*ವಿಧಾನಸಭೆಯಲ್ಲಿ ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ : ಆರ್. ಶೋಕ್ ಆಕ್ರೋಶ
ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಭಿವೃದ್ಧಿಯ ಅಂಶಗಳೇ ಇಲ್ಲ ಶಾಸಕರೇ ಅಭಿವೃದ್ಧಿಗೆ ಹಣ ಇಲ್ಲ. ವಿಧಾನಸಭೆಯಲ್ಲಿ ನೇಣು ಹಾಕಿಕೊಳ್ಳಬೇಕಾಗುತ್ತದೆ ಎಂಬ ಮಟ್ಟದಲ್ಲಿ ಚರ್ಚೆ ಮಾಡುವ ಪರಿಸ್ಥಿತಿ ಬಂದಿದೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. Read Full
*ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯ್ತು ಬಜೆಟ್ ಮೇಲೆ ಚರ್ಚೆ ವೇಳೆ ಸಿಎಂ, ಸಚಿವರು ಗೈರು
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಆರ್.ಅಶೋಕ್ ಬಜೆಟ್ ಮೇಲೆ ಚರ್ಚೆ ಮಾಡುವ ವೇಳೆ ಮುಖ್ಯಮಂತ್ರಿಯಾದಿಯಾಗಿ ಸಚಿವರು ಮತ್ತು ಅಧಿಕಾರಿಗಳ ಮಧ್ಯೆ ಗೈರುಹಾಜರಿ ವ್ಯಾಪಕ ಚರ್ಚೆಗೆ ಗ್ರಾಸವಾಗಿ ಕೆಲಕಾಲ ಗದ್ದಲದ ಸನ್ನಿವೇಶ ಸೃಷ್ಟಿಯಾಯಿತು. Read Full
*ಮುಂದಿನ ವರ್ಷದಿಂದ ರಾಜ್ಯದಲ್ಲಿ ಹೆಚ್ಚುವರಿ ಅದಾಯದ ಬಜೆಟ್ ಮಂಡನೆ : ಸಿಎಂ
ಮುಂದಿನ ವರ್ಷದಿಂದ ರಾಜ್ಯದಲ್ಲಿ ಹೆಚ್ಚುವರಿ ಅದಾಯದ (ರೆನ್ ಸರ್ ಪಾಸ್) ಬಜೆಟ್ ಮಂಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ರಾಜ್ಯದ ಸಾಲದ ಕುರಿತು ಆರೋಪ ಪ್ರತ್ಯಾರೋಪಗಳು ಮಾತಿನ ಚಕಮಕಿ ನಡೆಯಿತು. Read Full
* ನೂತನ ಎಂಜಿನಿಯರಿಂಗ್ ಪಾಲಿಟೆಕ್ನಿಕ್ ಕಾಲೇಜು : ಪರಿಶೀಲನಾ ಸಮಿತಿ ರಚನೆ
ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿಧಾನಸಭೆಗೆ ತಿಳಿಸಿದರು.ಪ್ರಶೋತ್ತರ ವೇಳೆಯಲ್ಲಿ ರಾಘವೇಂದ್ರ ಹಿಟ್ನಾಳ್ ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಒಟ್ಟು 18 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮಂಜೂರಾಗಿವೆ. 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿವೆ ಎಂದರು.
ಅರಸೀಕೆರೆ ಹಾಗೂ ದೇವದುರ್ಗ ಎಂಜಿನಿಯರಿಂಗ್ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾಲೇಜುಗಳ ಕೊಪ್ಪಳ ತಾಲ್ಲೂಕು ಕೇಂದ್ರ ಸ್ಥಾನದಿಂದ ಕ್ರಮವಾಗಿ 69 ಕಿ.ಮೀ. ಹಾಗೂ 42 ಕಿ.ಮೀ. ದೂರದಲ್ಲಿವೆ ಎಂದು ಹೇಳಿದರು.
ಎಂಜಿನಿಯರಿಂಗ್ ಕಾಲೇಜುಗಳನ್ನು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ. 2 ಸಾವಿರ ಹುದ್ದೆಗಳ ಭರ್ತಿಗೆ ಬಜೆಟ್ ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹುದ್ದೆಗಳ ಭರ್ತಿ ನಂತರ ಹೊಸ ಕಾಲೇಜು ಪ್ರಾರಂಭಿಸುವ ಬಗ್ಗೆ ಯೋಚಿಸಲಾಗುವುದು ಎಂದರು.
* 7 ಸರ್ಕಾರಿ ಪಿಯು ಕಾಲೇಜು ಆರಂಭಕ್ಕೆ ಪ್ರಸ್ತಾವ : ಮಧು ಬಂಗಾರಪ್ಪ
ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ 7 ಸರ್ಕಾರಿ ಪ್ರೌಢಶಾಲೆಗಳನ್ನು ಉನ್ನತೀಕರಿಸಿ ಹೊಸದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ವಿಧಾನಸಭೆಗೆ ತಿಳಿಸಿದರು. Read Full
* 1032 ಔಷಧಿಗಳ ಉಚಿತ ಪೂರೈಕೆಗೆ ಕ್ರಮ : ದಿನೇಶ್ ಗುಂಡೂರಾವ್
ರಾಜ್ಯದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ 1,032 ಔಷಧಿಗಳನ್ನು ಖರೀದಿಸಿ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. Read Full
*ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ವಿಪಕ್ಷಗಳ ತರಾಟೆ
ಬೆಂಗಳೂರು,ಮಾ.13- ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ಸದಸ್ಯರ ನೇಮಕಾತಿ ಮಾಡಿರುವ ನಿರ್ಧಾರ ವಿಧಾನಸಭೆಯಂತೆ ವಿಧಾನ ಪರಿಷತ್ತಿನಲ್ಲೂ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಕೆಲಕಾಲ ಭಾರೀ ಮಾತಿನ ಚಕಮಕಿ ಹಾಗೂ ಗದ್ದಲ ಉಂಟಾದ ಪ್ರಸಂಗ ಜರುಗಿತು. ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ನ ಟಿ.ಎ ಶರವಣ ಅವರು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದರು. ಅವರ ಪರವಾಗಿ ಸಭಾನಾಯಕ ಬೋಸರಾಜು ಅವರು ಉತ್ತರಿಸಲು ಮುಂದಾಗಿದ್ದರು.
ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಿ ಸರ್ಕಾರದ ನಿರ್ಧಾರವನ್ನು ಬಲವಾಗಿ ಸಮರ್ಥನೆ ಮಾಡಿಕೊಂಡರು. ನೀವು ಕೆಳಮನೆಯಲ್ಲಿ ಮಾಡಿದ ರಾಜಕಾರಣವನ್ನೇ ಇಲ್ಲಿಯೂ ಮಾಡಲು ಹೊರಟಿದ್ದೀರಿ. ನೀವು ರಾಜಕಾರಣ ಮಾಡುವುದಾದರೆ ನಮ ಅಭ್ಯಂತರವಿಲ್ಲ. ನಾವು ಕೂಡಾ ರಾಜಕಾರಣ ಮಾಡುತ್ತೇವೆ. ನಿಮ ಪ್ರತಿಭಟನೆಗೆ ನಾವು ಸೊಪ್ಪು ಹಾಕುವುದಿಲ್ಲ ಎಂದು ತಿರುಗೇಟು ನೀಡಿದರು.ಇದಕ್ಕೆ ತಿರುಗೇಟು ಕೊಟ್ಟ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ನಿಮಗೆ ಜನರೇ ಸೊಪ್ಪು ಹಾಕತ್ತಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳಿ ಎಂದರು. ಆಗ ಕಾಂಗ್ರೆಸ್ ನ ಬಲ್ಕೀಶ್ ಭಾನು, ಉಪ ಚುನಾವಣೆಯಲ್ಲಿ ರಾಜ್ಯದ ಜನತೆ ನಿಮಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಇದಕ್ಕೂ ಮುನ್ನ ಬೋಸರಾಜು ಅವರು, ಒ2ಒ ಮೀಡಿಯಾ ನೆಟ್ವರ್ಕ್ ಗೆ ಕೊಡಲಾಗಿದೆ. ಗ್ಯಾರಂಟಿಗಳ ಮೌಲ್ಯಮಾಪನಕ್ಕೆ ಮುಂಬೈ ಮೂಲದ ಕಂಪನಿಗೆ ನೀಡಲಾಗಿದೆ. ಯಾವುದೇ ಶುಲ್ಕ ಫೀಸ್ ಇಲ್ಲದೆ ಅಜೀಂ ಪ್ರೇಮ್ ಜಿ ಸೇರಿದಂತೆ ಹಲವು ಸಂಸ್ಥೆ ಮಾಡಿಕೊಡುತ್ತಿದೆ. ಕೆಟಿಪಿಸಿ ಕಾಯ್ದೆ ವಿನಾಯಿತಿಯಲ್ಲಿ ಟೆಂಡರ್ ಕೊಡಲಾಗಿದೆ. 4 ಜಿ ಅಡಿಯಲ್ಲಿ ಟೆಂಡರ್ ನೀಡಿದ್ದೇವೆ ಎಂದು ಹೇಳಿದರು.
ಎಂ 2 ಎಂ ಸಂಸ್ಥೆಗೆ ಮಹಿಳಾ ಮಕ್ಕಳ ಇಲಾಖೆಯಿಂದ 29.50 ಲಕ್ಷ, ಆಹಾರ ಪೂರೈಕೆ ಇಲಾಖೆಯಿಂದ 29.50 ಲಕ್ಷ, ಸಾರಿಗೆ ಇಲಾಖೆಯಿಂದ 26.50 ಲಕ್ಷ, ಇಂಧನ ಇಲಾಖೆಯಿಂದ 25.366 ಲಕ್ಷ ಪಾವತಿಸಲಾಗಿದೆ ಎಂದು ಬೋಸರಾಜು ಅವರು ಉತ್ತರವನ್ನೇ ಓದುತ್ತಿದ್ದರು. ನಾನು ಉತ್ತರ ನೋಡಿದ್ದೇನೆ, ನಾವು ಕೇಳಿರೋ ಮಾಹಿತಿ ಕೊಡಿ ಎಂದು ಶರಣಣ ಆಗ್ರಹ ಮಾಡಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಗೃಹಲಕ್ಷಿ ಯೋಜನೆ ಅತ್ತೆ, ಸೊಸೆಗೆ ಜಗಳ ತಂದಿಡ್ತಿದ್ದೀರಿ ಎಂದು ಆರೋಪ ಮಾಡಿದರು. ಗ್ಯಾರಂಟಿಯಿಂದ ರಾಜ್ಯಕ್ಕೆ ನಷ್ಟ ಎಂದು ಬಿಜೆಪಿ ನಾಯಕರು ಹೇಳಿದರು. ಹಣ ಸರಿಯಾಗಿ ಜನರಿಗೆ ಹೋಗುತ್ತೀದಿಯೇ ಎಂಬುದನ್ನು ತಿಳಿಯಲು ಕೆಲ ಏಜೆನ್ಸಿಗಳಿಗೆ ನೀಡಿದ್ದೇವೆ. ಅದಕ್ಕೆ ಇಂತಿಷ್ಟು ಹಣ ಮೀಸಲಿಡಬೇಕು. ಅನುಷ್ಠಾನಕ್ಕೆ ಕಾರ್ಯಕರ್ತರನ್ನ ನೇಮಕ ಮಾಡಿದ್ದೇವೆ. ಅವರಿಗೆ ವೇತನ ಕೂಡ ಕೊಡುತ್ತಿದ್ದೇವೆ. ಅದಕ್ಕೆ ವಿಧಾನಸಭೆಯಲ್ಲಿ ನಿಮ ಶಾಸಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.
ಡಿಸಿಎಂ ಅವರ ಉತ್ತರಕ್ಕೆ ಆಕ್ರೋಶ ಹೊರ ಹಾಕಿದ ವಿಪಕ್ಷಗಳ ಸದಸ್ಯರು ಎದ್ದು ಜನರ ತೆರಿಗೆ ಹಣ ಯಾಕೆ ಸಂಬಳವಾಗಿ ಕೊಡುತ್ತಿದ್ದೀರಿ ಎಂದರು.ಸರ್ಕಾರದ ಹಣ ಕಾಂಗ್ರೆಸ್ ಕಾರ್ಯಕರ್ತರಿಗೆ ಏಕೆ ಗ್ಯಾರಂಟಿ ಜನರಿಗೆ ಕೊಡಿ, ಕಾಂಗ್ರೆಸ್ ಕಾರ್ಯಕರ್ತರಿಗಲ್ಲ ಎಂದು ಆಕ್ರೋಶ ಹೊರಹಾಕಿದರು. ಸಮರ್ಪಕ ಉತ್ತರ ಇಲ್ಲ ಎಂದು ಬಾವಿಗಿಳಿಯಲು ಮುಂದಾದ ಬಿಜೆಪಿ, ಜೆಡಿಎಸ್ ಸದಸ್ಯರು ಮುಂದಾದರು.
ಈ ವೇಳೆ ಶಿವಕುಮಾರ್, ನಿಮ ರಾಜಕಾರಣ ನೀವು ಮಾಡಿ, ನಮ ರಾಜಕಾರಣ ನಾವು ಮಾಡುತ್ತೇವೆ. ಯೋಜನೆ ಸರಿಯಾದ ರೀತಿ ಅನುಷ್ಠಾನಕ್ಕೆ ಕಾರ್ಯಕರ್ತರಿಗೆ ಸಂಬಳ ಕೊಟ್ಟು ಪರಿಶೀಲಿಸುತ್ತಿದ್ದೇವೆ ಎಂದು ಅಬ್ಬರಿಸಿದರು. ಈ ಮಾತಿನಿಂದ ರೊಚ್ಚಿಗೆದ್ದ ಬಿಜೆಪಿ ಸದಸ್ಯರು, ಅಧಿಕಾರಿಗಳ ಕೆಲಸ ಏನು ಯಾಕಾಗಿ ಇದ್ದಾರೆ ಜನರ ತೆರಿಗೆ ಹಣ ಹೇಗೆ ಈ ರೀತಿ ಕಾರ್ಯಕರ್ತರಿಗೆ ಕೊಡುತ್ತೀರಿ ಎಂದರು. ಸರ್ಕಾರದ ಖಜಾನೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೇಗೆ ಹಣ ಕೊಡ್ತೀರಿ ಎಂದ ರವಿಕುಮಾರ್ ಪ್ರಶ್ನೆ ಮಾಡಿದರು.ನಿಮ ಮಾತಿಗೆಲ್ಲ ಸೊಪ್ಪು ಹಾಕಲ್ಲ ಎಂದ ಡಿಸಿಎಂ ಹೇಳಿದರೆ, ನೀವು ಸೊಪ್ಪು ಹಾಕದಿದ್ದರೆ. ಜನರು ಹಾಕ್ತಾರೆ ಎಂದು ಭಾರತಿ ಶೆಟ್ಟಿ ಹೇಳಿದರು.
ಆಗ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯನಸ್ವಾಮಿ ಅವರು, ಕಾಂಗ್ರೆಸ್ ಕಾರ್ಯಕರ್ತರ ಅನುಷ್ಠಾನ ಸಮಿತಿ ರದ್ದು ಮಾಡಬೇಕು. ನೀವು ಏಜೆನ್ಸಿಗಳಿಗೆ ಕೊಟ್ಟ ಮೇಲೆ, ಅನುಷ್ಠಾನ ಸಮಿತಿ ಯಾಕೆ. ಅವರಿಗೆ ಸಂಬಳ ಕೊಟ್ಟು, ಜನರಿಂದ ಮಾಹಿತಿ ಪಡೆಯೋದು ಏನಿದೆ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿದ ಶರವಣ ಗ್ಯಾರಂಟಿ ಯೋಜನೆ ಮೌಲ್ಯ ಮಾಪನದ ಹೆಸರಲ್ಲಿ ಲಕ್ಷ ಲಕ್ಷ ಬಿಲ್ ಆಗಿದೆ. ಐದು ಗ್ಯಾರಂಟಿ ಯೋಜನೆಗಳ ಮೌಲ್ಯ ಮಾಪನ ಮಾಡಲು ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದೆ. ಎಂ 2 ಎಂ ಮೀಡಿಯಾ ನೆಟವರ್ಕ್ ಕಂಪನಿಗೆ ಮೌಲ್ಯ ಮಾಪನ ಜವಾಬ್ದಾರಿಯನ್ನು ಕೊಡಲಾಗಿದೆ.
ಸಂಸ್ಥೆಗೆ ಐದು ಗ್ಯಾರಂಟಿ ಹೆಸರಲ್ಲಿ ನಾಲ್ಕು ಪ್ರತ್ಯೇಕ ಇಲಾಖೆಯಿಂದ ಬಿಲ್ ಪಾವತಿಯನ್ನು ಮಾಡಲಾಗಿದೆ. ಮಹಿಳಾ ಕಲ್ಯಾಣ ಇಲಾಖೆಯಿಂದ 29.5 ಲಕ್ಷ, ಆಹಾರ ಇಲಾಖೆಯಿಂದ 29.5 ಲಕ್ಷ, ಸಾರಿಗೆ ಇಲಾಖೆ ಯಿಂದ 26.5 ಲಕ್ಷ,ಇಂಧನ ಇಲಾಖೆಯಿಂದ 25.36 ಲಕ್ಷ ಪಾವತಿ ಮಾಡಲಾಗಿದೆ. ಮೌಲ್ಯಮಾಪನ ಮಾಡುವ ಇನ್ನೊಂದು ಸಂಸ್ಥೆ ರೈಟ್ ಟು ಪೀಪಲ್ಸ್ ಸಂಸ್ಥೆಗೆ ಒಂದು ವರ್ಷಕ್ಕೆ 1.03 ಕೋಟಿ ವೆಚ್ಚ ಪಡೆಯಲು ಸರ್ಕಾರದಿಂದ ಅವಕಾಶ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿದಾಗ ಬಿಜೆಪಿ ಸದಸ್ಯರು ಜೆಡಿಎಸ್ ಸದಸ್ಯರಿಂದ ತೀವ್ರ ಆಕ್ಷೇಪವಾಯಿತು ಎಂದು ಹೇಳಿದರು.
*ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸುವ ಉದ್ದೇಶ ಇಲ್ಲ : ಸುಧಾಕರ್
ಬೆಂಗಳೂರು,ಮಾ.13- ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವ ಉದ್ದೇಶವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಕೆ.ಗೋಪಾಲಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಸ್ತಿತ್ವದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಮೂಲಸೌಲಭ್ಯ ಒದಗಿಸಿ ಬಲವರ್ಧನೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದರು. ಬೇಡಿಕೆಗನುಗುಣವಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸಮಿತಿ ರಚಿಸಲಾಗುವುದು. ಸಮಿತಿ ವರದಿಯಂತೆ ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 14 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಲ್ಲ. ಹೋಬಳಿ ಮಟ್ಟದಲ್ಲಿ ಕಾಲೇಜು ಪ್ರಾರಂಭ ಮಾಡಿದ್ದು ಕೆಲವೆಡೆ ಅವೈಜ್ಞಾನಿಕವಾಗಿದೆ. ತಾಲ್ಲೂಕು ಮಟ್ಟದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದ್ದರೆ ಗುಣಾತಕ ಹಾಗೂ ಸ್ಪರ್ಧಾತಕ ಶಿಕ್ಷಣ ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಪ್ರವೇಶಾತಿ ಕಡಿಮೆ ಇರುವ ಕಾಲೇಜುಗಳನ್ನು ಬೇಡಿಕೆ ಇರುವ ಕಡೆ ಸ್ಥಳಾಂತರ ಮಾಡಲು ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಪಕ್ಷ1 ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇರಬೇಕೆಂಬ ಸರ್ಕಾರದ ನೀತಿ ಇಲ್ಲ. ಈಗಿರುವ ಕಾಲೇಜುಗಳಿಗೆ ಬೋಧಕರನ್ನು ಕೊಡಬೇಕು. ಅದಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಗೋಪಾಲಯ್ಯ, 10 ಕೋಟಿ ರೂ. ವೆಚ್ಚದಲ್ಲಿ 40 ಕೊಠಡಿಗಳನ್ನು ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ನಿರ್ಮಿಸಲಾಗಿದೆ. ಸುಮಾರು 4 ಸಾವಿರ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಟ್ಟಡವಿದೆ. ವೃತ್ತಿಪರ ಕಾಲೇಜನ್ನಾದರೂ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.ಜೆಡಿಎಸ್ ಶಾಸಕ ಹರೀಶ್‌ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುಣಸೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿಯನ್ನು ರಚಿಸಿ ಅನುಮೋದನೆ ನೀಡಲಾಗಿದೆ ಎಂದರು.
ಈ ಸಮಿತಿಯು ಕಟ್ಟಡ, ಪೀಠೋಪಕರಣ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆಗೆ ಸಂಬಂಧಿಸಿದಂತೆ ಸಂಪನೂಲ ಸಂಗ್ರಹಣೆ, ಇನ್ನಿತರ ರಚನಾತಕ ಕಾರ್ಯಕ್ರಮಗಳನ್ನು ಹಮಿಕೊಳ್ಳುವುದರ ಜೊತೆಗೆ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಹೇಳಿದರು.
*ತುಮಕೂರು ಜಿಲ್ಲಾಸ್ಪತ್ರೆ ಮರುನಿರ್ಮಾಣಕ್ಕೆ ಸರ್ಕಾರ ಬದ್ಧ :ದಿನೇಶ್
ಬೆಂಗಳೂರು,ಮಾ.13- ತುಮಕೂರು ಜಿಲ್ಲಾ ಆಸ್ಪತ್ರೆಯನ್ನು ಹೊಸದಾಗಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತುಮಕೂರು ಜಿಲ್ಲಾಸ್ಪತ್ರೆಯ ಹಳೆಯ ಕಟ್ಟಡವನ್ನು 1948 ರಲ್ಲಿ ನಿರ್ಮಿಸಲಾಗಿದ್ದು, ಈ ಕಟ್ಟಡವು ಶಿಥಿಲಾವಸ್ಥೆಯಲ್ಲಿದೆ. ಉಪಯೋಗಿಸಲು ಸಾಧ್ಯವಿಲ್ಲ. ಕಟ್ಟಡವನ್ನು ನಿಯಮಾನುಸಾರ ನೆಲಸಮ ಮಾಡಬಹುದೆಂದು ಲೋಕೋಪಯೋಗಿ ಇಲಾಖೆ ತುಮಕೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಷರತ್ತು ಮಾಡಿದ್ದಾರೆ ಎಂದರು.
ತುಮಕೂರು ಜಿಲ್ಲೆಯ ಗಣಿಬಾಧಿತ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ತುಮಕೂರು ಜಿಲ್ಲಾಸ್ಪತ್ರೆಗೆ ಸಂಬಂಧಿಸಿದಂತೆ ಜಿಲ್ಲಾಮಟ್ಟದ ಸಮಿತಿಯು ಅನುಮೋದಿಸಿರುವ ಮಟ್ಟಕ್ಕೆ ಅನುಗುಣವಾಗಿ ಕೆಎಂಇಆರ್‌ಸಿ ಸಂಸ್ಥೆಗೆ ಕ್ರಿಯಾಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
62 ಹೊಸ ತಾಲ್ಲೂಕುಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ವೃದ್ಧಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಆರೋಗ್ಯ ಇಲಾಖೆಯಲ್ಲಿ 120 ತಜ್ಞ ವೈದ್ಯರು, 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಸಹಮತ ನೀಡಿದೆ. ನಿಯಮಾನುಸಾರ ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇಲಾಖೆಯಲ್ಲಿ 337 ತಜ್ಞ ವೈದ್ಯರು ಹಾಗೂ 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಕೆಲವೊಂದು ಷರತ್ತುಗಳಿಗೆ ಒಳಪಡಿಸಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.
1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹಾಗೂ 300 ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅನುಮೋದನೆ ದೊರೆತಿದೆ. ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು.ಹೊಸ ತಾಲ್ಲೂಕುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದರು.ಆಡಳಿತ ಪಕ್ಷದ ಶಾಸಕ ಸಂಗಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, ಹೊಸ 9 ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಭದ್ರಾವತಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 150 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಇದಕ್ಕೆ ಅನುದಾನವೂ ಹೆಚ್ಚಾಗಿ ಬೇಕಾಗುತ್ತದೆ ಎಂದು ತಿಳಿಸಿದರು.
*ವಿದೇಶಿ ಪ್ರವಾಸಿಗರಿಗೆ ಸೂಕ್ತ ರಕ್ಷಣೆ : ಶಾಸಕರ ಆಗ್ರಹ
ಬೆಂಗಳೂರು,ಮಾ.13- ಹಂಪಿ ಬಳಿಯ ಆನೆಗುಂದಿಯಲ್ಲಿ ವಿದೇಶಿ ಪ್ರವಾಸಿಯ ಮೇಲೆ ಮಾನಭಂಗ ಹಾಗೂ ಕೊಲೆ ಯತ್ನ ನಡೆದಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ಬಾಬು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು.ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಕೊಡದಿದ್ದರೆ ಹೇಗೆ?, ರಾಜ್ಯದಲ್ಲಿ ಅನೇಕ ಪ್ರವಾಸಿತಾಣಗಳಿವೆ. ವರ್ಷಕ್ಕೆ 4 ತಿಂಗಳಲ್ಲಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇವರಿಗೆ ಸೂಕ್ತ ರಕ್ಷಣೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
*ಸದನದಲ್ಲಿ ಮಾರ್ದನಿಸಿದ ಕಸ ವಿಲೇವಾರಿ ವಿಚಾರ
ಬೆಂಗಳೂರು,ಮಾ.13- ನಗರದ ಕಸ ವಿಲೇವಾರಿ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು.ಶೂನ್ಯ ವೇಳೆಯಲ್ಲಿ ಬಿಜೆಪಿ ಹಿರಿಯ ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ವಿಷಯ ಪ್ರಸ್ತಾಪಿಸಿ ಕಣ್ಣೂರು ಮತ್ತು ಮಿಟಗನಹಳ್ಳಿಯಲ್ಲಿ ಕಸ ವಿಲೇವಾರಿಯಾಗದೆ 500 ಲಾರಿಗಳು ನಿಂತಿವೆ. ಕಸ ತುಂಬಿದ ಲಾರಿಗಳು ಕಸ ಸುರಿಯಲಾಗುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ ಎಂದು ಆ ಭಾಗದ ಜನರು ಅಡ್ಡಿಪಡಿಸುತ್ತಿದ್ದಾರೆ ಎಂದು ಗಮನ ಸೆಳೆದರು.
ಮತ್ತೊಬ್ಬ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ನಗರದಲ್ಲಿ ಬ್ಲಾಕ್‌ಸ್ಪಾಟ್ ಇಲ್ಲ ಎಂದು ಸರ್ಕಾರ ಉತ್ತರ ನೀಡಿದೆ. ಆದರೆ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಎಲ್ಲಿ ನೋಡಿದರೂ ಕಸ ಬಿದ್ದಿರುವುದು ಕಂಡುಬರುತ್ತದೆ. 5,500 ಸಾವಿರ ಟನ್ ಕಸ ವಿಲೇವಾರಿಯಾಗುತ್ತಿಲ್ಲ. ಇದರಿಂದ ಕೆಲವೆಡೆ ಗಲಾಟೆಯಾಗುತ್ತಿದೆ ಎಂದು ಗಮನ ಸೆಳೆದರು.ಇದಕ್ಕೆ ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸುವುದಾಗಿ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಹೇಳಿದರು.
*ಮಹಿಳೆ ಆತಹತ್ಯೆ : ಮೈಕ್ರೋ ಫೈನಾನ್‌್ಸ ವಿರುದ್ಧ ಕ್ರಮಕ್ಕೆ ಒತ್ತಾಯ
ಬೆಂಗಳೂರು,ಮಾ.13- ಮೈಕ್ರೋ ಫೈನಾನ್‌್ಸನವರು ಸಾಲ ವಸೂಲಾತಿಗೆ ಒತ್ತಾಯ ಮಾಡಿದ್ದರಿಂದ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಹಳ್ಳಿಯೂರಿನ ಮಹಿಳೆಯೊಬ್ಬರು ಆತಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೈಕ್ರೋ ಫೈನಾನ್‌್ಸ ಸಂಸ್ಥೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಸಿಮೆಂಟ್ ಮಂಜು ವಿಧಾನಸಭೆಯಲ್ಲಿಂದು ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, 50 ವರ್ಷದ ಕೆಂಚಮ ಎಂಬ ಮಹಿಳೆ ಆತಹತ್ಯೆ ಮಾಡಿಕೊಂಡಿದ್ದಾರೆ. ಸಾಲ ನೀಡಿದ ಮೈಕ್ರೋ ಫೈನಾನ್‌್ಸನವರು ಮನೆ ಮುಂದೆ ಬಂದು ಗಲಾಟೆ ಮಾಡಿದ್ದಾರೆ. ಅಕ್ಕಪಕ್ಕದವರಿಗೆಲ್ಲಾ ಗೊತ್ತಾಗಿದೆ ಎಂದು ಮನನೊಂದು ಮನೆಹಿಂದೆ ಹೋಗಿ ಆತಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರ ಇಂಥವರ ರಕ್ಷಣೆಗೆ ಕಾನೂನು ತಂದಿದ್ದರೂ ಇಂತಹ ಘಟನೆ ಮರುಕಳಿಸುತ್ತಿವೆ. ಈ ಸಂಬಂಧ ಇನ್ನೂ ಹೆಚ್ಚಿನ ಗಮನ ಹರಿಸಬೇಕು.ಮೈಕ್ರೋ ಫೈನಾನ್‌್ಸ ಸಂಸ್ಥೆ ಮೇಲೆ ಸೂಕ್ತ ಕ್ರಮ ವಹಿಸಬೇಕೆಂದು ಸೂಚಿಸಿದರು.
*ರಾಯಚೂರು -ಮಾನ್ವಿಗೆ ನೀರು ಬಿಡಲು ಮನವಿ
ಬೆಂಗಳೂರು,ಮಾ.13- ತುಂಗಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಬಿಡುವ ನೀರು ರಾಯಚೂರು ಹಾಗೂ ಮಾನ್ವಿ ತಾಲ್ಲೂಕಿಗೆ ಬರುತ್ತಿಲ್ಲ ಎಂದು ಶಾಸಕ ಶಿವರಾಜ್ ಪಾಟೀಲ್ ವಿಧಾನಸಭೆಯ ಗಮನ ಸೆಳೆದರು. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಜಲಾಶಯದಿಂದ ಕಾಲುವೆಗೆ ನೀರು ಬಿಟ್ಟರೂ ನೀರು ಬರುತ್ತಿಲ್ಲ. ಮೇಲ್ಭಾಗದ ಜನರಿಂದ ತೊಂದರೆಯಾಗುತ್ತಿದೆ. ಬೇಸಿಗೆ ಬಿಸಿಲು ತೀವ್ರವಾಗುತ್ತಿದೆ, ನೀರಿನ ಅಭಾವ ಹೆಚ್ಚಾಗಿದೆ. ಈ ಸಂಬಂಧ ಮುಖ್ಯ ಎಂಜಿನಿಯರರು ಹಾಗೂ ಪ್ರಾದೇಶಿಕ ಆಯುಕ್ತರಿಗೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
*ಬೀದಿನಾಯಿಗಳ ಹಾವಳಿ : ಕೆಳಮನೆಯಲ್ಲಿ ಪ್ರತಿಧ್ವನಿ
ಬೆಂಗಳೂರು,ಮಾ.13- ನಗರದಲ್ಲಿ ಬೀದಿ ನಾಯಿಗಳಿಂದಾಗುತ್ತಿರುವ ತೊಂದರೆಯ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು.ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್‌ರೆಡ್ಡಿ ವಿಷಯ ಪ್ರಸ್ತಾಪಿಸಿ, ಬೀದಿನಾಯಿಗಳ ಹಾವಳಿಯಿಂದ ತೊಂದರೆಯಾಗುತ್ತಿದೆ. ಸನ್‌ಸಿಟಿ ಅಪಾರ್ಟ್‌ಮೆಂಟ್‌ನ 18ನೇ ಮಹಡಿಗೆ ಬೀದಿನಾಯಿಗಳನ್ನು ಮಹಿಳೆಯೊಬ್ಬರು ಕರೆದೊಯ್ದಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ. ಬಿಬಿಎಂಪಿ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ. ಆ ನಾಯಿಗಳು ಅಪಾರ್ಟ್‌ಮೆಂಟ್‌ನಿಂದ ಹೊರಹೋಗಬೇಕು. ಬೀದಿನಾಯಿಗಳ ನಿರ್ವಹಣೆಗೆ 5 ಕೋಟಿ ರೂ. ಬಜೆಟ್ ಇರುತ್ತದೆ. ಈ ಸಂಬಂಧ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿಗೆ ಸ್ಪಷ್ಟ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಮಧ್ಯಪ್ರವೇಶಿಸಿದ ವಿರೋಧಪಕ್ಷದ ನಾಯಕ ಆರ್.ಅಶೋಕ್, ವಿಧಾನಸಭೆಯ ಸುತ್ತಮುತ್ತ 1500 ನಾಯಿಗಳಿರುವ ಬಗ್ಗೆ ಸಭಾಧ್ಯಕ್ಷರು ಸಭೆ ನಡೆಸಿದ್ದಾರೆ. ಬೀದಿನಾಯಿಗಳೆಲ್ಲಾ ಬೀದಿಯಲ್ಲೇ ಇರಲಿ, ಅಪಾರ್ಟ್‌ಮೆಂಟ್‌್ಸಗೆ ಬರುವುದು ಬೇಡ ಎಂದರು.ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಬೀದಿನಾಯಿಗಳಿಗೆ ಗೌರವಪೂರ್ವಕ ಬದುಕು ಕೊಡಬೇಕೆಂಬ ಉದ್ದೇಶದಿಂದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ ಎಂದರು.
ಬಿಜೆಪಿಯ ಮತ್ತೊಬ್ಬ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಬೀದಿನಾಯಿಗಳಷ್ಟೇ ಅಲ್ಲ, ನಾಗರಹಾವೂ ಬಂದಿದೆ ಎಂದು ಗಮನ ಸೆಳೆದರು.ಆಗ ಸಭಾಧ್ಯಕ್ಷರು ನಾಯಿಯಷ್ಟೇ ಅಲ್ಲ, ನಾಗರಹಾವೂ ಇರಬೇಕು, ನಿಧಿ ಕಾಯುವುದು ನಾಗರಹಾವೇ ಎಂದು ಹೇಳಿದರು.ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೊಮನಹಳ್ಳಿ ಭಾಗದಲ್ಲಿ ಶಾಸಕ ಸತೀಶ್‌ರೆಡ್ಡಿಯವರಿಗೆ ಗೊತ್ತಿಲ್ಲದೆ ನಾಯಿ ಕೂಡ ಅಲ್ಲಾಡುವುದಿಲ್ಲ. ಅಪಾರ್ಟ್‌ಮೆಂಟ್‌ಗೆ ಸೆಕ್ಯೂರಿಟಿ ಇರುತ್ತಾರೆ, ಕಾಂಪೌಂಡ್ ಇರುತ್ತದೆ, ಹೇಗೆ ಬಿಟ್ಟರು? ಎಂದು ಪ್ರಶ್ನಿಸಿದರಲ್ಲದೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಹೇಳಿದರು.
*ಸರ್ಕಾರಿ ಪದವಿ ಕಾಲೇಜುಗಳ 412 ಪ್ರಾಂಶುಪಾಲರ ಹುದ್ದೆ ಖಾಲಿ
ಬೆಂಗಳೂರು,ಮಾ.13- ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಗೆ ಮಂಜೂರಾಗಿರುವ 412 ಪ್ರಾಂಶುಪಾಲರ ಹುದ್ದೆಗಳು ಸಂಪೂರ್ಣ ಖಾಲಿ ಇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ವಿಜಯನಗರ ಕ್ಷೇತ್ರದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆ ಕೇಳಿ, ಪ್ರಾಂಶುಪಾಲ ಹುದ್ದೆಗಳ ಕೊರತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅರೆಕಾಲಿಕ ಮತ್ತು ಅತಿಥಿ ಉಪನ್ಯಾಸಕರುಗಳಿಂದ ಸರ್ಕಾರಿ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಶಿಕ್ಷಣದ ಗುಣಮಟ್ಟ ತಗ್ಗುತ್ತಿದೆ. ಸರ್ಕಾರ ಮದರಸಾಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಔಪಚಾರಿಕ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉತ್ತರ ನೀಡಿದ ಸಚಿವ ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಇಲಾಖೆಗೆ 440 ಸರ್ಕಾರಿ ಪದವಿ ಕಾಲೇಜುಗಳು ಬರುತ್ತವೆ. ಅವುಗಳಲ್ಲಿ 412 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿವೆ. ಅವು ಪೂರ್ತಿ ಖಾಲಿ ಉಳಿದಿವೆ ಎಂದರು.
2022ರಲ್ಲಿ 310 ಪ್ರಾಂಶುಪಾಲರ ಹುದ್ದೆಗಳಿಗೆ ಸ್ಪರ್ಧಾತಕ ಪರೀಕ್ಷೆ ನಡೆಸಿ ನಿಯಮಾನುಸಾರ ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗಿತ್ತು. ಆದರೆ ಕೆನೆಪದರ ಪದ್ಧತಿಯಲ್ಲಿನ ಗೊಂದಲದಿಂದಾಗಿ ಮತ್ತು ಕಂದಾಯ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಿಂದ ದಾಖಲಾತಿಗಳನ್ನು ಒದಗಿಸುವ ಗೊಂದಲದಿಂದ ನೇಮಕಾತಿ ಪ್ರಕ್ರಿಯೆ ನೆನೆಗುದಿಯಲ್ಲಿದೆ ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ 2000 ಬೋಧಕರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದಾರೆ. ಅವುಗಳಿಗೆ ಶೀಘ್ರವೇ ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬೋಧಕರನ್ನು ಬೇರೆಬೇರೆ ಹುದ್ದೆಗಳಿಗೆ ನಿಯೋಜನೆ ಮೇಲೆ ಕಳುಹಿಸಲು ನನ್ನ ಮೇಲೆ ಭಾರೀ ಒತ್ತಡವಿದೆ. ಅದಕ್ಕೆ ನಾನು ಅವಕಾಶ ನೀಡುತ್ತಿಲ್ಲ. ಇದಕ್ಕಾಗಿ ಬಹಳಷ್ಟು ಮಂದಿ ಶಾಸಕರು, ಸಂಸದರು ನನ್ನ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಸಚಿವರು ತಿಳಿಸಿದರು. ಶಾಸಕ ಜಿ.ಟಿ.ದೇವೇಗೌಡ, ತಾವು ಸಚಿವರಿದ್ದಾಗ 396 ಹುದ್ದೆಗಳಿಗೆ ಪ್ರಾಂಶುಪಾಲರನ್ನು ನೇಮಿಸಲು ಅನುಮೋದನೆ ನೀಡಲಾಗಿತ್ತು. ಅವುಗಳನ್ನು ಶೀಘ್ರವೇ ಆಯ್ಕೆ ಮಾಡಿ ಎಂದು ತಿಳಿಸಿದರು.1292 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಒಂದೇ ದಿನ ಕೌನ್ಸಿಲಿಂಗ್ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ರಾಜ್ಯಸರ್ಕಾರ ಸರ್ಕಾರಿ ಕಾಲೇಜುಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಿದೆ ಎಂದರು.
*ತಾರಾನಾಥ ಆಯುರ್ವೇದ ಕಾಲೇಜು
ಬೆಂಗಳೂರು,ಮಾ.13- ಬಳ್ಳಾರಿಯ ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದಲ್ಲಿರುವ ಸಿಬ್ಬಂದಿಗಳ ಕೊರತೆ ನೀಗಿಸಲು ವಿಶೇಷ ಭತ್ಯೆಯೊಂದಿಗೆ ನೇಮಕಾತಿ ಕೈಗೊಳ್ಳಲು ಕ್ರಮ ತೆಗೆದುಕೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.ಗಂಗಾವತಿಯ ಶಾಸಕ ಜನಾದರ್ನ ರೆಡ್ಡಿ ಪ್ರಶ್ನೆ ಕೇಳಿ ಕಲ್ಯಾಣ ಕರ್ನಾಟಕದ 15 ಜಿಲ್ಲೆಗಳಿಗೆ ಬಳ್ಳಾರಿಯಲ್ಲಿರುವುದು ಒಂದೇ ಒಂದು ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯ. ಅಲ್ಲಿ ಸಿಬ್ಬಂದಿ ಹಾಗೂ ಬೋಧಕರ ಕೊರತೆಯಿಂದ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ. ಮಾನ್ಯತೆ ರದ್ದಾಗುವ ಆತಂಕ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕೆಂದು ಒತ್ತಾಯಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ದಿನೇಶ್‌ಗುಂಡೂರಾವ್, ರಾಜ್ಯದಲ್ಲಿ ಮೈಸೂರು, ಶಿವಮೊಗ್ಗ, ಬಳ್ಳಾರಿ ಹಾಗೂ ಬೆಂಗಳೂರಿನಲ್ಲಿ ಆಯುರ್ವೇದ ವಿವಿಗಳಿವೆ. ಮೂರು ವಿವಿಗಳಲ್ಲಿ ಸಮಸ್ಯೆಗಳಿಲ್ಲ. ಬಳ್ಳಾರಿಯಲ್ಲಿ ಮಾತ್ರ ಕೊರತೆ ಇದೆ. ಅಲ್ಲಿ ಯಾರೂ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಇದಕ್ಕೆ ಬೇರೆಬೇರೆ ಕಾರಣಗಳಿವೆ. ಅದಕ್ಕಾಗಿ ವಿಶೇಷ ಭತ್ಯೆ ನೀಡುವ ನಿಟ್ಟಿನಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
150 ವರ್ಷಗಳ ಇತಿಹಾಸ ಹೊಂದಿರುವ ತಾರಾನಾಥ ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯವನ್ನು ಮತ್ತಷ್ಟು ಸುಧಾರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಬೇರೆ ಭಾಗದಲ್ಲಿರುವ ಸಿಬ್ಬಂದಿ ಹಾಗೂ ವೈದ್ಯರನ್ನು ಅಲ್ಲಿಗೆ ನಿಯೋಜಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುತ್ತಿದೆ. ಪದವಿ ತರಗತಿಗಳಿಗೆ ಯಾವುದೇ ಸೀಟುಗಳನ್ನು ಕಡಿತ ಮಾಡಿಲ್ಲ. ಆದರೆ ಸ್ನಾತಕೋತ್ತರ ಕೋರ್ಸಿನ ಸೀಟುಗಳನ್ನು ಸಿಬ್ಬಂದಿ ಕೊರತೆ ಕಾರಣಕ್ಕಾಗಿ ಕಡಿತ ಮಾಡಲಾಗಿದೆ ಎಂದು ಒಪ್ಪಿಕೊಂಡರು.
*59 ತಾಲ್ಲೂಕುಗಳಿಗೆ ಹಂತಗಳಲ್ಲಿ ಸಿಹೆಚ್‌ಸಿಗಳು ತಾಲ್ಲೂಕು ಆಸ್ಪತ್ರೆಗಳು : ದಿನೇಶ್
ಬೆಂಗಳೂರು,ಮಾ.13- ರಾಜ್ಯದಲ್ಲಿ ಹೊಸ 59 ತಾಲ್ಲೂಕುಗಳಿಗೆ ಹಂತಹಂತವಾಗಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳನ್ನು ನಿರ್ಮಿಸಿಕೊಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ವಿಧಾನಸಭೆಯಲ್ಲಿ ಹೊನ್ನಾಳಿ ಕ್ಷೇತ್ರದ ಡಿ.ಜಿ.ಶಾಂತನಗೌಡ ಹಾಗೂ ಹುಲಗುಂದ ಕ್ಷೇತ್ರದ ವಿಜಯಾನಂದ ಕಾಶಪ್ಪನವರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 59 ಹೊಸ ತಾಲ್ಲೂಕುಗಳಲ್ಲಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 2360 ಕೋಟಿ ಕಟ್ಟಡಕ್ಕಾಗಿ 469 ಕೋಟಿ ಮಾನವ ಸಂಪನೂಲಕ್ಕಾಗಿ ಅನುದಾನದ ಕೊರತೆ ಇದೆ.
ಐಟಿಎಚ್‌ಎಸ್ ಮಾರ್ಗಸೂಚಿಗಳನ್ವಯ ಅನುದಾನದ ಲಭ್ಯತೆ ಆಧರಿಸಿ ಮುಂದಿನ ದಿನಗಳಲ್ಲಿ ತಾಲ್ಲೂಕು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು. 59 ತಾಲ್ಲೂಕುಗಳಲ್ಲಿ 11 ಕಡೆ ಮೊದಲ ಹಂತದಲ್ಲಿ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಮುಖ್ಯಮಂತ್ರಿಯವರು ಮಾ.7 ರಂದು ಮಂಡಿಸಿದ ಬಜೆಟ್‌ನಲ್ಲಿ ಮಂಜೂರಾತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ತಾಲ್ಲೂಕು ಆಸ್ಪತ್ರೆಗಳ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
*ವೈದ್ಯಕೀಯ ಮತ್ತು ಸಿಬ್ಬಂದಿಗಳ ಕೊರತೆ ನಿವಾರಣೆ :
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಖಾಲಿ ಇರುವ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು ಹಾಗೂ ದಂತ ಆರೋಗ್ಯಾಧಿಕಾರಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. 120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಸದರಿ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎಂಬಿಬಿಎಸ್ ಸ್ನಾತಕೋತ್ತರ ಪದವಿ ಪೂರೈಸಿರುವ ವೈದ್ಯರಿಗೆ ಒಂದು ವರ್ಷದ ಕಡ್ಡಾಯ ಸೇವೆಯಡಿ ನೇಮಿಸಲಾಗುತ್ತಿದೆ. ಇಲಾಖೆಯಲ್ಲಿ ಸೇವಾ ನಿರತ ಕೋಟಾದಡಿ ಉನ್ನತ ವ್ಯಾಸಂಗಕ್ಕೆ ತೆರಳಿ ವ್ಯಾಸಂಗ ಪೂರ್ಣಗೊಳಿಸಿ ಹಿಂದಿರುಗುವ ವೈದ್ಯರನ್ನು ಅವರ ತಜ್ಞತೆಗೆ ಅನುಸಾರ ಹುದ್ದೆಗೆ ನೇಮಿಸಲಾಗುತ್ತಿದೆ. 337 ತಜ್ಞ ವೈದ್ಯರು ಮತ್ತು 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಷರತ್ತಿಗನುಸಾರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅನುಮತಿ ನೀಡಲಾಗಿದೆ.
ಇದೇ ವರ್ಷ ಜನವರಿಯಲ್ಲಿ 250 ಹೆಚ್ಚುವರಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುತ್ತಿದೆ. 8 ದಂತ ವೈದ್ಯಾಧಿಕಾರಿಗಳ ಹುದ್ದೆಗೂ ಗುತ್ತಿಗೆ ಆಧಾರ ಮೇಲೆ ನೇಮಿಸುತ್ತಿರುವುದಾಗಿ ವಿವರಿಸಿದರು.
150 ಕಿರಿಯ ಪ್ರಯೋಗಶಾಲಾ ತಾಂತ್ರಿಕ ವೈದ್ಯಾಧಿಕಾರಿ, 400 ಫಾರ್ಮಸಿ ಅಧಿಕಾರಿ, 8 ಕಿರಿಯ ವೈದ್ಯಕೀಯ ವಿಕಿರಣ ಶಾಸ್ತ್ರ, ಚಿತ್ರಣ ಅಧಿಕಾರಿ ಹುದ್ದೆಗಳಿಗೆ ವಿಶೇಷ ನೇಮಕಾತಿಯ ಮೂಲಕ 558 ಮಂದಿಯನ್ನು ನೇಮಿಸುವ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾಮಟ್ಟದ ಸಮಿತಿಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ 200 ಕಿರಿಯ ಪ್ರಯೋಗಶಾಲಾಧಿಕಾರಿ ಹಾಗೂ 400 ಫಾರ್ಮಸಿ ಅಧಿಕಾರಿಗಳನ್ನು ನೇರ ನೇಮಕಾತಿಯಡಿ ನೇಮಿಸಲು ಅನುಮತಿ ನೀಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿನ ಆದೇಶದ ಪ್ರಕಾರ 1205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹಾಗೂ 300 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳಿಗೆ ಭರ್ತಿ ಮಾಡಲು ಅನುಮೋದನೆ ನೀಡಿದ್ದು ಕರಡು ವಿಶೇಷ ನೇಮಕಾತಿ ನಿಯಮಗಳನ್ನು ರಚಿಸುವ ಹಂತದಲ್ಲಿದೆ. ಗ್ರೂಪ್ ಡಿ ಹುದ್ದೆಗಳಿಗೆ ಶೇ.30 ರಷ್ಟು ನಾನ್ ಕ್ಲಿನಿಕಲ್, ಶೇ.45 ರಷ್ಟು ಗ್ರೂಪ್ ಡಿ ಹುದ್ದೆಗಳಿಗೆ ಶೇ.75 ರಷ್ಟು ಮೀರದಂತೆ ಹೊರಗುತ್ತಿಗೆ ಮೇಲೆ ಟೆಂಡರ್ ಮೂಲಕ ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
*ಚಾಮರಾಜ ಕ್ಷೇತ್ರದ 18 ವಾರ್ಡ್‌ಗಳಲ್ಲಿ 353 ಕಿ.ಮೀ. ಹೆಚ್.ಟಿ ವಿದ್ಯುತ್ ಮಾರ್ಗ
ಬೆಂಗಳೂರು,ಮಾ.13- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ 18 ವಾರ್ಡ್‌ಗಳಲ್ಲಿ ಒಟ್ಟು 353.36 ಕಿ.ಮೀ. ಹೆಚ್‌ಟಿ ವಿದ್ಯುತ್ ಮಾರ್ಗವಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಹರೀಶ್‌ಗೌಡ ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚಾಮರಾಜ ಕ್ಷೇತ್ರದಲ್ಲಿ 144.36 ಕಿ.ಮೀ. ಯುಜಿ ಕೇಬಲ್ ಅಳವಡಿಸಿದ್ದು, 209 ಕಿ.ಮೀ. ಯುಜಿ ಕೇಬಲ್ ಅಳವಡಿಸಲು ಬಾಕಿ ಇದೆ ಎಂದರು.
884.50 ಕಿ.ಮೀ. ಹೆಲ್ತಿ ವಿದ್ಯುತ್ ಮಾರ್ಗವಿದ್ದು ಅದರಲ್ಲಿ 179.91 ಕಿ.ಮೀ. ಎಲ್‌ಟಿ ಯುಜಿ ಕೇಬಲ್ ಹಾಗೂ 28.94 ಕಿ.ಮೀ. ಓವರ್‌ಹೆಡ್ ಕೇಬಲ್ ಅಳವಡಿಸಲಾಗಿದೆ. ಇನ್ನೂ 675.65 ಕಿ.ಮೀ. ಬಾಕಿ ಇರುತ್ತದೆ ಎಂದು ಹೇಳಿದರು.ಎರಡನೇ ಹಂತದಲ್ಲಿ 209 ಕಿ.ಮೀ. ಹೆಚ್‌ಟಿ ಮಾರ್ಗವನ್ನು 58.90 ಕಿ.ಮೀ. ಎಲ್‌ಟಿ ಮಾರ್ಗವನ್ನು ಭೂಗತ ಕೇಬಲ್‌ನಿಂದ ಬದಲಾಯಿಸಲು ಮಾ.3 ರಂದು ಕಾರ್ಯಾದೇಶ ನೀಡಲಾಗಿದೆ. 2 ವರ್ಷಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
*ನೂತನ ಎಂಜಿನಿಯರಿಂಗ್ ಪಾಲಿಟೆಕ್ನಿಕ್ ಕಾಲೇಜು : ಪರಿಶೀಲನಾ ಸಮಿತಿ ರಚನೆ
ಬೆಂಗಳೂರು,ಮಾ.13- ರಾಜ್ಯದಲ್ಲಿ ಹೊಸ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಪರಿಶೀಲಿಸಿ ವರದಿ ನೀಡಲು ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ರಾಘವೇಂದ್ರ ಹಿಟ್ನಾಳ್ ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಒಟ್ಟು 18 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮಂಜೂರಾಗಿವೆ. 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಿವೆ ಎಂದರು. ಅರಸೀಕೆರೆ ಹಾಗೂ ದೇವದುರ್ಗ ಎಂಜಿನಿಯರಿಂಗ್ ಕಾಲೇಜುಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾಲೇಜುಗಳ ಕೊಪ್ಪಳ ತಾಲ್ಲೂಕು ಕೇಂದ್ರ ಸ್ಥಾನದಿಂದ ಕ್ರಮವಾಗಿ 69 ಕಿ.ಮೀ. ಹಾಗೂ 42 ಕಿ.ಮೀ. ದೂರದಲ್ಲಿವೆ ಎಂದು ಹೇಳಿದರು.ಎಂಜಿನಿಯರಿಂಗ್ ಕಾಲೇಜುಗಳನ್ನು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ. 2 ಸಾವಿರ ಹುದ್ದೆಗಳ ಭರ್ತಿಗೆ ಬಜೆಟ್‌ನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಹುದ್ದೆಗಳ ಭರ್ತಿ ನಂತರ ಹೊಸ ಕಾಲೇಜು ಪ್ರಾರಂಭಿಸುವ ಬಗ್ಗೆ ಯೋಚಿಸಲಾಗುವುದು ಎಂದರು.