Sunday, October 6, 2024
Homeರಾಷ್ಟ್ರೀಯ | Nationalಶಾಲಾ ಪಠ್ಯದಲ್ಲಿ ಕೃತಕ ಬುದ್ಧಿಮತ್ತೆ(AI) ಬಳಕೆಗೆ ಕೇರಳ ನಿರ್ಧಾರ

ಶಾಲಾ ಪಠ್ಯದಲ್ಲಿ ಕೃತಕ ಬುದ್ಧಿಮತ್ತೆ(AI) ಬಳಕೆಗೆ ಕೇರಳ ನಿರ್ಧಾರ

ತಿರುವನಂತಪುರಂ, ಮೇ 30 (ಪಿಟಿಐ) ಶಿಕ್ಷಣವನ್ನು ಆಧುನೀಕರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಕೇರಳ ಸರ್ಕಾರವೂ ತನ್ನ ಶಾಲಾ ಪಠ್ಯಪುಸ್ತಕಗಳಲ್ಲಿ ಕತಕ ಬುದ್ಧಿಮತ್ತೆಯನ್ನು (ಎಐ) ಸಂಯೋಜಿಸುವ ನಿರ್ಧಾರ ಕೈಗೊಂಡಿದೆ.

7 ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಪಠ್ಯಕ್ರಮದಲ್ಲಿ ಎಐ ಕಲಿಕೆಯ ಮಾಡ್ಯೂಲ್‌ಗಳನ್ನು ಪರಿಚಯಿಸುವ ಯೋಜನೆಯನ್ನು ರಾಜ್ಯವು ಅನಾವರಣಗೊಳಿಸಿದೆ.

ಈ ಕ್ರಮವು ಕೇರಳದಾದ್ಯಂತ 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲು ಸಜ್ಜಾಗಿದೆ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಎಐ ಕ್ಷೇತ್ರವನ್ನು ಅಧ್ಯಯನ ಮಾಡಲು ಅವರಿಗೆ ಅವಕಾಶವಿದೆ ಎಂದು ಕೇರಳ ಇನ್ಫಾಸ್ಟ್ರಕ್ಚರ್‌ ಮತ್ತು ಟೆಕ್ನಾಲಜಿ ಫಾರ್‌ ಎಜುಕೇಶನ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಸ್ಥೆಯ ಸಿಇಒ ಅನ್ವರ್‌ ಸಾದತ್‌ ಅವರು ಕಂಪ್ಯೂಟರ್‌ ವಿಷನ್‌ ಅಧ್ಯಾಯದ ಚಟುವಟಿಕೆಗಳಲ್ಲಿ ಒಂದಾದ ವಿದ್ಯಾರ್ಥಿಗಳು ತಮದೇ ಆದ ಎಐ ಪ್ರೋಗ್ರಾಂ ಅನ್ನು ರಚಿಸುವುದನ್ನು ಒಳಗೊಂಡಿರುತ್ತದೆ, ಅದು ಮಾನವ ಮುಖಭಾವಗಳನ್ನು ಗುರುತಿಸುತ್ತದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮವು ವ್ಯಕ್ತಿಯ ಮುಖದ ಮೇಲೆ ಏಳು ವಿಭಿನ್ನ ಭಾವನೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಇದು ಭಾರತದಲ್ಲಿ ಮೊದಲ ಬಾರಿಗೆ ಒಂದು ತರಗತಿಯ ಎಲ್ಲಾ ವಿದ್ಯಾರ್ಥಿಗಳು ಏಕರೂಪವಾಗಿ ಎಐ ಕಲಿಯಲು ಅವಕಾಶವನ್ನು ಪಡೆಯುತ್ತಿದೆ ಎಂದು ಅವರು ಹೇಳಿದರು.

ಜೂನ್‌ 3 ರಂದು ಪ್ರಾರಂಭವಾಗುವ ಹೊಸ ಶೈಕ್ಷಣಿಕ ವರ್ಷವು ಮಲಯಾಳಂ, ಇಂಗ್ಲಿಷ್‌‍, ತಮಿಳು ಮತ್ತು ಕನ್ನಡ ಮಾಧ್ಯಮಗಳಲ್ಲಿ 1, 3, 5 ಮತ್ತು 7 ನೇ ತರಗತಿಗಳಿಗೆ ಹೊಸ ಎಐ ಪಠ್ಯಪುಸ್ತಕಗಳನ್ನು ಪರಿಚಯಿಸಲಾಗುತ್ತಿದೆ.

ಪಠ್ಯಕ್ರಮದ ಚೌಕಟ್ಟು ಮಕ್ಕಳ ವಿಮರ್ಶಾತಕ ಚಿಂತನೆ, ವಿಶ್ಲೇಷಣಾತಕ ಕೌಶಲ್ಯಗಳು ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳ ಬೆಳವಣಿಗೆಗೆ ಒತ್ತು ನೀಡುತ್ತದೆ, ಇದು ಅವರ ಸಮಗ್ರ ಬೆಳವಣಿಗೆಗೆ ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News