ಬೆಂಗಳೂರು, ಮಾ.21-ಕನ್ನಡ ಒಕ್ಕೂಟದಿಂದ ನಾಳೆ ಕರ್ನಾಟಕ ಬಂದ್ ಕರೆ ಕೊಟ್ಟಿದ್ದೇವೆ 20 ಬೇಡಿಕೆಗಳನ್ನ ರಾಜ್ಯ ಹಾಗೂ ಕೇಂದ್ರ ಈಡೇರಿಸಬೇಕುಕೆಲ ಸಂಘಟನೆಗಳು ಬೆನ್ನು ತೋರಿಸುವ ಕೆಲಸ ಮಾಡ್ತಿದ್ದಾರೆ ಬಂದ್ ನಾವು ಶಾಂತಿ ರೀತಿಯಾಗಿ ಮಾಡ್ತಿದ್ದೇವೆ ಆದ್ರೆ ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕಲು ಕೆಲಸ ಮಾಡ್ತಿದ್ದಾರೆ ಎಂದು ಕನ್ನಡ ಒಕ್ಕೂಟದ ಮುಖಂಡ ಸಾ.ರ ಗೊವಿಂದು ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸರ್ಕಾರ ಪೊಲೀಸ್ ಮೂಲಕ ಬಂದ್ ಮಾಡದಂತೆ ತಡೆಯುತ್ತಿದ್ದಾರೆ ಎಂದು ದೂರಿದ ಅವರು ಕರ್ನಾಟಕ ಯೋಜನೆ ಸರಿಯಾಗಿ ಅನುಷ್ಠಾನ ಆಗಿಲ್ಲ,ಮೆಟ್ರೋದ ಉದ್ಯೋಗದಲ್ಲೂ ಕನ್ನಡಿಗರಿಗೆ ಅನ್ಯಾಯ ಆಗಿದೆ ಹೀಗಾಗಿ ಕನ್ನಡಪರ ಸಂಘಟನೆಗಳು ಬಂದ್ದೆ ಕರೆ ಕೊಟ್ಟಿದ್ದಾರೆ, ಕನ್ನಡಪರ ಸಂಘಟನೆಗಳಿಗೆ ಪೊಲೀಸ್ ಮೂಲಕ ನೋಟಿಸ್ ನೀಡ್ತಿದ್ದಾರೆ ಪೊಲೀಸ್ ಠಾಣೆಗೆ ಬನ್ನಿ, ಬಂದ್, ಪ್ರತಿಭಟನೆ ಮಾಡಬಾರದು ಎಂದು ಬೆದರಿಸುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳಿನ ಬಂದ್ ಗೆ ಕೆಲವರು ನೈತಿಕ ಬೆಂಬಲ, ಸಂಪೂರ್ಣ ಬೆಂಬಲ ಅನ್ನೋ ಕೆಲ ಗೊಂದಲಗಳಿವೆ.
ಯಾವ ಅಪಸ್ವರವೂ ಇಲ್ಲ, ನಾಳಿನ ಬಂದ್ ಗೆ ಎಲ್ಲರ ಸಹಕಾರ ಇದೆ. ಕನ್ನಡಿಗರನ್ನ ಎತ್ತಿಕಟ್ಟುವ ಕೆಲಸವನ್ನ ಕೆಲವರು ಮಾಡ್ತಿದ್ದಾರೆ ಅದ್ಯಾವುದೂಫಲ ನೀಡಲ, ಬಂದ್ ಯಶಸ್ವಿಯಾಗುತ್ತೆ ಎಂದರು.
ಕೆಲವರು ಬೆಂಬಲ ಇಲ್ಲ ಅಂತ ಹೇಳಿದ್ದಾರೆ, ನಾವು ಯಾವತ್ತೂ ಆದ್ರೂ ಬೆಂಬಲ ಕೊಡಿ ಎಂದು ಕೇಳಿದ್ದ ಕಳೆದ 20 ದಿಗಳಿಂದ ಕರ್ನಾಟಕ ಬಂದ್ ಮಾಡ್ತಿವೆಂದು ಹೇಳಿದ್ದೇವೆ ನೀವು ಮಾಡುವ ಕೆಲಸ ನಾವು ಮಾಡ್ತಿದ್ದೇವೆ ಎಂದು ಹೇಳಿದರು. ಕನ್ನಡ, ಜಲ, ವಿಚಾರ ಬಂದಾಗ ಕರ್ನಾಟಕ ಬಂದ್ ಬೆಂಬಲ ಕೊಡೋಕು ನಾಳೆ ಚಾಲಕರು ವಾಹನಗಳು ಓಡಿಸಬಾರದು, ನಮ್ಮ ಕನ್ನಡ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.
ಹೀಗಾಗಿ ನಾಳೆ ಬಂದ್ ಮಾಡಿ ಚಾಲಕರ ದಿನ ಮಾಡೋಣ ಎಂದು ವಾಟಾಳಯ ನಾಗರಾಝ್ ಮನವಿ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ರೈತರು ಬೆಂಬಲ ಕೊಡ್ತಾರೆ, ಹೋರಾಟ ಮಾಡ್ತಾರೆ,ಖಾಸಗಿ ಶಿಕ್ಷಣ ಸಂಸ್ಥೆಗಳು ದರೋಡೆ ಮಾಡ್ತಿದ್ದಾರೆ ಬೆಂಬಲ ನೀಡುತ್ತಿಲ್ಲ ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡ್ತಿದ್ದಾರೆ ಹೀಗಾಗಿ ನಾಳೆ ಕಾಂಗ್ರೆಸ್ ನಾಯಕರು ಸೇರಿ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಕರವೇ ಅಧ್ಯಕ್ಷ ಶಿವರಾಮೇ ಗೌಡ, ಕನ್ನಡ ಸೇನೆ ಕುಮಾರ್, ಗಿರೀಶ್ ಗೌಡ, ಓಲಾ ಊಬರ್ ಮುಖಂಡರು, ಆಟೋ ಚಾಲಕ ಸಂಘಟನೆಯ ಮುಖಂಡರು ಭಾಗಿಯಾಗಿದ್ದರು..