ಬೆಳಗಾವಿ, ಜು.24: ಗೋವಾದಲ್ಲಿ ಕನ್ನಡಿಗ ಲಾರಿ ಚಾಲಕನ ಮೇಲೆ ದುಷ್ಕರ್ಮಿಗಳ ಗ್ಯಾಂಗ್‌ನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದ ನಿವಾಸಿ ಅನಿಲ್ ರಾಠೋಡ್ ಹಲ್ಲೆಗೊಳಗಾದ ವ್ಯಕ್ತಿ.
ಲಾರಿ ಚಾಲಕ ಅನಿಲ್ ರಾಠೋಡ್, ಮಹಾರಾಷ್ಟ್ರದಿಂದ ಗೋವಾಕ್ಕೆ ಕಲ್ಲು ಸಾಗಿಸುತ್ತಿದ್ದರು. ಈ ವೇಳೆ ಗೋವಾದ ಪ್ರೆಡ್ನ ಬಳಿಯ ಕಾರು, ಜೀಪ್‌ನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಲಾರಿ ಅಡ್ಡಗಟ್ಟಿ ಗೂಂಡಾಗಿರಿ ಮಾಡಿದ್ದಾರೆ.
ಘಟನೆಯನ್ನು ಲಾರಿ ಚಾಲಕ ಅನಿಲ್ ರಾಠೋಡ್ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಪೆಡ್ಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈವರೆಗೆ ಯಾವುದೇ ರೀತಿ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಗೋವಾದಲ್ಲಿ ಕನ್ನಡಿಗರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ಕನ್ನಡಿಗರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದೆ.ಇದರ ನಡುವೆ ಗೋವಾ ರಾಜ್ಯದ ಮಾಪ್ಲಾಟ್ರಕ್ ಮಾಲೀಕರ ಸಂಘದ ಮುಖಂಡರಾದ ಸಮೀರ್ ಶೆಟ್ಟರ್ ಮತ್ತು ಸುರೇಶ್ ಪಟ್ಟಿಗೇರಿ ಘಟನೆಯನ್ನು ಖಂಡಿಸಿದ್ದಾರೆ.
- ಸುರಂಗ ಮಾರ್ಗಕ್ಕೆ ಗಡ್ಕರಿ ಅನುಮತಿ ನೀಡಿದ್ದಾರೆಂಬುದು ಕೇವಲ ವದಂತಿ : ತೇಜಸ್ವಿ ಸೂರ್ಯ
- ಲಾಲ್ಬಾಗ್ನಲ್ಲಿ ಗುಂಡಿ ತೋಡುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ಸರ್ಕಾರ : ಆರ್.ಅಶೋಕ್
- ಸುರಂಗ ರಸ್ತೆ ವಿರೋಧಿಸಿ ಬಿಜೆಪಿ ಪ್ರತಿಭಟನೆಗೆ ಡಿಕೆಶಿ ತಿರುಗೇಟು
- ರಾಜ್ಯದಲ್ಲಿ ನವೆಂಬರ್ ರಾಜಕೀಯ ಕ್ರಾಂತಿ, ಸಚಿವ ಸತೀಶ್ ಜಾರಕಿಹೊಳಿ ದೆಹಲಿಗೆ ದೌಡು
- 11 ಜಿಲ್ಲೆಗಳ 316 ಕೇಂದ್ರಗಳಲ್ಲಿ ಸಸೂತ್ರವಾಗಿ ನಡೆದ ಕೆ-ಸೆಟ್ ಪರೀಕ್ಷೆ
