ಮಡಿಕೇರಿ,ಸೆ.16- ಜೀವನಾಡಿ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ 1.44ಕ್ಕೆ ಕಾವೇರಿ ಮಾತೆಯ ತೀರ್ಥೋದ್ಭವವಾಗಲಿದೆ.ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ 1.17 ರಂದು ಮಧ್ಯಾಹ್ನ 1.44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಕಾವೇರಿ ಮಾತೆ ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.
ಸೆ.26ರ ಬೆಳಿಗ್ಗೆ 9.31 ಕ್ಕೆ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4 ರಂದು ಬೆಳಿಗ್ಗೆ 8.33ಕ್ಕೆ ತುಲಾ ಲಗ್ನದಲ್ಲಿ ಆಜ್ಞಾ ಮಹೂರ್ತ, ಅ.14 ರಂದು ಬೆಳಿಗ್ಗೆ 11.45 ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸುವುದು ಹಾಗೂ ಅಂದು ಸಂಜೆ 4.45ಕ್ಕೆ ಮೀನಲಗ್ನದಲ್ಲಿ ಕಾಣಿಕೆ ಡಬ್ಬಿ ಇಡುವುದು, ಅ.17 ರ ಮಧ್ಯಾಹ್ನ 1.44ರ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ನಡೆಯಲಿದೆ ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಮಾಹಿತಿ ನೀಡಿದೆ.