ಬೆಂಗಳೂರು,ಆ.28- ನಟಿ ಹಾಗೂ ಆ್ಯಂಕರ್ ಅನುಶ್ರೀ ಹಾಗೂ ರೋಷನ್ ಅವರ ಕಲ್ಯಾಣ ಮಹೋತ್ಸವವು ಕಗ್ಗಲಿಪುರದ ಬೈಸ್ವಾನ್ ಲೈನ್ ಸ್ಟುಡಿಯೋಸ್ ತಿಟ್ಟಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಅನುಶ್ರೀ ಅವರ ವಿವಾಹ ಮಹೋತ್ಸವಕ್ಕೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಆಗಮಿಸಿ ಶುಭ ಹಾರೈಸಿದ್ದಾರೆ. ತಮ್ಮ ನಿರೂಪಣಾ ಶೈಲಿಯಿಂದಲೇ ತಮದೇ ಆದ ಅಭಿಮಾನಿ ಬಳಗವನ್ನು ಅನುಶ್ರೀ ಅಪ್ಪು ಫ್ಯಾನ್ ಆಗಿರುವ ಕಾರಣ, ಅಪ್ಪು ಹುಟ್ಟುಹಬ್ಬದ ದಿನವೇ ಮದುವೆ ಬಗ್ಗೆ ಸಿಹಿ ಸುದ್ದಿ ಕೊಡ್ತೀನಿ ಎಂದಿದ್ದರು. ಆದರೆ ಅಂದು ಅಭಿಮಾನಿಗಳಿಗೆ ನಿರಾಸೆ ಮಾಡಿದ್ದರು. ಕೊನೆಗೂ ಅನುಶ್ರೀ ಅವರ ಮದುವೆಯ ಬಗ್ಗೆ ಇದ್ದ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.
ಅನುಶ್ರೀ- ರೋಷನ್ ಅವರ ಮನೆಗಳವರು ಒಪ್ಪಿ ಅದ್ದೂರಿಯಾಗಿ ಮದುವೆ ಮಾಡಿದ್ದಾರೆ. ನಿನ್ನೆಯಿಂದಾನೂ ವೈವಾಹಿಕ ಕ್ರಿಯೆಗಳು ನಡೆದಿದ್ದು, ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರದಲ್ಲಿ ಅನುಶ್ರೀ ಮಿಂದೆದ್ದಿದ್ದಾರೆ.
ರೋಷನ್ ಮೂಲತಃ ಕೊಡಗಿನವರು. ಬೆಂಗಳೂರಿನಲ್ಲಿಯೇ ಉದ್ಯಮಿಯಾಗಿದ್ದಾರೆ. ಇಂದು ಬೆಳಗ್ಗೆ 10.56ಕ್ಕೆ ರೋಷನ್, ಅನುಶ್ರೀ ಅವರಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
- ಭ್ರಷ್ಟ ಅಧಿಕಾರಿಗಳಿಂದ ಭೂಗಳ್ಳರ ಪಾಲಾಗಿರುವ 200 ಕೋಟಿ ರೂ. ಮೌಲ್ಯದ ಭೂಮಿ ವಶಕ್ಕೆ ಆಗ್ರಹ
- A ಖಾತಾ ಸೋಗಿನಲ್ಲಿ 15,000 ಕೋಟಿ ರೂ. ಸುಲಿಗೆ : ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ
- ಆರ್ಎಸ್ಎಸ್ ಶತಮಾನೋತ್ಸವದಲ್ಲಿ ಪಾಲ್ಗೊಂಡಿದ್ದ ಆರ್ಡಿಪಿಆರ್ ನೌಕರರ ಅಮಾನತ್ತು!
- ಬೆಂಗಳೂರು : 14 ಲಕ್ಷ ಮೌಲ್ಯದ ನಕಲಿ ಸಿಗರೇಟ್ಗಳ ಜಪ್ತಿ
- ಬಿಜೆಪಿ ಭಿನ್ನರ ಮೀಟಿಂಗ್, ಗರಿಗೆದರಿದ ರಾಜಕೀಯ ಚಟುವಟಿಕೆ