Thursday, January 9, 2025
Homeರಾಷ್ಟ್ರೀಯ | Nationalರಾಹುಲ್‌ಗಾಂಧಿಗಿಂತ ಪ್ರಿಯಾಂಕಾ ಬೆಸ್ಟ್‌; ಕಂಗನಾ ರಣಾವತ್‌

ರಾಹುಲ್‌ಗಾಂಧಿಗಿಂತ ಪ್ರಿಯಾಂಕಾ ಬೆಸ್ಟ್‌; ಕಂಗನಾ ರಣಾವತ್‌

ನವದೆಹಲಿ,ಜ.9- ಸಂಸದೆ ಪ್ರಿಯಾಂಕಾ ಗಾಂಧಿ ತನ್ನ ಸಹೋದರ ರಾಹುಲ್‌ ಗಾಂಧಿ ಅವರಂತೆ ಅಲ್ಲ. ಅವರು ಅತ್ಯಂತ ಸಂವೇದನಾಶೀಲರು ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಶ್ಲಾಘಿಸಿದ್ದಾರೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜೀವನಾಧಾರಿತ ಮುಂಬರುವ ಚಿತ್ರ ಎಮರ್ಜೆನ್ಸಿ ವೀಕ್ಷಿಸಲು ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್‌ ಅವರು ಕಾಂಗ್ರೆಸ್‌‍ನ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಿದ್ದಾರೆ. ಕಾಂಗ್ರೆಸ್‌‍ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೂ ಇದೇ ರೀತಿಯ ಆಹ್ವಾನವನ್ನು ನೀಡಿದ್ದಾರೆ. ಜನವರಿ 17 ರಂದು ತೆರೆಗೆ ಬರಲಿರುವ ಈ ಚಿತ್ರವನ್ನು ರಣಾವತ್‌ ನಿರ್ದೇಶಿಸಿದ್ದು, ಅವರು ಮಾಜಿ ಪ್ರಧಾನಿ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ.

ಆದರೆ, ಆಹ್ವಾನ ನೀಡಲು ರಾಹುಲ್‌ ಗಾಂಧಿ ಅವರನ್ನು ಭೇಟಿಯಾದಾಗ ಕಂಗನಾ ಅವರ ವರ್ತನೆಯನ್ನು ಟೀಕಿಸಿದ್ದಾರೆ. ಅವರಿಗೆ ಯಾರ ಜತೆ ಹೇಗೆ ಮಾತನಾಡಬೇಕು ಎಂಬ ಶಿಷ್ಟಾಚಾರ ಇಲ್ಲ ಎಂದು ದೂಷಿಸಿದ್ದಾರೆ. ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಜೊತೆಗಿನ ಸಂವಾದವನ್ನು ನೆನಪಿಸಿಕೊಂಡ ಕಂಗನಾ, ಅವರು ನಗುತ್ತಾ ಹೇಳಿದರು… ಇದು ಸಂಸತ್ತಿನಲ್ಲಿ ನಾವು ನಡೆಸಿದ ಅತ್ಯಂತ ಸುಂದರವಾದ ಸಂಭಾಷಣೆ. ನಾನು ಅದನ್ನು ಬಹಳ ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವಳು ತನ್ನ ಸಹೋದರನಂತಲ್ಲದೆ ಸಾಕಷ್ಟು ಸೌಜನ್ಯಯುತಳು. ಅವಳು ಖಂಡಿತವಾಗಿಯೂ. ಸಂವೇದನಾಶೀಲ ಮತ್ತು ಅವಳು ಏನು ಮಾತನಾಡುತ್ತಿದ್ದಾಳೆಂದು ತಿಳಿದಿದೆ ಎಂದಿದ್ದಾರೆ.

ಆಕೆಯ ಅಣ್ಣ ಒಟ್ಟು… ಹೇಗಿದ್ದಾನೆ ಗೊತ್ತಾ. ಅವನು ನನ್ನನ್ನು ನೋಡಿ ಮುಸಿಮುಸಿ ನಕ್ಕಿದ್ದಾನೆ. ಅವನಿಗೆ ಹೆಚ್ಚು ಶಿಷ್ಟಾಚಾರವಿಲ್ಲ. ಆದರೆ ನಾನು ಅವನನ್ನು ಚಿತ್ರ ನೋಡಲು ಆಹ್ವಾನಿಸುತ್ತೇನೆ ಎಂದು ಕಂಗನಾ ಹೇಳಿದ್ದಾರೆ. ಎಮರ್ಜೆನ್ಸಿ ಚಿತ್ರದಲ್ಲಿ ಅನುಪಮ್‌ ಖೇರ್‌, ಶ್ರೇಯಸ್‌‍ ತಲ್ಪಾಡೆ, ಅಶೋಕ್‌ ಛಾಬ್ರಾ, ಮಹಿಮಾ ಚೌಧರಿ, ಮಿಲಿಂದ್‌ ಸೋಮನ್‌, ವಿಶಾಕ್‌ ನಾಯರ್‌ ಮತ್ತು ದಿವಂಗತ ಸತೀಶ್‌ ಕೌಶಿಕ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಜನವರಿ 17 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ, ಈ ಚಲನಚಿತ್ರವು ಇಂದಿರಾ ಗಾಂಧಿಯವರು 1975 ರಿಂದ 1977 ರವರೆಗೆ ಹೇರಿದ ತುರ್ತು ಪರಿಸ್ಥಿತಿ ಮತ್ತು ಅದರ ನಂತರದ ಪರಿಸ್ಥಿತಿಯನ್ನು ಪ್ರತಿಬಿಂಬಿಸಲಿದೆ.

RELATED ARTICLES

Latest News