Friday, April 4, 2025
Homeರಾಜ್ಯಕಾರ್ಕಳ ಅತ್ಯಾಚಾರ ಪ್ರಕರಣ : ಸರ್ಕಾರದ ವಿರುದ್ಧ ಸುನೀಲ್‌ ಕುಮಾರ್‌ ಆಕ್ರೋಶ

ಕಾರ್ಕಳ ಅತ್ಯಾಚಾರ ಪ್ರಕರಣ : ಸರ್ಕಾರದ ವಿರುದ್ಧ ಸುನೀಲ್‌ ಕುಮಾರ್‌ ಆಕ್ರೋಶ

ಬೆಂಗಳೂರು,ಆ.24- ಅನ್ಯಕೋಮಿನ ಯುವಕ ಹಿಂದೂ ಯುವತಿಯನ್ನು ಅಪಹರಿಸಿ ಮಧ್ಯದಲ್ಲಿ ಮತ್ತುಭರಿಸಿ ಅತ್ಯಾಚಾರ ನಡೆಸಿರುವುದು ಪೈಶಾಚಿಕ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬದುಕಿದೆಯೇ ಎಂದು ಬಿಜೆಪಿ ಶಾಸಕ ಎಸ್‌‍.ಸುನೀಲ್‌ಕುಮಾರ್‌ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಲು ಬರುವ ಪದಾರ್ಥಗಳನ್ನು ನೀಡಿ ಅತ್ಯಾಚಾರ ಮಾಡುತ್ತಾರೆಂದರೆ ಇದು ಆತಂಕದ ವಿಷಯ. ಹುಬ್ಬಳ್ಳಿ ಘಟನೆ ಮರೆಯುವ ಮುನ್ನ ಮತ್ತೊಂದು ಘಟನೆ ಮರುಕಳಿಸಿದ್ದು, ರಾಜ್ಯದಲ್ಲಿ ಪೊಲೀಸರ ಬಗ್ಗೆ ಭಯ ಇಲ್ಲ. ಹೇಳುವವರು ಕೇಳುವರಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾರ್ಕಳದಲ್ಲಿ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪೈಶಾಚಿಕ ಕೃತ್ಯ. ಯುವತಿಯನ್ನ ಅಮಲು ಬರಿಸಿ ಅತ್ಯಾಚಾರ ಮಾಡುವ ಮಾನಸಿಕತೆ ಇದೆ ಅಂದರೆ ಇದನ್ನು ನಂಬಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಪೊಲೀಸರು ದಿಟ್ಟತನದ ಕ್ರಮ ಕೈಗೊಂಡು ಎಲ್ಲಾ ಆರೋಪಿಗಳನ್ನುಸದೆಬಡೆಯಬೇಕು. ಇದೊಂದು ಲವ್‌ ಜಿಹಾದ್‌ ನ ಮುಂದುವರಿದ ಭಾಗವಾಗಿದೆ. ಪೂರ್ವ ಯೋಜಿತವಾಗಿ ಕೃತ್ಯ ನಡೆಸಲಾಗಿದೆ. ಜಿಲ್ಲಾಡಳಿತ ಮಾನಸಿಕ ಧೈರ್ಯ ನೀಡಬೇಕು ಎಂದು ಮನವಿ ಮಾಡಿದರು.

ಸಂತ್ರಸ್ತ ಯುವತಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಮೇಲಾಟ ನಡೆಯಬಾರದು. ಇದರ ಹಿಂದೆ ಯಾರೇ ಇದ್ದರೂ ಮುಲಾಜಿಲ್ಲದೇ ಬಂಧಿಸಬೇಕು. ಯುವತಿಗೆ ರಕ್ಷಣೆ ನೀಡಬೇಕು ಎಂದರು.
ಇನ್ನು ಮುಂದೆ ಯಾರು ಈ ರೀತಿಯ ಕೃತ್ಯ ಎಸಗಬಾರದು. ಅಂತಹ ಕಠಿಣ ಕ್ರಮ ಕೈಗೊಂಡು ಪೊಲೀಸರು ದಿಟ್ಟತನದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಘಟನೆ ಸಂಬಂಧ ಸ್ಥಳೀಯ ಕಾರ್ಯಕರ್ತರ ಜೊತೆಗೆ ಸಂಪರ್ಕದಲ್ಲಿದ್ದೇನೆ. ನಾವು ಲವ್‌ ಜಿಹಾದ್‌ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ. ಎರಡೂ ಜಿಲ್ಲೆಯ ಕೇಂದ್ರವಾಗಿಸಿಕೊಂಡು ದೊಡ್ಡ ಜನಜಾಗೃತಿ ಕಾರ್ಯಕ್ರಮ ಮಾಡುತ್ತೇವೆ ಎಂದು ತಿಳಿಸಿದರು.

ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಬೇಕಿದೆ. ಅವರನ್ನು ಉಳಿಸಿಕೊಳ್ಳಬೇಕು. ಸಂತ್ರಸ್ತೆಯ ಪೋಷಕರ ಜೊತೆಗೆ ಮಾಡುತ್ತಿದ್ದೇನೆ. ಪೊಲೀಸರು ಹಾಗೂ ಅಧಿಕಾರಿಗಳ ಜೊತೆಗೆ ಬೆಳಗ್ಗೆಯಿಂದಲೇ ಸಂಪರ್ಕದಲ್ಲಿ ಇದ್ದೇನೆ ಎಂದು ಹೇಳಿದರು. ದೆಹಲಿಯಲ್ಲಿ ರಾಜ್ಯಪಾಲರ ವಿರುದ್ಧ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌‍ ತಮ ತಪ್ಪನ್ನ ಮುಚ್ಚಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಕೇಂದ್ರದ ಮೇಲೆ ರಾಜ್ಯಪಾಲರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಲ್‌ಗಳನ್ನ ವಾಪಸ್‌‍ ಕಳಿಸುವ ಪ್ರಕ್ರಿಯೆ ಇದೇ ಮೊದಲೇನು ನಡೆದಿಲ್ಲ. ಈ ಹಿಂದೆ ಅನೇಕ ಬಾರಿ ಈ ರೀತಿಯ ಘಟನೆ ನಡೆದಿದೆ. ಈ ಹಿಂದೆ ರಾಜ್ಯಪಾಲರಾದ ಹಂಸರಾಜ್‌ ಭಾರದ್ವಾಜ್‌ ಅನೇಕ ಬಿಲ್‌ ವಾಪಸ್‌‍ ಕಳಿಸಿದ್ದರು. ಹಂಸರಾಜ್‌ ಭಾರದ್ವಾಜ್‌ ಮಾಡಿದರೆ ತಪ್ಪಲ್ಲ, ದಲಿತ ರಾಜ್ಯಪಾಲ ಗೆಹ್ಲೋಟ್‌ ಮಾಡಿದರೆ ತಪ್ಪೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ದ್ವಂದ್ವ ನೀತಿಯನ್ನು ಬಿಡಬೇಕು. ರಾಜ್ಯದಲ್ಲಿ ಒಬ್ಬ ಮಂತ್ರಿಇಲ್ಲ.ಎಲ್ಲರೂ ದೆಹಲಿಗೆ ಹೋಗಿ ಕುಳಿತಿದ್ದಾರೆ. ದೆಹಲಿಯಲ್ಲಿ ಆಡಳಿತ ನಡೆಸುವುದಲ್ಲ ಕರ್ನಾಟಕದಲ್ಲಿ ಆಡಳಿತ ನಡೆಸಿ ಎಂದು ಸರ್ಕಾರಕ್ಕೆ ಟಾಂಗ್‌ ನೀಡಿದರು.

RELATED ARTICLES

Latest News