ನವದೆಹಲಿ, ನ. 12- ಕೆನಡಾದಲ್ಲಿರುವ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸುತ್ತಿದ್ದ ಖಲಿಸ್ತಾನಿಗಳ ಕಣ್ಣು ಇದೀಗ ಅಯೋಧ್ಯೆಯಲ್ಲಿರುವ ರಾಮಮಂದಿರದ ಮೇಲೆ ಬಿದ್ದಿದೆ.ಇತ್ತಿಚೆಗಷ್ಟೆ ಉದ್ಘಾಟನೆಗೊಂಡಿರುವ ರಾಮಮಂದಿರಕ್ಕೆ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುವುದರಿಂದ ಖಲಿಸ್ತಾನಿಗಳ ಕಣ್ಣು ರಾಮಮಂದಿರದ ಮೇಲೆ ಬಿದ್ದಿದೆ.
ಖಲಿಸ್ತಾನಿ ಉಗ್ರರು ಅಯೋಧ್ಯೆ ಶ್ರೀರಾಮಂದಿರ ಮೇಲೆ ಹಾಗೂ ಕೆನಡಾದ ಹಿಂದೂ ದೇವಾಲಯಗಳ ಮೇಲೆ ಇದೇ ನ. 16 ಮತ್ತು 17ರಂದು ದಾಳಿ ನಡೆಸುವುದಾಗಿ ಬೆದರಿಕೆ ನೀಡಿದ್ದಾರೆ. ಈ ಸಂಬಂಧ ಕೆನಡಾ ದೇವಾಲಯಗಳು ಹಾಗೂ ರಾಮಮಂದಿರ ದೇವಾಲಯದ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.
ಅಯೋಧ್ಯೆ ರಾಮ ಮಂದಿರ ಮಾತ್ರವಲ್ಲದೇ ಕೆನಡಾ ಸೇರಿ ಇತರ ಹಿಂದೂ ದೇವಾಲಯಗಳ ಮೇಲೆ ಇದೇ ತಾರೀಖಿನಲ್ಲಿ ದಾಳಿ ಮಾಡುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾರೆನೆಂದು ವರದಿ ಆಗಿದೆ.
ಇನ್ನೂ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರಿಗೂ ಸಹ ಅವರಿಗೆ ನೀವು ಕೆನಡಾ ಪರವಾಗಿರಿ ಇಲ್ಲವೇ ಕೆನಡಾ ಬಿಟ್ಟು ತೊಲಗಿ ಎಂದು ಬೆದರಿಕೆ ಒಡ್ಡಿದ್ದಾನೆ.ಈ ಹಿಂದಿನಿಂದಲೂ ಖಲಿಸ್ತಾನಿ ಉಗ್ರರು ಭಾರತದ ಮೇಲೆ ಒಂದಿಲ್ಲ ಒಂದು ಕಾರಣದಿಂದ ಧಮ್ಕಿ ಹಾಕುತ್ತಲೇ ಬಂದಿದ್ದಾರೆ. ಈ ಬಾರಿ ರಾಮ ಮಂದಿರ ಹಸರಿನಲ್ಲಿ ಬೆದರಿಕೆ ಒಡ್ಡಿದ್ದಾರೆ.
ರಾಮಮಂದಿರ ಸೇರಿ ಕೆನಡಾದ ಕಾಲಿಬರಿ ಮಂದಿರ, ತ್ರಿವೇಣಿ ಮಂದಿರ ಮೇಲೂ ದಾಳಿ ನಡೆಸಲಿದ್ದೇವೆ ಎಂದು ಉಗ್ರ ಪನ್ನೂನ್ ಸಂದೇಶ ರವಾನಿಸಿದ್ದಾನೆ. ಈ ಹಿಂದೆಯು ಇಂತ್ದೆ ಬೆದರಿಕೆ ಹಾಕಿ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ. ನಾನು ದಾಳಿ ಮಾಡುವ ದಿನ ಭಾರತೀಯರು ಈ ಮಂದಿರಗಳಿಗೆ ತೆರಳಬೇಡಿ ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.