Tuesday, December 31, 2024
Homeಮನರಂಜನೆಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆ

Karnataka Film Chamber of Commerce Election

ಬೆಂಗಳೂರು,ಡಿ.15 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆಯಾಗಿದ್ದಾರೆ. ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆಯು ನಡೆದು ಅಂದೇ ಫಲಿತಾಂಶವು ಹೊರಬಿದ್ದಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ವೈಭವಿ ಚಿತ್ರಮಂದಿರದ ಮಾಲೀಕ ಎಂ ನರಸಿಂಹಲು ಗೆಲುವಿನ ನಗೆ ಬೀರಿದ್ದಾರೆ. ನರಸಿಂಹಲು ಅವರಿಗೆ ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್‌ ರಾಜು.ಆರ್‌ ಪ್ರಬಲ ಪೈಪೋಟಿ ನೀಡಿದ್ದರು.

ನರಸಿಂಹಲು ಪರವಾಗಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಪ್ರಚಾರ ಮಾಡಿದ್ದರು. ಈಗ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿತರಕ, ಪ್ರದರ್ಶಕ ಮತ್ತು ನಿರ್ಮಾಪಕ ವಲಯಗಳಿಂದ ಸುಮಾರು 104 ಅಭ್ಯರ್ಥಿಗಳು ಈ ಬಾರಿ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಬಾರಿ ವಿತರಕರ ಒಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು.

ಉಪಾಧ್ಯಕ್ಷರಾಗಿ ನಿರ್ಮಾಪಕ ವಲಯದಿಂದ ಸಫೈರ್‌ ವೆಂಕಟೇಶ್‌, ಪ್ರದರ್ಶಕ ವಲಯದಿಂದ ರಂಗಪ್ಪ ಕೆ.ಓ, ವಿತರಕ ವಲಯದಿಂದ ಶಿಲ್ಪಾ ಶ್ರೀನಿವಾಸ್‌‍ ಆಯ್ಕೆಗೊಂಡರು. ಗೌರವ ಕಾರ್ಯದರ್ಶಿಯಾಗಿ ಪ್ರದರ್ಶಕ ವಲಯದಿಂದ ವೀರೇಶ್‌ ಚಿತ್ರಮಂದಿರದ ಮಾಲೀಕ ಕುಶಾಲ್‌ ಎಲ್‌.ಸಿ, ನಿರ್ಮಾಪಕ ವಲಯದಿಂದ ಪ್ರವೀಣ್‌ ಕುಮಾರ್‌, ವಿತರಕ ವಲಯದಿಂದ ಎಂ.ಎನ್‌.ಕುಮಾರ್‌ ಜಯಗಳಿಸಿದ್ದಾರೆ.

RELATED ARTICLES

Latest News