Sunday, July 7, 2024
Homeರಾಷ್ಟ್ರೀಯರೈಲಿನಲ್ಲಿ ಮೇಲಿನ ಬರ್ತ್ ಕೊಂಡಿ ಕಳಚಿ ಕೆಳಗೆ ಬಿದ್ದು ಮಲಗಿದ್ದ ಕೇರಳದ ವ್ಯಕ್ತಿ ಸಾವು

ರೈಲಿನಲ್ಲಿ ಮೇಲಿನ ಬರ್ತ್ ಕೊಂಡಿ ಕಳಚಿ ಕೆಳಗೆ ಬಿದ್ದು ಮಲಗಿದ್ದ ಕೇರಳದ ವ್ಯಕ್ತಿ ಸಾವು

ಹೈದರಾಬಾದ್‌,ಜೂ.27– ಸ್ಲೀಪರ್‌ ಕೋಚ್‌ ರೈಲಿನ ಕೆಳಗಿನ ಬರ್ತ್‌ ನಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಮದ್ಯದಲ್ಲಿದ್ದ ಬರ್ತ್‌ ನ ಕೊಕ್ಕೆ ಬೇರ್ಪಟ್ಟು ಯುವಕ ಬಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಹೈದಾರಾಬಾದ್‌ ನಲ್ಲಿ ನಡೆದಿದೆ.

ಕೇರಳದ 60 ವರ್ಷದ ಅಲಿ ಖಾನ್‌ ಟಿಕೆ ಚಿಕಿತ್ಸೆ ಲಿಸದೆ ಸಾವನ್ನಪ್ಪಿದ್ದಾರೆ. ಜೂನ್‌ 16 ರಂದು ಮಿಲೇನಿಯಂ ಎಕ್‌್ಸಪ್ರೆಸ್‌‍ನಲ್ಲಿ ತ್ರಿಶೂರ್‌ನಿಂದ ಆಗ್ರಾ ಕಂಟೋನೆಂಟ್‌ಗೆ ಪ್ರಯಾಣಿಸುತ್ತಿದ್ದರು. ಅವರು ಸ್ಲೀಪರ್‌ ಕೋಚ್‌ನ ಕೆಳಗಿನ ಬರ್ತ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯದ ಬರ್ತ್‌ನ ಚೈನ್‌ ಸರಿಯಾಗಿ ಲಾಕ್‌ ಮಾಡಲಾಗಿತ್ತು ಎಂದು ವರದಿಯಾಗಿದೆ. ಆದರೆ ಪ್ರಯಾಣದ ಸಮಯದಲ್ಲಿ, ಕೊಕ್ಕೆ ಬೇರ್ಪಟ್ಟಿದೆ. ಮಧ್ಯದ ಬರ್ತ್‌ ಅವರ ಮೇಲೆ ಬಿದ್ದು ಕುತ್ತಿಗೆಗೆ ಗಾಯವಾಗಿತ್ತು. ಪರಿಣಾಮ ಆತ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೆ ಸಿಬ್ಬಂದಿ ಸಂಜೆ 6.30 ರ ಸುಮಾರಿಗೆ ಘಟನೆಯ ಬಗ್ಗೆ ಮಾಹಿತಿ ಪಡೆದು, ರಾಮಗುಂಡಂನಲ್ಲಿ ರೈಲು ನಿಲ್ಲಿಸಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಲಿ ಅವರನ್ನು ವಾರಂಗಲ್‌ನ ಖಾಸಗಿ ಆಸ್ಪತ್ರೆಗೆ ಮತ್ತು ಹೈದರಾಬಾದ್ನ ಬೇಗಂಪೇಟೆಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಲಕಾರಿಯಾಗದೆ ಜೂ.24ರಂದು ಮೃತಪಟ್ಟಿದ್ದು, ಮಂಚೇರಿಯಲ್‌ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಏತನಧ್ಯೆ, ರೈಲ್ವೇ ಸಚಿವಾಲಯದ ಅಧಿಕೃತ ವಕ್ತಾರರು ಎಕ್‌್ಸನಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಆಸನವು ಹಾನಿಗೊಳಗಾದ ಸ್ಥಿತಿಯಲ್ಲಿಲ್ಲ, ಅದು ಕೆಳಗೆ ಬಿದ್ದಿಲ್ಲ ಅಥವಾ ಕುಸಿದಿಲ್ಲ ಅಥವಾ ಬಿದ್ದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ನಿಜಾಮುದ್ದೀನ್‌ ನಿಲ್ದಾಣದಲ್ಲಿ ಆಸನವನ್ನು ಪರಿಶೀಲಿಸಲಾಯಿತು, ಅದರಲ್ಲಿ ಯಾವುದೇ ತೊಂದರೆ ಕಂಡು ಬಂದಿಲ್ಲ.

ಮೇಲಿನ ಬರ್ತ್‌ನಲ್ಲಿರುವವರು ಸರಿಯಾಗಿ ಸರಪಳಿಯನ್ನು ಹಾಕದೇ ಇದ್ದ ಕಾರಣ ಮೇಲಿನ ಸೀಟು ಕೆಳಗೆ ಬಿದ್ದಿದೆ. ಇದರಿಂದ ಈ ಅವಘಡ ಉಂಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

RELATED ARTICLES

Latest News