Friday, August 22, 2025
Homeರಾಜ್ಯಕರ್ನಾಟಕ ಸಹಕಾರಿ ಪಾರದರ್ಶಕ ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಮರು ಅಂಗೀಕಾರ

ಕರ್ನಾಟಕ ಸಹಕಾರಿ ಪಾರದರ್ಶಕ ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಮರು ಅಂಗೀಕಾರ

Karnataka Cooperative Transparency Bill Re-passed in Legislative Council

ಬೆಂಗಳೂರು,ಆ.22- ವಿಧಾನಸಭೆಯಲ್ಲಿ ತಿರಸ್ಕೃತಗೊಂಡಿದ್ದ ಕರ್ನಾಟಕ ಸಹಕಾರಿ ಪಾರದರ್ಶಕ ವಿಧೇಯಕವನ್ನು ವಿಧಾನಪರಿಷತ್‌ನಲ್ಲಿ ಎರಡನೇ ಬಾರಿಗೆ ಅಂಗೀಕಾರ ಮಾಡಲಾಯಿತು.ಈ ಹಿಂದೆ ಕೆಲವು ಕಾರಣಗಳಿಂದ ತಿರಸ್ಕೃತಗೊಂಡಿದ್ದ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ರವರು ಪರಿಷತ್‌ನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡರು.

ವಿಧೇಯಕದ ಮೇಲೆ ಯಾವುದೇ ಚರ್ಚೆ ಅಥವಾ ವಿವರಣೆ ನಡೆಯಲಿಲ್ಲ. ಮಂಡನೆಯ ನಂತರ ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿಯವರು ವಿಧೇಯಕ ಅಂಗೀಕಾರವಾಗಿದೆ ಎಂದು ಪ್ರಕಟಿಸಿದರು.

ನಂತರ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ರವರು ಗಂಗಾ ಕಲ್ಯಾಣ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಕುರಿತ ವಿಶೇಷ ಸದನ ಸಮಿತಿಯ ವರದಿಯನ್ನು ಮಂಡನೆ ಮಾಡಿದರು.ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ವರದಿಯನ್ನು ಕಾಂಗ್ರೆಸ್‌‍ ಸದಸ್ಯ ಕೆ.ಅಬ್ದುಲ್‌ ಜಬ್ಬಾರ್‌ ಮಂಡನೆ ಮಾಡಿದರು.

RELATED ARTICLES

Latest News