ಕೊಚ್ಚಿ,ಅ.31- ಕೇರಳದ ಪ್ರಾರ್ಥನಾ ಸಭೆಯಲ್ಲಿ ಸರಣಿ ಸ್ಪೋಟಕ್ಕೆ ಕಾರಣಕರ್ತನಾದ ಪ್ರಮುಖ ಶಂಕಿತ ಆರೋಪಿ ತಾನು ಅಂತರ್ಜಾಲದಿಂದ ಬಾಂಬ್ ತಯಾರಿಕೆ ಕಲಿತು, ಕೇವಲ 3 ಸಾವಿರ ಖರ್ಚು ಮಾಡಿ ಬಾಂಬ್ ತಯಾರಿಸಿರುವುದಾಗಿ ಹೇಳಿಕೊಂಡಿದ್ದಾನಂತೆ.
ಡೊಮಿನಿಕ್ ಮಾರ್ಟಿನ್ ಅವರ ಕುಟುಂಬವು ಕೊಚ್ಚಿ ಬಳಿ ಐದು ವರ್ಷಗಳಿಂದ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದೆ. ಎಲೆಕ್ಟ್ರಿಕ್ ಸಕ್ರ್ಯೂಟ್‍ನಲ್ಲಿ ಪರಿಣಿತ ಎಂದು ಹೇಳಲಾದ ಮಾರ್ಟಿನ್, ದುಬೈನಲ್ಲಿ ಫೋರ್‍ಮ್ಯಾನ್ ಆಗಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಎರಡು ತಿಂಗಳ ಹಿಂದೆ ದುಬೈನಿಂದ ಮರಳಿ ಬಂದು ಈ ಸ್ಪೋಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಐಇಡಿಗಳನ್ನು ಪಟಾಕಿಗಳಲ್ಲಿ ಬಳಸುವ ಕಡಿಮೆ ದರ್ಜೆಯ ಸ್ಪೋಟಕಗಳಿಂದ ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಮಾರ್ಟಿನ್ ತನ್ನ ಮನೆಯಲ್ಲಿ ಐಇಡಿಗಳನ್ನು ಜೋಡಿಸಿದ್ದಾನೆ. ಯೆಹೋವನ ಸಾಕ್ಷಿಗಳ ಸಮಾವೇಶದಲ್ಲಿ ಭಾಗವಹಿಸಿದವರನ್ನು ಕೊಲ್ಲುವ ಉದ್ದೇಶದಿಂದ ಮಾರ್ಟಿನ್ ಸ್ಪೋಟಕಗಳನ್ನು ಹಾಲ್‍ನೊಳಗೆ ಇರಿಸಿದ್ದ.
ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ: ಕವಿತಾ
ಪೊಲೀಸರಿಗೆ ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವೀಡಿಯೊ ಸಂದೇಶವನ್ನು ಸಹ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಸಂಘಟನೆಯ ಬೋಧನೆಗಳು ದೇಶದ್ರೋಹಿ ಆಗಿರುವುದರಿಂದ ತಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.
ಸಮುದಾಯವು ಜನರಿಗೆ, ಮಕ್ಕಳಿಗೆ ಸಹ ತಪ್ಪು ಮೌಲ್ಯಗಳನ್ನು ಕಲಿಸುತ್ತಿದೆ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.ಅದನ್ನು ನಿಲ್ಲಿಸಲು ಕೇಳಿಕೊಂಡರು ಆದರೆ ಯಾರೂ ಅವರನ್ನು ಗಮನಿಸಲಿಲ್ಲ ಎಂದು ಅವರು ಹೇಳಿದರು. ಈ ಸಮುದಾಯವು ರಾಷ್ಟ್ರಕ್ಕೆ ಕೆಟ್ಟದು ಎಂದು ಅವರು ಅರ್ಥಮಾಡಿಕೊಂಡಾಗ, ಅವರು ಸರಣಿ ಸ್ಪೋಟಗಳನ್ನು ಎಂಜಿನಿಯರ್ ಮಾಡಲು ನಿರ್ಧರಿಸಿದರು ಎಂದು ತಿಳಿಸಿದ್ದಾನೆ.
ಭಾನುವಾರ ಕೊಚ್ಚಿ ಬಳಿಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಇಬ್ಬರು ಮಹಿಳೆಯರು ಮತ್ತು 12 ವರ್ಷದ ಬಾಲಕಿ ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ. ಯೆಹೋವನ ಸಾಕ್ಷಿಗಳ ಅಧಿವೇಶನದಲ್ಲಿ ಸುಮಾರು 2,000 ಜನರು ಹಾಜರಿದ್ದರು.
ಪ್ರಾರ್ಥನಾ ಸಭೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಕನಿಷ್ಠ ಮೂರು ಸ್ಪೋಟಗಳು ವರದಿಯಾಗಿವೆ. ಪ್ರಾರ್ಥನೆಯ ಮಧ್ಯೆ ಮೊದಲ ಸೋಟ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಸುದ್ದಿಗಾರರಿಗೆ ತಿಳಿಸಿದ್ದರು. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣತಿ ಹೊಂದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಇದೀಗ ಸರಣಿ ಸ್ಪೋಟಗಳ ತನಿಖೆ ನಡೆಸಲಿದೆ.