Wednesday, March 26, 2025
Homeಮನರಂಜನೆಲಾಂಗ್‌ ಹಿಡಿದು ರೀಲ್ಸ್ ಮಾಡಿದ ಬಿಗ್‌ ಬಾಸ್‌‍ ಸ್ಪರ್ಧಿ ವಿನಯ್‌ ಮತ್ತು ರಜತ್‌ ವಿರುದ್ಧ ಎಫ್‌ಐಆರ್‌

ಲಾಂಗ್‌ ಹಿಡಿದು ರೀಲ್ಸ್ ಮಾಡಿದ ಬಿಗ್‌ ಬಾಸ್‌‍ ಸ್ಪರ್ಧಿ ವಿನಯ್‌ ಮತ್ತು ರಜತ್‌ ವಿರುದ್ಧ ಎಫ್‌ಐಆರ್‌

Kannada Bigg Boss Contestants Rajat and Vinay Gowda Face FIR

ಬೆಂಗಳೂರು,ಮಾ.24– ಲಾಂಗ್‌ ಹಿಡಿದು ರೀಲ್ಸ್ ಮಾಡಿದ ಕಿರುತೆರೆ ನಟ,ಬಿಗ್‌ ಬಾಸ್‌‍ನಲ್ಲಿ ಕಾಣಿಸಿಕೊಂಡಿದ್ದ ವಿನಯ್‌ ಗೌಡ ಮತ್ತು ರಜತ್‌ ವಿರುದ್ಧ ಬಸವೇಶ್ವರ ನಗರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

ರಜತ್‌ಜೊತೆ ನಟ ವಿನಯ್‌ ಗೌಡ ರೀಲ್ಸ್ ನಲ್ಲಿ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್‌ ಗ್ಲಾಸ್‌‍ ಹಾಕಿಕೊಂಡು ದರ್ಶನ್‌ ಅವರ ಕರಿಯ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರ ಸ್ಪರ್ಧಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್‌ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್‌್ಸ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಈ ರೀಲ್‌್ಸ ಅನ್ನು ಇನ್‌ಸ್ಟಾ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ.

ಈ ವಿಡಿಯೋ ಗಮನಿಸಿದ ಬಸವೇಶ್ವರ ನಗರ ಪೊಲೀಸರು, ಇಬ್ಬರ ವಿರುದ್ಧ ಆರ್ಮ್ಸೌ ಆಕ್ಟ್‌ ಆಡಿ ಕೇಸ್‌‍ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ರಿಲ್‌್ಸಮಾಡುವುದು, ಭಯದ ವಾತಾವರಣ ಸೃಷ್ಟಿಸೋದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.ಈಗಾಗಲೆ ಇವರಿಗೆ ನೋಟೀಸ್‌‍ ನೀಡಿ ವಿಚಾರಣೆ ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News