Tuesday, October 21, 2025
Homeರಾಜ್ಯಡಿಸಿಎಂ ಡಿಕೆಶಿ ಭೇಟಿ ಮಾಡಿದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

ಡಿಸಿಎಂ ಡಿಕೆಶಿ ಭೇಟಿ ಮಾಡಿದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ

Kiran Shaw meets DK Shivakumar amid row over Bengaluru infrastructure

ಬೆಂಗಳೂರು, ಅ.21- ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಟೀಕೆ ಮಾಡಿ ವಿರೋಧ ಪಕ್ಷಗಳಿಗೆ ಅಸ್ತ್ರ ಒದಗಿಸಿದ್ದ ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಲುವಾಗಿ ಕಿರಣ್‌ಮಜುಂದಾರ್‌ ಷಾ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಹಾಗೂ ಇತರ ಸಚಿವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ.ಈ ಸಂದರ್ಭದಲ್ಲಿ ಇಬ್ಬರು ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿರುವ ಕಿರಣ್‌ ಮಜುಂದಾರ್‌ ಷಾ ಇತ್ತೀಚಿನ ದಿನಗಳ ತಮ ಟೀಕೆಗಳ ಕುರಿತು ಸ್ಪಷ್ಟನೆ ನೀಡುವುದಾಗಿ ತಿಳಿದು ಬಂದಿದೆ.

ರಸ್ತೆ ಗುಂಡಿಗಳ ವಿಚಾರವಾಗಿ ಕಿರಣ್‌ ಮಜುಂದಾರ್‌ ಷಾ ಹಾಗೂ ಇನ್ಫೋಸಿಸ್‌‍ನ ಸಂಸ್ಥಾಪಕರಲ್ಲೊಬ್ಬರಾದ ಮೋಹನ್‌ದಾಸ್‌‍ ಪೈ ಇಬ್ಬರೂ ನಿರಂತರವಾಗಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು. ತಮ ಸಾಮಾಜಿಕ ಜಾಲತಾಣಗಳಲ್ಲಿ ರಸೆ್ತಗಳ ದುಸ್ಥಿತಿ, ಸಂಚಾರ ದಟ್ಟಣೆ ಸೇರಿದಂತೆ ಹಲವಾರು ಅವ್ಯವಸ್ಥೆಗಳ ಬಗ್ಗೆ ಪ್ರಸ್ತಾಪಿಸಿದರು. ಇದು ಪರ ವಿರೋಧಗಳ ಚರ್ಚೆಗೆ ಕಾರಣವಾಗಿತ್ತು.

ಕಿರಣ್‌ ಮಜುಂದಾರ್‌ ಷಾ ಅವರ ನಡುವಳಿಕೆಗಳನ್ನು ಬಹಳಷ್ಟು ಮಂದಿ ಸ್ವಾಗತಿಸಿದ್ದರೆ, ಟೀಕೆಗಳು ರಾಜಕೀಯ ಪ್ರೇರಿತ ಎಂದು ಕೆಲವರು ಹೀಯಾಳಿಸಿದ್ದರು. ಇದಕ್ಕೆ ತಕ್ಕ ಹಾಗೇ ಕಿರಣ್‌ ಮಜುಂದಾರ್‌ ಷಾ ತಮ ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸಚಿವರೂ ಹಾಗೂ ಬಿಜೆಪಿ ನಾಯಕರ ಫೋಟೋಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದದ್ದು, ಟೀಕೆಗಳಿಗೆ ಆಸ್ಪದವಾಗಿತ್ತು.

ಕೆಲವು ಟ್ರೋಲ್‌ ಪೇಜ್‌ಗಳ ಪೋಸ್ಟ್‌ಗಳನ್ನು ಕಿರಣ್‌ ಮಜುಂದಾರ್‌ ಷಾ ಶೇರ್‌ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದರು, ಸಚಿವರಾದ ಎಂ.ಬಿ.ಪಾಟೀಲ್‌, ಪ್ರಿಯಾಂಕ ಖರ್ಗೆ, ಸಂತೋಷ್‌ ಲಾಡ್‌ ಸೇರಿದಂತೆ ಹಲವರ ಆಕ್ಷೇಪಗಳಿಗೂ ಸಾಮಾಜಿಕ ಜಾಲತಾಣದಲ್ಲೇ ಉತ್ತರ ನೀಡುವ ಮೂಲಕ ಮತ್ತಷ್ಟು ಸಂಚಲನ ಮೂಡಿಸಿದ್ದರು.

ಕಿರಣ್‌ ಮಜುಂದಾರ್‌ ಷಾ ಈ ಹೇಳಿಕೆಗಳು ಉದ್ಯಮ ವಲಯದಲ್ಲಿ ಭಾರೀ ಪರಿಣಾಮ ಬೀರುತ್ತಿವೆ, ಸರ್ಕಾರಕ್ಕೆ ಕೆಟ್ಟ ಹೆಸರು ತರಲಿದೆ ಎಂಬ ತೀವ್ರ ಆಕ್ಷೇಪದ ನಡುವೆಯೂ ಮಜುಂದಾರ್‌ ಷಾ ಸುಮನಾಗಿರಲಿಲ್ಲ. ತೀವ್ರ ಸ್ವರೂಪದ ವಾಗ್ವಾದಗಳ ಬಳಿಕ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ತಿಳಿಸಿ, ತಮ ಸಂಸ್ಥೆಯ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಇನ್ನು ಮಂದೆಯಾದರೂ ಕಿರಣ್‌ ಮಜುಂದಾರ್‌ ಷಾ ಟೀಕೆಗಳು, ತಣ್ಣಗಾಗಬಹುದೇ ಎಂಬ ಕುತೂಹಲ ಹೆಚ್ಚಾಗಿದೆ.

RELATED ARTICLES

Latest News