Wednesday, January 15, 2025
Homeರಾಷ್ಟ್ರೀಯ | Nationalದೆಹಲಿ ಚುನಾವಣೆ ಸಂಧರ್ಭದಲ್ಲೇ ಕೇಜ್ರಿವಾಲ್‌ಗೆ ಸಂಕಷ್ಟ, ವಿಚಾರಣೆಗೆ ಅನುಮೋದನೆ

ದೆಹಲಿ ಚುನಾವಣೆ ಸಂಧರ್ಭದಲ್ಲೇ ಕೇಜ್ರಿವಾಲ್‌ಗೆ ಸಂಕಷ್ಟ, ವಿಚಾರಣೆಗೆ ಅನುಮೋದನೆ

Kejriwal In Trouble: Centre Grants ED Approval To Prosecute AAP Chief In Liquor Policy Case Ahead Of Delhi Polls

ನವದೆಹಲಿ,ಜ.15- ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್‌ ಆದಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಗೃಹ ಸಚಿವಾಲಯವು, ಜಾರಿ ನಿರ್ದೇಶನಾಲಯಕ್ಕೆ (ಇಡಿ) ಅನುಮೋದನೆ ನೀಡಿದೆ.

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿಕೆ ಸಕ್ಸೇನಾ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿಯನ್ನು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ನೀಡಿದ ನಂತರ ಗೃಹ ಇಲಾಖೆಯಿಂದ ಈ ನಿರ್ಧಾರವು ಬಂದಿದೆ.

ಕಳೆದ ನವೆಂಬರ್‌ನಲ್ಲಿ ನೀಡಿದ ಆದೇಶದಲ್ಲಿ, ಸಾರ್ವಜನಿಕ ಸೇವಕರನ್ನು ವಿಚಾರಣೆಗೆ ಒಳಪಡಿಸುವ ಮೊದಲು ಇಡಿ ಪೂರ್ವಾನುಮತಿ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಮತ್ತೊಂದೆಡೆ ಫೆ.5ರಂದು ದೆಹಲಿಯಲ್ಲಿ ಮತದಾನ ನಡೆಯುತ್ತಿರುವ ಸಂದರ್ಭದಲ್ಲೇ ಅರವಿಂದ್‌ ಕೇಜ್ರಿವಾಲ್‌ ಬಗ್ಗೆ ಈ ಸುದ್ದಿ ಹೊರಬಿದ್ದಿದೆ.

ಕೇಜ್ರಿವಾಲ್‌ ವಿರುದ್ಧ ಆರೋಪಗಳನ್ನು ಸಾಬೀತುಪಡಿಸಿದ ನಂತರ ವಿಚಾರಣೆಗಳು ಪ್ರಾರಂಭವಾಗಬಹುದು, ಇದರಿಂದಾಗಿ ಅವರು ದೆಹಲಿ ಸಿಎಂ ಆಗಿ ಮರಳಲು ಹೆಚ್ಚು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.

ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಪ್ರಕರಣ ದಾಖಲಿಸಲು ಗೃಹ ವ್ಯವಹಾರಗಳ ಸಚಿವಾಲಯವು ಇಡಿಗೆ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಅನುಮತಿ ನೀಡಿದೆ. ದೆಹಲಿಯ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಅರವಿಂದ್‌ ಕೇಜ್ರಿವಾಲ್‌ ವಿರುದ್ಧದ ಆರೋಪಗಳನ್ನು ರೂಪಿಸುವುದನ್ನು ತಡೆಯಾಜ್ಞೆ ನೀಡಿತ್ತು.

ವಾಸ್ತವವಾಗಿ, ಅರವಿಂದ್‌ ಕೇಜ್ರಿವಾಲ್‌ ದೆಹಲಿ ಹೈಕೋರ್ಟ್‌ನ ಬಾಗಿಲು ತಟ್ಟಿದ್ದರು. ಪಿಎಂಎಲ್‌ಎ ಅಡಿಯಲ್ಲಿ ವಿಚಾರಣೆ ನಡೆಸಲು ಅಗತ್ಯ ಅನುಮೋದನೆ ಇಲ್ಲದೆಯೇ ವಿಚಾರಣಾ ನ್ಯಾಯಾಲಯವು ಚಾರ್ಜ್‌ಶೀಟ್‌ ಅನ್ನು ಗಮನಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದರು.

ದೆಹಲಿ ಮದ್ಯ ಪ್ರಕರಣದಲ್ಲಿ ಸಿಬಿಐ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಚಾರ್ಜ್‌ಶೀಟ್‌ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಸಿಬಿಐ ಕಳೆದ ವರ್ಷ ಆಗಸ್ಟ್‌ನಲ್ಲಿ ಅಗತ್ಯ ಅನುಮೋದನೆಯನ್ನು ಪಡೆದಿತ್ತು. ಆದಾಗ್ಯೂ ಇಡಿಗೆ ಇನ್ನೂ ಅನುಮೋದನೆ ಸಿಕ್ಕಿರಲಿಲ್ಲ. ಆದರೆ ಈಗ ಗೃಹ ಸಚಿವಾಲಯವೇ ಕ್ರಮ ಕೈಗೊಳ್ಳಲು ಅನುಮತಿ ನೀಡಿದೆ.

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ, ಅರವಿಂದ್‌ ಕೇಜ್ರಿವಾಲ್‌ ಮತ್ತು ಆಮ್‌ ಆದಿ ಪಕ್ಷ (ಎಎಪಿ) ಸೌತ್‌ ಗ್ರೂಪ್‌ನಿಂದ ಲಂಚ ಪಡೆದ ಆರೋಪ ಹೊರಿಸಲಾಗಿದೆ. ಈ ಗುಂಪು ರಾಷ್ಟ್ರ ರಾಜಧಾನಿಯಲ್ಲಿ ಮದ್ಯ ಮಾರಾಟ ಮತ್ತು ವಿತರಣೆಯನ್ನು ನಿಯಂತ್ರಿಸುತ್ತಿತ್ತು. 2021-22ಕ್ಕೆ ದೆಹಲಿಯ ಎಎಪಿ ಸರ್ಕಾರ ರೂಪಿಸಿದ ಅಬಕಾರಿ ನೀತಿಯಿಂದ ಈ ಗುಂಪು ಲಾಭ ಪಡೆದಿದೆ ಎಂದು ಆರೋಪಿಸಲಾಗಿದೆ.

ಪಿಎಂಎಲ್‌ಎ ಅಡಿಯಲ್ಲಿ ವಿಚಾರಣೆ ನಡೆಸಲು ಇಡಿಗೆ ವಿಶೇಷ ಅನುಮೋದನೆ ಬೇಕು ಎಂದು ಸುಪ್ರೀಂ ಕೋರ್ಟ್‌ ತನ್ನ ನವೆಂಬರ್‌ ಆದೇಶದಲ್ಲಿ ಹೇಳಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕಾದ ಸಂಗತಿ.

ಅದೇ ಸಮಯದಲ್ಲಿ, ಪಿಎಂಎಲ್‌ಎ ಅಡಿಯಲ್ಲಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಇಡಿಗೆ ಸಕ್ಷಮ ಪ್ರಾಧಿಕಾರದಿಂದ ವಿಶೇಷ ಅನುಮೋದನೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ನವೆಂಬರ್‌ನ ಆದೇಶದಲ್ಲಿ ಹೇಳಿತ್ತು. ಇದಾದ ನಂತರ, ಪಿಎಂಎಲ್‌ಎ ಅಡಿಯಲ್ಲಿ ಆರೋಪಿಸಲಾದ ಇತರ ಜನರು ಸಹ ತಮ ವಿರುದ್ಧದ ಚಾರ್ಜ್‌ಶೀಟ್‌ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ, ಸಿಆರ್‌ಪಿ ಸೆಕ್ಷನ್‌ 197 (1)ರಡಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವಂತೆ ಇಡಿಗೆ ಸೂಚಿಸಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಲು ಇಡಿ ಕೂಡ ಸಿದ್ಧತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದ್ದು, ನಂತರ ಆರೋಪಿಗಳು ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಹಲವಾರು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಮಾರ್ಚ್‌ 21ರಂದು ಇಡಿ ಅವರನ್ನು ಮೊದಲು ಬಂಧಿಸಿತ್ತು. ನಂತರ, ಕೇಂದ್ರೀಯ ತನಿಖಾ ದಳ (ಸಿಬಿಐ) ಭ್ರಷ್ಟಾಚಾರ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನು 2024ರ ಜೂನ್‌ 26ರಂದು ಬಂಧಿಸಿತ್ತು.

RELATED ARTICLES

Latest News