಳಿಸಿ ವೀಲಿಂಗ್‌ನಲ್ಲಿ ತೊಡಗಿದ್ದಾರೆ.
ಸಂಚಾರ ಪಶ್ಚಿಮ ವಿಭಾಗದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಚೌಡೇಶ್ವರಿ ನಗರ ಬಸ್ ನಿಲ್ದಾಣ ಹತ್ತಿರ, ಔಟರ್ ರಿಂಗ್ ರಸ್ತೆಯಲ್ಲಿ ಇಬ್ಬರು ಯುವಕರು ಸ್ಕೂಟರ್‌ನಲ್ಲಿ ವೀಲಿಂಗ್ ಮಾಡುತ್ತಾ ಕೈಯಲ್ಲಿ ಅಪಾಯಕಾರಿ ಆಯಧ ಲಾಂಗ್ ಹಿಡಿದು ರಸ್ತೆಗೆ ಉಜ್ಜಿ ಬೆಂಕಿ ಬರಿಸಿ ಸಾರ್ವಜನಿಕರಿಗೆ ಭಯ ಭೀತಿ ಉಂಟುಮಾಡಿದ ಬಗ್ಗೆ ಖಚಿತ ಮಾಹಿತಿ ದೊರೆತಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ವೀಲಿಂಗ್ ಮಾಡಿದ ವಾಹನ ಮತ್ತು ಸವಾರ ಹಾಗೂ ಲಾಂಗ್ ಹಿಡಿದು ಆತನ ಹಿಂಭಾಗ ಕುಳಿತು ಕೃತ್ಯದಲ್ಲಿ ಭಾಗಿಯಾಗಿದ್ದ ಹಿಂಬದಿ ಸವಾರನನ್ನು ವಶಕ್ಕೆ ಪಡೆದಿದ್ದಾರೆ.
ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಈ ಆರೋಪಿಗಳು ಇತರೇ ಸಹಚರರೊಂದಿಗೆ ಸೇರಿಕೊಂಡು ಏರಿಯಾದಲ್ಲಿ ತಮ ಹವಾ ಸೃಷ್ಠಿಸಲು ಹಾಗೂ ಎದುರಾಳಿಗೆ ಭಯಭೀತಿ ಬೀಳಿಸುವ ಉದ್ದೇಶದಿಂದ ಅಪಾಯಕಾರಿ ಆಯುಧ ಲಾಂಗ್ ಹಿಡಿದು ಝಳಪಿಸಿ ಇದನ್ನು ವಿಡಿಯೋ ಮಾಡಿಸಿಕೊಂಡ ಬಗ್ಗೆ ಹೇಳಿದ್ದಾರೆ.ಕೃತ್ಯ ನಡೆದ ಸ್ಥಳವನ್ನು ಪರಿಶೀಲನೆಮಾಡಿದಾಗ ನಂದಿನಿ ಲೇಔಟ್ (ಕಾನೂನು ಮತ್ತು ಸುವ್ಯವಸ್ಥೆ) ಪೊಲೀಸ್ ಠಾಣೆಗೆ ಸೇರಿದ್ದರಿಂದ ಮಾರಾಕಾಸ್ತ್ರ ಬಳಸಿದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವ ಸಲುವಾಗಿ ಪಿಎಸ್‌ಐ ಕೃಷ್ಣರವರಿಂದ ವರದಿಯನ್ನು ಸಲ್ಲಿಸಲಾಗಿದೆ.
ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ರಿಮ್ಯಾಂಡ್ ಅರ್ಜಿಯೊಂದಿಗೆ ನಂದಿನಿ ಲೇಔಟ್ ಪೊಲೀಸರು ಸಲ್ಲಿಸಿದ್ದಾರೆ. ಈ ಪ್ರಕರಣವು ಅಪಾಯಕಾರಿ ವೀಲಿಂಗ್ ಮಾಡುವವರು ಹಾಗೂ ಮಾರಾಕಾಸ್ತ್ರಗಳನ್ನು ಸಾರ್ವಜನಿಕರ ರಸ್ತೆಗಳಲ್ಲಿ ಬಳಸುವ ಪುಂಡರಿಗೆ ಎಚ್ಚರಿಕೆ ಪಾಠವಾಗಿದ್ದು, ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಂಡು ಕಣ್ಗಾವಲು ಇಡಲು ಆರೋಪಿಗಳ ವಿರುದ್ಧ ಭದ್ರತಾ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು.ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ಯೋಗೇಶ್, ಪಿಎಸ್‌ಐ ಕೃಷ್ಣ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು.