ಭೂಪಾಲ್,ಆ.4– ಹಾವಿಗಿಂತ ಮನುಷ್ಯನೇ ಹೆಚ್ಚು ವಿಷಕಾರಿ ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಲಭಿಸಿದೆ. ವ್ಯಕ್ತಿಯೊಬ್ಬನಿಗೆ ಕಚ್ಚಿದ ಮರು ಕ್ಷಣವೇ ಕಾಳಿಂಗ ಸರ್ಪ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕಾಳಿಂಗ ಸರ್ಪವನ್ನೇ ಬಲಿ ತೆಗೆದುಕೊಂಡಿರುವ ವ್ಯಕ್ತಿಯನ್ನು ಮಧ್ಯಪ್ರದೇಶದ ಸಾಗರದ ನಾರಾಯಾವಳಿ ನಿವಾಸಿ ಚಂದ್ರಕುಮಾರ್ ಎಂದು ಗುರುತಿಸಲಾಗಿದೆ.
ಕಾಳಿಂಗ ಸರ್ಪ ಕಚ್ಚಿದ ಕೂಡಲೇ ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆಗ ಆತ ಆರೋಗ್ಯವಾಗಿಯೇ ಇದ್ದ ಆದರೆ ಆತನಿಗೆ ಕಚ್ಚಿದ್ದ ಕಾಳಿಂಗ ಸರ್ಪ ಮರುಕ್ಷಣವೇ ಸತ್ತು ಬಿದ್ದಿತ್ತು ಎಂದು ವರದಿಯಾಗಿದೆ.ಕಾಳಿಂಗಸರ್ಪ ಕಚ್ಚಿದರೆ ವ್ಯಕ್ತಿ ನೀರು ಕೇಳುವಷ್ಟರೊಳಗೆ ವಿಷವು ದೇಹದೊಳಗೆ ಏರುತ್ತದೆ. ಆದರೆ ಈಗ ಹಾವೇ ಸತ್ತಿರುವುದು ಆಚ್ಚರಿಯನ್ನುಂಟು ಮಾಡಿದೆ.
ಸಾಗರ-ಖುರೈ ರಸ್ತೆಯ ನಾರಾಯಣಾವಳಿಯ ಮುಖ್ಯ ರಸ್ತೆಯ ತಡೆಗೋಡೆಯ ಬಳಿ ಕಾಳಿಂಗಸರ್ಪ ಕಾಣಿಸಿಕೊಂಡಾಗ, ಜನರು ಹಾವು ಹಿಡಿಯುವವ ಚಂದ್ರಕುಮಾರ್ ಅಹಿರ್ವಾರ್ಗೆ ಕರೆ ಮಾಡಿದರು.
ಚಂದ್ರಕುಮಾರ್ ಅವರು ಸ್ಥಳಕ್ಕಾಗಮಿಸಿ ಹಾವನ್ನು ಹಿಡಿದರು, ಆದರೆ ರಕ್ಷಣೆಯ ಸಂದರ್ಭದಲ್ಲಿ ಕಾಳಿಂಗಸರ್ಪ ಅವರ ಮೇಲೆ ದಾಳಿ ಮಾಡಿತು ಮತ್ತು ಅವರ ಎರಡು ಕೈಗಳನ್ನು ಸರ್ಪ ಕಚ್ಚಿದೆ.
ಹಾವು ಕಚ್ಚಿದ ನಂತರ ಮನೆಯವರು ಚಂದ್ರಕುಮಾರ್ ಅವರನ್ನು ಚಿಕಿತ್ಸೆಗಾಗಿ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡ ನಂತರ ಚಂದ್ರಕುಮಾರ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ ಹಾವು ಸತ್ತಿರುವುದು ಕಂಡುಬಂದಿದೆ.