Friday, November 22, 2024
Homeಬೆಂಗಳೂರುಬಿಬಿಎಂಪಿ ಕೇಳಿದ್ದು 8050 ಕೋಟಿ ರೂ. ಸಿಕ್ಕಿದ್ದು 3500 ಕೋಟಿ ರೂ

ಬಿಬಿಎಂಪಿ ಕೇಳಿದ್ದು 8050 ಕೋಟಿ ರೂ. ಸಿಕ್ಕಿದ್ದು 3500 ಕೋಟಿ ರೂ

ಬೆಂಗಳೂರು,ಫೆ.17- ಬಿಬಿಎಂಪಿ ಅಧಿಕಾರಿಗಳು ಕೇಳಿದ್ದು 8050 ಕೋಟಿ ರೂ.ಗಳ ಅನುದಾನ ಆದರೆ, ಸರ್ಕಾರ ನೀಡಿರೋದು ಕೇವಲ 3500 ಕೋಟಿ ರೂ.ಗಳು ಮಾತ್ರ. ಹೌದು ರಾಜ್ಯ ಸರ್ಕಾರ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಬಿಬಿಎಂಪಿಗೆ ಕೇವಲ 3,500 ಕೋಟಿ ರೂ.ಗಳ ಅನುದಾನ ಮಾತ್ರ ನೀಡಿದೆ.

ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ಬಿಬಿಎಂಪಿಗೆ 8050 ಕೋಟಿ ರೂ.ಗಳ ಅನುದಾನ ನೀಡುವಂತೆ ಅಧಿಕಾರಿಗಳು ಸರ್ಕಾರಕ್ಕೆ ಮಾಡಿಕೊಂಡಿರುವ ಮನವಿಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಅಂಕಿ ಅಂಶಗಳಿಂದ ಬಹಿರಂಗಗೊಂಡಿದೆ. 8050 ಕೋಟಿ ರೂ.ಗಳ ಅನುದಾನಕ್ಕೆ ಬೇಡಿಕೆ ಇಟ್ಟಿದ್ದರೂ ಸರ್ಕಾರ ಕಳೆದ ಬಾರಿಯಂತೆ ಈ ಬಾರಿಯೂ 3,500 ಕೋಟಿ ಅನುದಾನ ಮಾತ್ರ ಘೋಷಣೆ ಮಾಡಿದೆ.

ಪ್ರತಿಪಕ್ಷದ ಸ್ಥಾನದಲ್ಲಿ ಕೂರಲು ಇಮ್ರಾನ್‍ ಖಾನ್ ಸಮ್ಮತಿ

ನಗರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ 3 ಸಾವಿರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ 500 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. 2024-2025 ರ ಸಾಲಿಗೆ ಒಟ್ಟು 3,500 ಕೋಟಿ ಅನುದಾನ ಹಾಗೂ 6 ಸಾವಿರ ಕೋಟಿ ಆದಾಯದ ಗುರಿ ನೀಡಲಾಗಿದೆ.

RELATED ARTICLES

Latest News