ನವದೆಹಲಿ, ಜ.19- ದೇಸಿ ಕ್ರಿಕೆಟ್ ನಲ್ಲಿ ಶತಕಗಳ ಸುರಿಮಳೆ ಸುರಿಸುತ್ತಿರುವ ವಿದರ್ಭ ನಾಯಕ ಹಾಗೂ ಕನ್ನಡಿಗ ಕರುಣ್ ನಾಯರ್ ಗೆ ಇಂಗ್ಲೆಂಡ್ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸ್ಥಾನ ನೀಡದ ಆಯ್ಕೆ ಮಂಡಳಿ ವಿರುದ್ಧ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆಯಷ್ಟೇ ಮುಕ್ತಾಯಗೊಂಡ ವಿಜಯ್ ಹಝಾರೆ ಟ್ರೋಫಿಯಲ್ಲಿ ವಿದರ್ಭ ತಂಡವನ್ನು ತಮ ನಾಯಕತ್ವದಲ್ಲಿ ಫೈನಲ್ ಹಂತಕ್ಕೆ ತಲುಪಿಸಿದ್ದಲ್ಲದೆ 389.50 ಸರಾಸರಿಯಲ್ಲಿ 779 ರನ್ ಗಳಿಸಿದ್ದ ಕರುಣ್ ನಾಯರ್ ಲೀಡಿಂಗ್ ಸ್ಕೋರರ್ ಆಗಿದ್ದರು.ದೇಸಿ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿದರೂ ಕರುಣ್ ನಾಯರ್ ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡದ ಕ್ರಮವನ್ನು ಟರ್ಬನೇಟರ್ ಪ್ರಶ್ನಿಸಿದ್ದಾರೆ.
`ದೇಶಿ ಕ್ರಿಕೆಟ್ ನಲ್ಲಿ ಆಟಗಾರರು ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿದ್ದರೆ, ಆಟಗಾರರು ಏಕೆ ದೇಶಿ ಕ್ರಿಕೆಟ್ ಆಡಬೇಕು’ ಎಂದು ವಿಶ್ವಕಪ್ ವಿಜೇತ ಬೌಲರ್ ತಮ ಎಕ್‌್ಸ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
ಮುಂದಿನ ದಿನಗಳಲ್ಲಿ ಪರಿಗಣಿಸುತ್ತೇವೆ: ಅಜಿತ್ ಅರ್ಗಕರ್
` ದೇಶಿ ಕ್ರಿಕೆಟ್ ನಲ್ಲಿ 700 ಅಥವಾ ಅದಕ್ಕಿಂತಲೂ ಹೆಚ್ಚು ಸರಾಸರಿಯಲ್ಲಿ ರನ್ ಗಳಿಸಿದರೆ ಆ ಆಟಗಾರರ ಬಗ್ಗೆ ನಾವು ಸಹಜವಾಗಿಯೇ ಚರ್ಚಿಸುತ್ತೇವೆ. ಪ್ರಸಕ್ತ ತಂಡದಲ್ಲಿ ಆಟಗಾರರು ಆಯ್ಕೆ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿಯೇ.
40ರ ಅಸುಪಾಸಿನ ಆಟಗಾರರು ಕೂಡ ಉತ್ತಮ ಸರಾಸರಿ ಹೊಂದಿದ್ದಾರೆ. ಒಂದು ವೇಳೆ ಟೂರ್ನಿ ಅಥವಾ ಸರಣಿ ವೇಳೆ ಯಾವ ಆಟಗಾರನಾದರೂ ಗಾಯದ ಸಮಸ್ಯೆಗೆ ಒಳಗಾದರೆ ಆಗ ಕರುಣ್ ನಾಯರ್ ಗೆ ತಂಡದಲ್ಲಿ ಸ್ಥಾನ ನೀಡಲು ಯೋಚಿಸುತ್ತೇವೆ’ ಎಂದು ಬಿಸಿಸಿಐ ಆಯ್ಕೆಮಂಡಳಿ ಅಧ್ಯಕ್ಷ ಹೇಳಿದ್ದಾರೆ.