ತಿರುವನಂತಪುರಂ, ಅ. 20 – ಕಣ್ಣೂರಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ನವೀನ್ ಬಾಬು ಆತ್ಮಹತ್ಯೆಪ್ರಕರಣದಲ್ಲಿ ಸಿಪಿಐ(ಎಂ) ನಾಯಕಿ ಪಿಪಿ ದಿವ್ಯ ಪಾತ್ರದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೌನ ದುರಾದೃಷ್ಟಕರ ಎಂದು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಸ್ಥ ಕೆ.ಸುಧಾಕರನ್ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಸಿಎಂ ಏಕೆ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ . ಭ್ರಷ್ಟಾಚಾರ ಆರೋಪ ಮಾಡಿ ಅಧಿಕಾರಿಯನ್ನು ಮಾನಸಿಕವಾಗಿ ಹಿಂಸೆ ನೀಡಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು.ಆದರೆ ರಾಜ್ಯ ಸರ್ಕಾರ ನಿಲುವು ಖಂಡನೀಯ ಕಡೇ ಪಕ್ಷ ದುಃಖಿತ ಕುಟುಂಬಕ್ಕೆ ಸಾಂತ್ವನವನ್ನು ಸಹ ತಿಳಿಸಲಿಲ್ಲ ಎಂದು ಕಾಂಗ್ರೇಸ್ ನಾಯಕರು ಕಿಡಿ ಕಾರಿದ್ದಾರೆ.
ಬಾಬು ಪ್ರಾಮಾಣಿಕ ಮತ್ತು ಉತ್ತಮ ಅಧಿಕಾರಿ ಎಂದು ಬಣ್ಣಿಸಿದ ಸುಧಾಕರನ್, ಈ ಪ್ರಕರಣದ ತನಿಖೆಗೆ ಸರ್ಕಾರ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು. ಸಿಎಂ ಮತ್ತು ಅವರ ಕಚೇರಿಯ ಅಧಿಕಾರಿಗಳು ಬಾಬು ಅವರ ಆತ್ಮಹತ್ಯೆಯ ಹಿಂದಿನ ಅಪರಾಧಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಾಬು ಭ್ರಷ್ಟ ಎಂದು ತೋರಿಸಲು ಸಿಪಿಐ(ಎಂ) ನಕಲಿ ದಾಖಲೆ ಸೃಷ್ಟಿಸಿದ್ದ ಕಣ್ಣೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ದಿವ್ಯಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಸಾರ್ವಜನಿಕವಾಗಿ ಬಾಬು ವಿರುದ್ಧ ಆರೋಪ ಮಾಡಿದಾಗ ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ಏಕೆ ಮೌನ ವಹಿಸಿದ್ದಾರೆ ಎಂದು ಸತೀಶನ್ ಪ್ರಶ್ನಿಸಿದರು.ಆರೋಪದ ಹಿಂದೆ ಷಡ್ಯಂತ್ರವಿದೆ ಎಂದರು.
ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 108 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ದಿವ್ಯ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಇದಾದ ಮುಕ್ಷನವೇ ದಿವ್ಯಅವರನ್ನು ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದಿಂದ
ಪದಚ್ಯತಗೊಳಿಸಲಾಗಿದೆ. ಬಾಬು ಸಾವಿಗೆ ಕಾರಣವಾದ ಸಂದರ್ಭಗಳನ್ನು ಪರಿಶೀಲಿಸುವ ಕಾರ್ಯವನ್ನು ಭೂಕಂದಾಯ ಜಂಟಿ ಆಯುಕ್ತ ಎ ಗೀತಾ ಅವರು ನಡೆಸುತ್ತಿದ್ದು, ಜಿಲ್ಲಾಧಿಕಾರಿ ಮತ್ತು ಇತರ ವಿವಿಧ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.