Tuesday, February 25, 2025
Homeರಾಷ್ಟ್ರೀಯ | Nationalನಕಲಿ ಜನನ ಪ್ರಮಾಣ ಪತ್ರ ಆರೋಪ : ಬ್ಯಾಂಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅರ್ಜಿ ವಜಾ

ನಕಲಿ ಜನನ ಪ್ರಮಾಣ ಪತ್ರ ಆರೋಪ : ಬ್ಯಾಂಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅರ್ಜಿ ವಜಾ

Karnataka High Court dismisses Lakshya Sen's plea in birth certificate forgery case

ಬೆಂಗಳೂರು, ಫೆ.25: ಜನನ ಪ್ರಮಾಣ ಪತ್ರಗಳನ್ನು ನಕಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ನೇನ್ ಅವರ ಕುಟುಂಬ ಸದಸ್ಯರು ಹಾಗೂ ಅವರ ತರಬೇತುದಾರ ಯು.ವಿಮಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

ಪ್ರಕರಣದ ತನಿಖೆಯನ್ನು ಖಾತರಿಪಡಿಸುವ ಮೇಲ್ನೋಟದ ಪುರಾವೆಗಳಿವೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಲಕ್ಷ್ಯ ಸೇನ್ ಅವರ ಪೋಷಕರಾದ ಧೀರೇಂದ್ರ ಮತ್ತು ನಿರ್ಮಲಾ ಸೇನ್, ಅವರ ಸಹೋದರ ಚಿರಾಗ್ ಸೇನ್, ತರಬೇತುದಾರ ಯು ವಿಮಲ್ ಕುಮಾರ್ ಮತ್ತು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಉದ್ಯೋಗಿ ಜನನ ದಾಖಲೆಗಳನ್ನು ತಿರುಚುವಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಎಂ.ಜಿ.ನಾಗರಾಜ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.

ದೂರಿನ ಪ್ರಕಾರ, ಆರೋಪಿಗಳು ಲಕ್ಷ್ಯ ಮತ್ತು ಚಿರಾಗ್ ಸೇನ್ ಅವರ ಜನನ ಪ್ರಮಾಣಪತ್ರಗಳನ್ನು ತಿರುಚಲಾಗಿದೆ. ಅವರ ವಯಸ್ಸನ್ನು ಸುಮಾರು ಎರಡೂವರೆ ವರ್ಷಗಳಷ್ಟು ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ವಯಸ್ಸಿನ ನಿರ್ಬಂಧಿತ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವರಿಗೆ ಅವಕಾಶ ನೀಡುವ ಉದ್ದೇಶವನ್ನು ಈ ಫೋರ್ಜರಿ ಹೊಂದಿದೆ ಎಂದು ಆರೋಪಿಸಲಾಗಿದೆ. ನಾಗರಾಜ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳಲ್ಲಿದ್ದ ಮಾಹಿತಿ ಬಹಿರಂಗಪಡಿಸಿದ್ದರು.

ನಾಗರಾಜ್ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಹೀಗಾಗಿ ಅವರ ಮನವಿಯನ್ನು ಪುರಸ್ಕರಿಸಬಾರದು ಎಂದು ಲಕ್ಷ್ಯ ಸೇನ್ ಕುಟುಂಬ ನ್ಯಾಯಲಯದ ಮೊರೆ ಹೋಗಿತ್ತು.

RELATED ARTICLES

Latest News