ತಿರುವನಂತಪುರಂ, ಜ.20- ತನ್ನ ಪ್ರಿಯಕರನನ್ನು ಭೀಕರವಾಗಿ ಕೊಲೆ ಮಾಡಿ ರಾಜ್ಯದಲ್ಲಿ ಸಂಚಲನ ಮೂಡಿಸಿದ ಮಹಿಳೆಗೆ ಕೇರಳದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಗ್ರೀಷ್ಮಾ(24) ಶಿಕ್ಷೆಗೆ ಒಳಗಾದ ಅಪರಾಧಿ.
ಇಲ್ಲಿನ ನೆಯ್ಯಟ್ಟಿಂಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಆಕೆಯ ಚಿಕ್ಕಪ್ಪ, ಪ್ರಕರಣದ ಮೂರನೇ ಆರೋಪಿ ನಿರ್ಮಲಕುಮಾರನ್ ನಾಯರ್ಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಅಪರಾಧಿ ಗ್ರೀಷಾಳ ಶೈಕ್ಷಣಿಕ ಸಾಧನೆ,ಹೆತ್ತವರ ಏಕೈಕ ಮಗಳು ಎಂಬ ಅಂಶವನ್ನು ಉಲ್ಲೇಖಿಸಿ ಶಿಕ್ಷೆಯಲ್ಲಿ ಸಡಿಲತೆಯನ್ನು ಕೋರಿದ್ದರು ಆದರೆ ನ್ಯಾಯಾಲಯ ಪರಿಗಣಿಸಿಲ್ಲ ತನ್ನ 586 ಪುಟಗಳ ತೀರ್ಪಿನಲ್ಲಿ,ಹೀನ ಕೃತ್ಯದ ಅಪರಾಧಿಯ ವಯಸ್ಸನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ.ಈಕೆಯಿಂದ ಕೊಲೆಯಾದ ಶರೋನ್ ರಾಜ್ ತಿರುವನಂತಪುರಂ ಜಿಲ್ಲೆಯ ಪರಸ್ಸಲ ಮೂಲದವರು.