Friday, November 22, 2024
Homeರಾಷ್ಟ್ರೀಯ | Nationalಕಾರ್ಗಿಲ್ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ಮುರ್ಮು

ಕಾರ್ಗಿಲ್ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ರಾಷ್ಟ್ರಪತಿ ಮುರ್ಮು

ನವದೆಹಲಿ,ಜು.26– ಕಾರ್ಗಿಲ್ ವಿಜಯ್ ದಿವಸ್ ದೇಶದ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಗೌರವ ಸಲ್ಲಿಸುವ ಸಂದರ್ಭವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

1999 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಗುರುತಿಸಲು ಕಾರ್ಗಿಲ್ ವಿಜಯ್ ದಿವಸ್ ಅನ್ನು ಪ್ರತಿ ವರ್ಷ ಜುಲೈ 26 ರಂದು ಆಚರಿಸಲಾಗುತ್ತದೆ.ಲಡಾಖ್ನಲ್ಲಿ ರಹಸ್ಯವಾಗಿ ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಿ ಪಡೆಗಳನ್ನು ಹಿಮೆಟ್ಟಿಸಲು ಭಾರತೀಯ ಸೇನೆಯು ಉಗ್ರ ಪ್ರತಿದಾಳಿ ನಡೆಸಿತ್ತು.

ಕಾರ್ಗಿಲ್ ವಿಜಯ್ ದಿವಸ್ ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಗೌರವ ಸಲ್ಲಿಸಲು ಕತಜ್ಞರಾಗಿರುವ ರಾಷ್ಟ್ರಕ್ಕೆ ಒಂದು ಸಂದರ್ಭವಾಗಿದೆ ಎಂದು ಮುರ್ಮು ಹಿಂದಿಯಲ್ಲಿ ಎಕ್ಸ್ ಸ ಮಾಡಿದ್ದಾರೆ.

1999 ರಲ್ಲಿ ಕಾರ್ಗಿಲ್ ಶಿಖರಗಳಲ್ಲಿ ಭಾರತಮಾತೆಯನ್ನು ರಕ್ಷಿಸುವಾಗ ಸರ್ವೋಚ್ಚ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನಿಗೆ ನಾನು ಗೌರವ ಸಲ್ಲಿಸುತ್ತೇನೆ ಮತ್ತು ಅವರ ಪವಿತ್ರ ಸರಣೆಗೆ ಗೌರವ ಸಲ್ಲಿಸುತ್ತೇನೆ. ಅವರ ತ್ಯಾಗ ಮತ್ತು ಶೌರ್ಯದಿಂದ ಎಲ್ಲಾ ದೇಶವಾಸಿಗಳು ಸ್ಫೂರ್ತಿ ಪಡೆಯುತ್ತಾರೆ ಎಂದು ನನಗೆ ಖಾತ್ರಿಯಿದೆ. ಜೈ ಹಿಂದ್ ಜೈ ಭಾರತ್! ಎಂದು ಅವರು ಎಕ್ಸ್ ಸನಲ್ಲಿ ಪೋಸ್ಟ್ ಹಾಕಿದ್ದಾರೆ.

RELATED ARTICLES

Latest News