ಬೆಲ್ಜಿಯಂ, ಏ.20- ಸಿನಿಮಾ ತಾರೆಯರು ಹಾಗೂ ಕ್ರಿಕೆಟ್ ಕಲಿಗಳು ಮದುವೆಯಾಗುವುದು ಹೊಸದೇನಲ್ಲ. ಟೀಮ್ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್- ಸಂಗೀತಾ ಬಿಜಲಾನಿಯಿಂದ ಹಿಡಿದು ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾರವರೆಗೆ ಹಲವು ಸಿನಿ- ಕ್ರಿಕೆಟ್ ತಾರೆಯರು ಸಪ್ತಪದಿ ತುಳಿದಿದ್ದು, ಈಗ ಈ ಸಾಲಿಗೆ ಕರ್ನಾಟಕ ಕ್ರಿಕೆಟ್ ತಂಡದ ಆಟಗಾರ ಶರತ್ ಹಾಗೂ ಚಂದನವನದ ಚೆಂದುಳ್ಳಿ ನಟಿ ಅರ್ಚನಾ ಕೊಟ್ಟಿಗೆ ಅವರು ಸೇರಿದ್ದಾರೆ.
ಇತ್ತೀಚೆಗೆ ತಮ ಕುಟುಂಬದವರು ಹಾಗೂ ಆಪ್ತೇಷ್ಟರ ನಡುವೆ ಶರತ್ ಹಾಗೂ ಅರ್ಚನಾ ಅವರ ನಿಶ್ಚಿತಾರ್ಥವು ನಡೆದಿದ್ದು , ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.
ಅರಣ್ಯಕಾಂಡ ಚಿತ್ರದ ಮೂಲಕ ತಮ ಸಿನಿ ಪಯಣ ಆರಂಭಿಸಿದ ಅರ್ಚನಾ ಅವರು ನಂತರ ವಾಸು ನಾನ್ ಪಕ್ಕಾ ಕಮರ್ಷಿಯಲ್, ಡಿಯರ್ ಸತ್ಯಾ, ಯೆಲ್ಲೋ ಗ್ಯಾಂಗ್‌್ಸ , ಹೊಂದಿಸಿ ಬರೆಯಿರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ ನಟನೆಯ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಇನ್ನು ಬಿ.ಆರ್.ಶರತ್ ಅವರು ಕರ್ನಾಟಕ ತಂಡದ ಖ್ಯಾತ ವಿಕೆಟ್ ಕೀಪರ್ ಬ್ಯಾಟರ್ ಆಗಿದ್ದು, ಇದುವರೆಗೂ 20 ರಣಜಿ ಪಂದ್ಯಗಳಿಂದ 616 ರನ್, ಟಿ 20 ದೇಶಿ ಟೂರ್ನಿಗಳಲ್ಲಿ 29 ಪಂದ್ಯಗಳಿಂದ ಒಂದು ಅರ್ಧಶತಕ ನೆರವಿನಿಂದ 330 ರನ್ ಗಳಿಸಿದ್ದಾರೆ. ಕೆಪಿಎಲ್ ನಲ್ಲಿ ಬಿಜಾಪುರ್ ಬುಲ್‌್ಸ, ಮಂಗಳೂರು ಡ್ರ್ಯಾಗನ್ಸ್ , ಶಿವಮೊಗ್ಗ ಸ್ಟ್ರೈಕರ್ಸ್ ತಂಡಗಳ ಪರ ಆಡಿದ್ದಾರೆ. ಅಲ್ಲದೆ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್‌್ಸ ಪರ ಗುರುತಿಸಿಕೊಂಡಿದ್ದಾರೆ.