Sunday, November 24, 2024
Homeಆರೋಗ್ಯ / ಜೀವನಶೈಲಿಪೈಲೊನೆಫೆರಿಟಿಸ್ ಎನ್ನುವ ಅಪಾಯಕಾರಿ ಮೂತ್ರಪಿಂಡದ ಕಾಯಿಲೆ ಬಗ್ಗೆ ಎಚ್ಚರ

ಪೈಲೊನೆಫೆರಿಟಿಸ್ ಎನ್ನುವ ಅಪಾಯಕಾರಿ ಮೂತ್ರಪಿಂಡದ ಕಾಯಿಲೆ ಬಗ್ಗೆ ಎಚ್ಚರ

ಪೈಲೊನೆಫೆರಿಟಿಸ್ (Pyelonephritis) ಎಂಬ ಒಂದು ವಿಧದ ಮೂತ್ರಪಿಂಡದ ಸೋಂಕು ಮಧುಮೇಹ ಇರುವ ವ್ಯಕ್ತಿಗಳಲ್ಲಿ ಉಂಟಾಗಬಹುದಾದ ಗಂಭೀರ ಆರೋಗ್ಯ ಸಮಸ್ಯೆ ಆಗಿದೆ. ಬ್ಯಾಕ್ಟೀರಿಯಾಗಳು ಮೂತ್ರಪಿಂಡಗಳಿಗೆ ಪ್ರವೇಶಿಸಿದಾಗ ಈ ಕಾಯಿಲೆ ಸಂಭವಿಸಲಿದ್ದು, ಉರಿಯೂತವನ್ನು ಉಂಟುಮಾಡಿ, ಶಾಶ್ವತ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ.

ಮಧುಮೇಹ ಮತ್ತು ಪೈಲೊನೆಫೆರಿಟಿಸ್ ನಡುವಿನ ಸಂಬಂಧವೇನು?
ಹಲವಾರು ಅಂಶಗಳಿಂದಾಗಿ ಮಧುಮೇಹವು ಪೈಲೊನೆಫೆರಿಟಿಸ್ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದ ಸಕ್ಕರೆ ಮಟ್ಟವು ಮೂತ್ರಕೋಶವನ್ನು ನಿಯಂತ್ರಿಸುವ ನರಗಳನ್ನು ಹಾನಿಗೊಳಿಸುತ್ತದೆ, ಇದರಿಂದ ಅಪಾಯಕಾರಿ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಕಾರಣವಾಗುತ್ತದೆ. ಹೆಚ್ಚುವರಿಯಾಗಿ, ಮಧುಮೇಹ-ಸಂಬಂಧಿತ ಮೂತ್ರಪಿಂಡದ ಹಾನಿ (ನೆಫ್ರೋಪತಿ) ತ್ಯಾಜ್ಯ ಮತ್ತು ಬ್ಯಾಕ್ಟೀರಿಯಾವನ್ನು ಫಿಲ್ಟರ್ ಮಾಡುವ ಮೂತ್ರಪಿಂಡದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ರೋಗಲಕ್ಷಣಗಳೇನು?
ಪೈಲೊನೆಫೆರಿಟಿಸ್‌ನ ಲಕ್ಷಣಗಳು ತೀರ ಸಾಮಾನ್ಯ ಲಕ್ಷಣಗಳೇ ಆಗಿವೆ. ಜ್ವರ, ಶೀತ, ಪಾರ್ಶ್ವ ನೋವು ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಈ ಕಾಯಿಲೆ ಇರುವ ಸಾಧ್ಯತೆ ಇದೆ. ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ, ಈ ರೋಗಲಕ್ಷಣಗಳನ್ನು ಕಾಣಿಸದೇ ಇರಬಹುದು. ಹೀಗಾಗಿ ಮಧುಮೇಹಿಗಳಿಗೆ ಈ ಕಾಯಿಲೆ ಹೆಚ್ಚು ಅಪಾಯಕಾರಿ. ಸದ್ದಿಲ್ಲದೇ ಮೂತ್ರಪಿಂಡದ ಹಾನಿಗೆ ಈ ಕಾಯಿಲೆ ಕಾರಣವಾಗಬಹುದು. ಮಧುಮೇಹ ಇರುವವರು ತಪ್ಪದೇ ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆಗಳ ಮೂಲಕ ಈ ಕಾಯಿಲೆಗಳನ್ನು ಪತ್ತೆ ಹಚ್ಚಬಹುದು.

ಚಿಕಿತ್ಸೆ ಏನು?
ಪೈಲೊನೆಫೆರಿಟಿಸ್ ಇರುವ ವ್ಯಕ್ತಿಯು ಈ ಕಾಯಿಲೆಯ ರೋಗ ಲಕ್ಷಣ ಕಡಿಮೆ ಮಾಡಿಕೊಳ್ಳುವುದು ಮೊದಲ ಆದ್ಯತೆ ಇರಲಿ. ಈ ಲಕ್ಷಣಗಳು ಹೆಚ್ಚಾಗಿದ್ದರೆ ಕೂಡಲೇ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ಒಂದು ವೇಳೆ ಈ ಕಾಯಿಲೆ ದೀರ್ಘಾವಧಿಯವರೆಗೆ ಇದ್ದರೆ ಶಾಶ್ವತವಾಗಿ ಪೂತ್ರಪಿಂಡದ ಹಾನಿಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ರೋಗಲಕ್ಷಣ ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಿ. ಇದು ಗುಣಮುಖವಾಗುವ ಕಾಯಿಲೆಯಾಗಿದೆ. ಆದರೆ ತಡಮಾಡಬಾರದಷ್ಟೆ. ಇನ್ನು, ಮಧುಮೇಹಿಗಳು ಮೊದಲು ತಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಸಮತೋಲದಲ್ಲಿ ಇಡುವ ಅಗತ್ಯವಿದೆ. ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದು.

  • ಡಾ ವಿಶಾಲ್, ಕನ್ಸಲ್ಟೆಂಟ್-ಯೂರಾಲಜಿ, ಫೋರ್ಟಿಸ್ ಆಸ್ಪತ್ರೆ, ರಾಜಾಜಿ ನಗರ
RELATED ARTICLES

Latest News