Tuesday, January 21, 2025
Homeರಾಜ್ಯಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ಮೂವರ ಬಂಧನ, ಉಳಿದವರಿಗಾಗಿ ಶೋಧ

ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ : ಮೂವರ ಬಂಧನ, ಉಳಿದವರಿಗಾಗಿ ಶೋಧ

Karnataka police arrest three accused in Mangaluru bank robbery

ಬೆಂಗಳೂರು,ಜ.21- ಮಂಗಳೂರಿನ ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ಗೆ ನುಗ್ಗಿ ಹಣ, ಚಿನ್ನಾಭರಣ ದೊಚಿ ಪರಾರಿಯಾಗಿದ್ದ ಮೂವರು ದರೋಡೆಕೋರರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿ ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ. ದರೋಡೆಕೋರರ ಪತ್ತೆಗೆ ರಚಿಸಲಾಗಿದ್ದ ಐದು ವಿಶೇಷ ತಂಡಗಳು ಮಹಾರಾಷ್ಟ್ರ, ಗೋವಾ, ತಮಿಳುನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಶೋಧ ನಡೆಸ್ತುತಿವೆ.

ಎರಡು ಕಾರುಗಳಲ್ಲಿ ದರೋಡೆಕೋರರು ಮಂಗಳೂರಿನಿಂದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿ ನಂತರ ಪ್ರತೇಕವಾಗಿ ಬೇರ್ಪಟ್ಟು ನಂತರ ಒಂದು ಕಾರು ಕೇರಳ ಮಾರ್ಗವಾಗಿ ಮತ್ತೊಂದು ಮುಂಬೈ ಕಡೆಗೆ ಹೋಗಿತ್ತು.ಸಹಕಾರಿ ಬ್ಯಾಂಕ್ ದರೋಡೆ ಮಾಡಿದ ನಂತರ ದರೋಡೆಕೋರರ ಒಂದು ತಂಡ ಕಳ್ಳತನ ಮಾಡಿದ್ದ, ಹಣ, ಆಭರಣವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು 700 ಕಿ.ಮೀ ಕಾರಿನಲ್ಲೇ ಪ್ರಯಾಣಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಮಂಗಳೂರಿನ ವಿಶೇಷ ಐದು ಪೊಲೀಸ್ ತಂಡಗಳು ಕಾರ್ಯಾಚರಣೆ ಕೈಗೊಂಡು ದರೋಡೆಕೋರರ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸಿವೆ. ಒಂದು ತಂಡ ಮುಂಬೈಗೆ, ಎರಡು ತಂಡ ತಮಿಳುನಾಡಿಗೆ ಹಾಗೂ ಒಂದು ತಂಡ ಕೇರಳಕ್ಕೆ ಹೋಗಿ ದರೋಡೆಕೋರರಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ತಮಿಳುನಾಡಿನ ಅಜ್ಞಾತ ಸ್ಥಳದಲ್ಲಿ ದರೋಡೆಗೆ ಬಳಸಿದ್ದ ಕಾರು ಪತ್ತೆಯಾಗಿದೆ.

ಕಾರಿನ ನೊಂದಣಿ ಸಂಖ್ಯೆನ್ನು ಪರಿಶೀಲಿಸಿದಾಗ ಕಾರಿನ ನೊಂದಣಿ ನಕಲಿ ಹಾಗೂ ನಂಬರ್ ಪ್ಲೇಟ್ ನಕಲಿ ಎಂಬುವುದು ಗೊತ್ತಾಗಿದೆ. ನಂತರ ಕಾರಿನ ಚಾರ್ಸಿ ನಂಬರ್ ಆಧಾರದಲ್ಲಿ ಕಾರಿನ ನೈಜ ಮಾಲೀಕನ ಮಾಹಿತಿ ಸಂಗ್ರಹಿಸಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಮಂಗಳೂರು ಪೊಲೀಸರಿಗೆ ಮೂವರು ದರೋಡೆಕೋರರ ಜಾಡು ಪತ್ತೆಯಾಗಿದ್ದು. ನಂತರ ತನಿಖೆ ತೀವ್ರ ಗೊಳಿಸಿ ತಮಿಳುನಾಡಿನ ತಿರುನಲ್ವೇಲಿ ಬಳಿ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಮುಖ ಅರೋಪಿ ಮುರುಗಂಡಿ ದೇವರ್ ತಿರುನಲ್ವೇಲಿ ತನಕ ಸುಮಾರು 700 ಕಿ.ಮೀ.ಕಾರು ಚಲಾಯಿಸಿದ್ದ. ದರೋಡೆಕೋರರು ಪರಾರಿಯಾಗಲು ಬಳಸಿದ್ದು ಮಹಾರಾಷ್ಟ್ರ ಮೂಲದ ಫಿಯೇಟ್ ಕಾರು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಕೋಟೆಕಾರು ಬ್ಯಾಂಕ್ ದರೋಡೆಯ ಕಿಂಗ್ಪಿನ್ ಮುರುಗಂಡಿ ದೇವರ್ ಎರಡು ತಿಂಗಳ ಹಿಂದೆಯೇ ಮಂಗಳೂರಿಗೆ ಬಂದಿದ್ದ. ಕೋಟೆಕಾರು ಬ್ಯಾಂಕ್ ಪರಿಸರದಲ್ಲಿ ಸುತ್ತಾಡಿ ಮಾಹಿತಿ ಕಲೆ ಹಾಕಿದ್ದ. ಆ ಬಳಿಕ ನಿಖರವಾದ ಸ್ಕೆಚ್ ತಯಾರಿಸಿ ಮತ್ತೆ ತಮಿಳುನಾಡಿಗೆ ತೆರಳಿದ್ದ. ಆ ಬಳಿಕ ದರೋಡೆಗೆ ಪಕ್ಕಾ ಪ್ಲಾನ್ ಮಾಡಿಕೊಂಡು ತಂಡದ ಜೊತೆ ಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಮಿಳುನಾಡಿನಿಂದ ಬಂದಿತ್ತು ಆರು ಮಂದಿಯ ತಂಡ: ಸಹಕಾರಿ ಬ್ಯಾಂಕ್ ದರೋಡೆ ಮಾಡುವುದಕ್ಕೆಂದು ರಾಜೇಂದ್ರನ್, ಕಣ್ಣನ್ ಮಣಿ ಹಾಗೂ ಇತರೆ ಆರು ಜನರ ಜೊತೆ ಪ್ರಮುಖ ಆರೋಪಿ ಮುರುಗಂಡಿ ದೇವರ್ ಬಂದಿದ್ದ. ಆದರೆ, ಐದು ಜನರಷ್ಟೇ ಫಿಯೇಟ್ ಕಾರಿನಲ್ಲಿ ಬಂದು ದರೋಡೆ ಮಾಡಿದ್ದರು.

ಒಬ್ಬ ಬೇರೆ ಜಾಗದಲ್ಲಿ ನಿಂತು ದರೋಡೆಗೆ ನೆರವು ನೀಡಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.ದರೋಡೆಕೋರರ ಬಂಧನದ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದು, ದರೋಡೆಕೋರರನ್ನು ಹೇಗೆ ಟ್ರ್ಯಾಕ್ ಮಾಡಿ ಬಂಧಿಸಲಾಯ್ತು ಎಂಬುದನ್ನು ವಿವರಿಸಿದ್ದಾರೆ. ಕರ್ನಾಟಕ ಗುಪ್ತಚರ ಇಲಾಖೆ ಕೂಡ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಲು ಸಹಾಯ ಮಾಡಿತ್ತು. ಬಂಧಿತರಿಂದ ಚಿನ್ನದ ಜತೆಗೆ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದ್ದು ದರೋಡೆಕೋರರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

RELATED ARTICLES

Latest News