Friday, November 22, 2024
Homeರಾಜ್ಯಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸಿದ ನೂತನ ಪದಾಧಿಕಾರಿಗಳ ಪಟ್ಟಿ

ಬಿಜೆಪಿಯಲ್ಲಿ ಭಿನ್ನಮತ ಸೃಷ್ಟಿಸಿದ ನೂತನ ಪದಾಧಿಕಾರಿಗಳ ಪಟ್ಟಿ

ಬೆಂಗಳೂರು, ಡಿ.24- ಬಹುನಿರಿಕ್ಷೀತ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವವರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕುತ್ತಿದ್ದು, ಮೊದಲೇ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದ್ದ ಕಮಲ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅದರಲ್ಲೂ ಪದಾಧಿಕಾರಿಗಳ ಪಟ್ಟಿಗೆ ಕೇಂದ್ರದ ಮಾಜಿ ಸಚಿವರಾದ ಡಿ,ವಿ,ಸದಾನಂದಾಗೌಡ ಹಾಗೂ ಬಸನಗೌಡ ಪಾಟೀಲ್ ಯಾತ್ನಾಳ್ ಅವರು ಪಕ್ಷದ ವರಿಷ್ಠರ ನಡೆಗೆ ಕೆಂಡಕಾರಿದ್ದಾರೆ. ವಿಶೇಷವೆಂದರೆ ಇಬ್ಬರೂ ನೇರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೇ ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸಿದ್ದಾರೆ. ಆದರೆ ಎಲ್ಲಿಯೂ ಕೂಡಾ ಅವರ ಹೆಸರನ್ನು ನೇರವಾಗಿ ಪ್ರಸ್ತಾಪ ಮಾಡಿಲ್ಲ. ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ 6 ಆಪ್ತರಿಗೆ ಸ್ಥಾನ ನೀಡಲಾಗಿದ್ದು, ಇದು ಇತರೆ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಬಿಜೆಪಿಯ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪದಾಧಿಕಾರಿಗಳ ಪಟ್ಟಿಯಲ್ಲಿ ಪಕ್ಷದ ನಿಷ್ಟಾವಂತರನ್ನು ಕಡೆಗಣಿಸಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಿಗೆ ಮಣೆ ಹಾಕಲಾಗಿದ್ದು ಇದರಿಂದ ಸಂಘಟನೆಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪದಾಧಿಕಾರಿಗಳ ಪಟ್ಟಿಗೆ ಯತ್ನಾಳ್ ವ್ಯಂಗ್ಯ

ಅದರಲ್ಲೂ ಯಡಿಯೂರಪ್ಪ ಅವರ ರಾಜಕೀಯ ಎದುರಾಳಿ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧದ ನಡುವೆಯೂ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರನ್ನು ಪಕ್ಷದ ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ರಾಜ್ಯಾಧ್ಯಕ್ಷ ಬಿ,ವೈ ವಿಜೆಯೇಂದ್ರ ನಡೆಗೆ ಹಿಂದೂ ಪೈರ್ ಬ್ರಾಂಡ್ ಖ್ಯಾತಿಯ ಯತ್ನಾಳ್ ಬೆಂಕಿಯುಗಿಳಿದ್ದಾರೆ.

ಇದು ಕೆಜೆಪಿ ಪಟ್ಟಿ: ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯ ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತನೇನು? ನಾವು ದೇಶದ ಕಾರ್ಯಕರ್ತರು ಅಷ್ಟೆ. ಯಡ್ಡಿಯೂರಪ್ಪನವರದ್ದು ಕೆಜೆಪಿ 1, ಇದು ಕೆಜೆಪಿ 2, ಮೊಮ್ಮಗನದು ಕೆಜೆಪಿ 3 ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯ ಘಟಕದ ನೂತನ ಪಟ್ಟಿಗೆ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರ ಜೊತೆ ಮತನಾಡಿದ ಅವರು, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಎಂದು ಹೇಳಿದ್ದಾರೆ. 28 ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್‍ನಲ್ಲಿ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಕುಸಿದು ಬಿದ್ದು ಹೋಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಈಗ ಕೆಜೆಪಿ 2 ಆಗಿದೆ, ಮುಂದೆ ಅವರ ಮೊಮ್ಮಗ ಬಂದರೆ ಕೆಜೆಪಿ 3 ಆಗುತ್ತದೆ.ಈಗಲೇ ನಿವೃತ್ತಿ ಅಲ್ಲ, ಇನ್ನೊಂದು ಎಲೆಕ್ಷನ್ ಇದೆ. 2028ರ ಚುನಾವಣೆ ಬಳಿಕ ನಿರ್ಧಾರ ಮಾಡುವೆ. ಆದರೆ ಯೂ ಟರ್ನ್ ಹೊಡೆದ ಯತ್ನಾಳ್ ಎನ್ನಬೇಡಿ, ಡೈರೆಕ್ಟ್ ಟರ್ನ್ ಎಂದು ಹೇಳಿದರು.

ಈಗ ರಾಜಕೀಯದಲ್ಲಿ ಏನಾಗಿದೆ ಎಂದರೆ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ ಎಂದು ಅವರು ಅತೃಪ್ತಿಯಿಂದ ಹೇಳಿದರು. ಇವತ್ತು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಾರೆ. 2024 ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದು ಹೇಳಿದರು.

ದೆಹಲಿಯಲ್ಲಿ ಕುಳಿತು ತೀರ್ಮಾನ ಮಾಡುವುದು ಸರಿಯಲ್ಲ:
ಈ ಬಗ್ಗೆ ಬಿಜೆಪಿ ಸಂಸದ ಸದಾನಂದಗೌಡ ಪ್ರತಿಕ್ರಿಯಿಸಿ, ಈ ತಂಡವನ್ನು ಅಸಮರ್ಥ ತಂಡ ಎಂದು ಹೇಳಲ್ಲ. ಆದರೆ ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು ತಿಳಿದುಕೊಳ್ಳಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ತಂಡ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆಯ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ, ಉತ್ತರ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ. ಈ ತಂಡವನ್ನು ಅಸಮರ್ಥ ತಂಡ ಅಂತಾ ಹೇಳಲ್ಲ. ಆದರೆ ಅಲ್ಲೋ ಇಲ್ಲೋ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು ತಿಳಿದುಕೊಳ್ಳಬೇಕಿತ್ತು. ಅವರಿಂದ ಹೊಸ ವಿಷಯ ತೆಗೆದುಕೊಂಡು ತಂಡವನ್ನು ಮಾಡಬೇಕಿತ್ತು ಎಂದಿದ್ದಾರೆ.

ಇವತ್ತು ಅವರನ್ನು ಕರೆದು ಮಾತಾಡಿದ್ದರೆ ಈ ಅತೃಪ್ತರ ಸಮಸ್ಯೆ ಇರುತ್ತಿರಲಿಲ್ಲ. ಇವತ್ತಿನ ತಂಡದಲ್ಲಿ ಅಧ್ಯಕ್ಷರನ್ನು ಕ್ರಿಯಾಶೀಲರನ್ನು ನೇಮಕ ಮಾಡಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಆಗುವಾಗ ಸಮಾನವಾಗಿ ನೇಮಕ ಆಗಬೇಕು. ಒಂದು ತಂಡ ಅಂದರೆ ಅದು ಒಂದು ಗುಂಪಿಗೆ ಸೀಮಿತ ಆಗಬಾರದು. ಈಗಲಾದರೂ ಕರ್ನಾಟಕಕ್ಕೆ ವರಿಷ್ಠರು ಬರಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ಪದಾಧಿಕಾರಿಗಳ ಪಟ್ಟಿಗೆ ಯತ್ನಾಳ್ ವ್ಯಂಗ್ಯ

ದೆಹಲಿಯಲ್ಲಿ ಕುಳಿತು ತೀರ್ಮಾನ ಮಾಡುವುದು ಸರಿಯಲ್ಲ. ಕೋರ್ ಕಮಿಟಿ ಎನ್ನುವುದು ಒಂದು ಹಿರಿಯರ ತಂಡ, ಆ ಕೋರ್ ಕಮಿಟಿ ಜೊತೆ ಚರ್ಚಿಸಿ ತೀರ್ಮಾನ ಆಗಿದ್ದರೆ, ಇನ್ನೂ ಸದೃಢವಾದ ಟೀಮ್ ಕಟ್ಟಲು ಸಾಧ್ಯವಾಗಬಹುದಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಮತ್ತಷ್ಟು ಒತ್ತು ಕೊಡಬೇಕಿತ್ತು. ಯಾಕೋ ಏನೋ ಗೊತ್ತಿಲ್ಲ, ಹಿರಿಯರ ವೈಫಲ್ಯದಿಂದ ಸೋಲಾಗಿದೆ ಎಂಬ ಭಾವನೆ ವರಿಷ್ಠರಲ್ಲಿದೆ. ದಯವಿಟ್ಟು ಅದನ್ನು ಅಲ್ಲಿಗೆ ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

ಎಲ್ಲವೂ ಸರಿ ಹೋಗಲಿದೆ:
ಇನ್ನು ಈ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯ ಬಿಜೆಪಿಯ ಪದಾಧಿಕಾರಿಗಳ ಪಟ್ಟಿ ಈಗಾಗಲೇ ಬಿಡುಗಡೆ ಆಗಿದೆ. ಅಳೆದು, ತೂಗಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಒಳ್ಳೆಯ ಪದಾಧಿಕಾರಿಗಳ ಆಯ್ಕೆ ಆಗಿದೆ. ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಬಗ್ಗೆ ಏನೂ ಹೇಳಲ್ಲ ಅವರ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುವ ಪ್ರಯತ್ನ ಸಹ ಮಾಡಲ್ಲ. ಎಲ್ಲವೂ ಸರಿ ಹೋಗುತ್ತದೆ ಎಂದು ತಿಳಿಸಿದರು..

ಹಿಜಾಬ್ ವಿಚಾರದಲ್ಲಿ ನಮ್ಮೆಲ್ಲರ ಆಕ್ರೋಶದ ಹಿನ್ನೆಲೆ ಸಿದ್ದರಾಮಯ್ಯನವರು ಹೇಳಿಕೆ ಹಿಂದೆ ಪಡೆದಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಗಳಲ್ಲ. ಜಾತಿಯ ವಿಷ ಬೀಜ ಬಿತ್ತುವ ಕೆಲಸ ಸಿದ್ದರಾಮಯ್ಯ ಬಿಡಬೇಕು. ವಿಷ ಬೀಜ ಬಿತ್ತುವುದರಿಂದ ಅವರಿಗೆ ಯಾವುದೇ ಲಾಭ ಆಗಲ್ಲ ಎಂದರು. ಜಾತಿ ಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ಬೇಡ ಎಂಬ ಭಾವನೆ ಬಹುತೇಕರಲ್ಲಿ ಬಂದಿದೆ. ಗಣತಿಯು ವೈಜ್ಞಾನಿಕವಾಗಿ ಆಗಬೇಕು ಎಂಬ ಭಾವನೆ ಇದೆ, ನಾವು ಕೂಡ ಅದನ್ನೇ ಹೇಳುತ್ತೇವೆ. ಇನ್ನೊಮ್ಮೆ ಸಮೀಕ್ಷೆ ಆಗಲಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

RELATED ARTICLES

Latest News