Thursday, December 19, 2024
Homeರಾಜ್ಯಸುವರ್ಣಸೌಧಕ್ಕೆ ರಾಜಕಳೆ, ಬೆಳಗಾವಿಗೆ ಸರ್ಕಾರವೇ ಶಿಫ್ಟ್

ಸುವರ್ಣಸೌಧಕ್ಕೆ ರಾಜಕಳೆ, ಬೆಳಗಾವಿಗೆ ಸರ್ಕಾರವೇ ಶಿಫ್ಟ್

Karnataka legislature winter session in Belgavi set for heated debates

ಬೆಂಗಳೂರು,ಡಿ.8- ಕುಂದಾನಗರಿಯ ಊರಾಚೆಯ ಎತ್ತರದ ಸ್ಥಳದಲ್ಲಿ ನಿಂತಿರುವ ಸುವರ್ಣಸೌಧಕ್ಕೆ ಮತ್ತೆ ರಾಜಕಳೆ ಬಂದಿದೆ. ಪ್ರತಿವರ್ಷದ ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ಸುವರ್ಣಸೌಧ ಸಾಕ್ಷಿಯಾ ಗಲಿದೆ. ಅದರಂತೆ ನಾಳೆಯಿಂದ ಆರಂಭವಾಗುತ್ತಿರುವ ಅಧಿವೇಶನದಲ್ಲಿ 224 ಶಾಸಕರು, 75 ವಿಧಾನಪರಿಷತ್ ಸದಸ್ಯರು, ಸಾವಿರಾರು ಅಧಿಕಾರಿಗಳು, ಪತ್ರಕರ್ತರು ಭಾಗವಹಿಸಲಿದ್ದಾರೆ.

ವಿಧಾನಮಂಡಲದ ಅಧಿವೇಶನ ನೋಡುವ ಸಲುವಾಗಿಯೇ ದೂರದೂರು ಗಳಿಂದ ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನಸಾಮಾನ್ಯರು ಜಾತ್ರೆಗೆ ಬರುವಂತೆ ಭೇಟಿ ನೀಡುತ್ತಾರೆ. ವರ್ಷಪೂರ್ತಿ ಜನರಿಲ್ಲದೇ ಬಿಕೋ ಎನ್ನುವ ಸುವರ್ಣಸೌಧ ಚಳಿಗಾಲದ ಅಧಿವೇಶನ ಬರುತ್ತಿದ್ದಂತೆ ಕಳೆಗಟ್ಟಲಾರಂಭಿಸುತ್ತದೆ.

ಧೂಳು ಹಿಡಿದ ಮೇಜು, ಕುರ್ಚಿಗಳು, ಗೋಡೆಗಳನ್ನು ಕೋಟ್ಯಂತರ ರೂ. ಖರ್ಚು ಮಾಡಿ ಸ್ವಚ್ಛಗೊಳಿಸಲಾಗುತ್ತಿದೆ. ಆವರಣದ ಮುಂದೆಲ್ಲಾ ಹಸಿರು ಹುಲ್ಲಿನ ಹೊದಿಕೆ, ಹೂಗಿಡಗಳ ಸಂಭ್ರಮ ಎದ್ದುಕಾಣುತ್ತಿರುತ್ತದೆ. ಅಧಿವೇಶನ ಮುಗಿಯುತ್ತಿದ್ದಂತೆ 10 ದಿನಗಳ ಕಾಲ ಕಂಗೊಳಿಸಿದ ಹೂ ಗಿಡಗಳು ಒಣಗಿಹೋಗುವುದು, ಮತ್ತೊಂದು ಅಧಿವೇಶನಕ್ಕೆ ಮತ್ತೆ ಹೊಸ ಗಿಡಗಳ ನಾಟಿ ಮಾಡುವುದು ಸಾಮಾನ್ಯ. ನಾಳೆಯಿಂದ ಆರಂಭಗೊಳ್ಳುತ್ತಿರುವ ಅಧಿವೇಶನಕ್ಕಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ.

ಈ ಬಾರಿಯ ವಿಶೇಷ ಎಂದರೆ ಬೆಳಗಾವಿಯಲ್ಲಿ ಕಾಂಗ್ರೆಸ್ನ ಮಹಾ ಅಧಿವೇಶನಕ್ಕೆ 100 ವರ್ಷ ತುಂಬಿದ ಸಂಭ್ರಮದ ಸಂಭ್ರಮವಾಗಿದೆ. ಇದರ ಅಂಗವಾಗಿ ರಾಜ್ಯಸರ್ಕಾರ ಮೂರು ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಪಕ್ಷದ ಸಹಯೋಗದಲ್ಲಿ ಆಯೋಜಿಸಿದೆ. ಹೀಗಾಗಿ ಸುವರ್ಣಸೌಧದ ಚಳಿಗಾಲದ ಅಧಿವೇಶನ ಮತ್ತಷ್ಟು ರಂಗು ಪಡೆದಿದೆ. ಸ್ವಚ್ಛತೆ ಹಾಗೂ ಸುವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

RELATED ARTICLES

Latest News