Wednesday, June 4, 2025
Homeರಾಜ್ಯವಿಶ್ವ ಹಾಲು ದಿನಾಚರಣೆ ಅಂಗವಾಗಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ KMF

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ KMF

KMF launches new product on World Milk Day

ಬೆಂಗಳೂರು, ಜೂ.2-ಪ್ರತಿ ಲೀಟರ್ ಹಾಲಿಗೆ 4 ರೂ. ಪ್ರೋತ್ಸಾಹಧನ ಹೆಚ್ಚಿಸಿದ ಹಿನ್ನೆಲೆಯಲ್ಲಿ ಕೆಎಂಎಫ್‌ಗೆ ಪ್ರತಿದಿನ ದಾಖಲೆ ಪ್ರಮಾಣದ 1 ಕೋಟಿ 6 ಲಕ್ಷ ರೂ. ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ತಿಳಿಸಿದ್ದಾರೆ.

ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾ ಮಂಡಳಿ ನಿಯಮಿತ ವತಿಯಿಂದ ಕೇಂದ್ರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ನಂದಿನಿ ಗುಡ್‌ ಲೈಫ್ ಮಫಿನ್ಸ್, ಸ್ಟೈಸ್ ಕೇಕ್ಸ್ ಮತ್ತು ಬಾರ್ ಕೇಕ್ಸ್ ಸೇರಿದಂತೆ 18 ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಳೆದ ವರ್ಷ ಜೂ. 28 ರಂದು ಕೆಎಂಎಫ್ ದಾಖಲೆ ಪ್ರಮಾಣದ 1 ಕೋಟಿ ರೂ. ಲೀಟರ್ ಹಾಲು ಸಂಗ್ರಹಣೆ ಮಾಡಿತ್ತು. ಆದರೆ ಜೂ. 1 ರಂದು 1 ಕೋಟಿ 6 ಲಕ್ಷ ರೂ. ಲೀಟರ್ ಹಾಲು ಸಂಗ್ರಹವಾಗಿತ್ತು. ವಾರ್ಷಿಕ 24 ಸಾವಿರ ಕೋಟಿ ರೂ. ವಹಿವಾಟು ನಡೆದಿದೆ ಎಂದರು.ದೇಶಾದ್ಯಂತ ನಂದಿನಿ ಪನೀರ್ ಉತ್ಪನ್ನಗಳಿಗೆ ಬೇಡಿಕೆ ಇದೆ. ಈ ನೆಲೆಯಲ್ಲಿ ಕೆಎಂಎಫ್ ತಜಾ ಮತ್ತು ಪರಿಶುದ್ಧತೆಯ ಪನೀರ್ ಉತ್ಪಾದಿಸುತ್ತಿದೆ. ಇದರ ಗುಣಮಟ್ಟದ ಯಶಸ್ಸು ನಮ್ಮ ಸಿಬ್ಬಂದಿಗಳಿಗೆ ಸಲ್ಲಬೇಕು ಎಂದರು.

ವಿದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ: ನಂದಿನಿ ಬ್ರಾಂಡ್ ಹಾಲಿನ ಉತ್ಪನ್ನಗಳ ಮಾರುಕಟ್ಟೆ ಜಾಲವನ್ನು ವಿದೇಶದಲ್ಲೂ ಸಹ ವಿಸ್ತರಣೆ ಮಾಡಲಾಗಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಲು ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿನದಾಗಿದೆ ಎಂದರು.

ಕೆಎಂಎಫ್ ದೇಶದಲ್ಲಿ ಎರಡನೇ ಅತೀ ದೊಡ್ಡ ಹಾಲು ಉತ್ಪಾದಕರ ಒಕ್ಕೂಟವಾಗಿದ್ದು, 24 ಕೋಟಿ ರೂ. ರಷ್ಟು ವಾರ್ಷಿಕ ವಹಿವಾಟು ಹೊಂದಿದ್ದು ಸಂಸ್ಥೆಯ ಬೆಳವಣಿಗೆಗೆ ಹಾಲು ಉತ್ಪಾದಕರ ರೈತರೇ ಕಾರಣ ಎಂದು ತಿಳಿಸಿದರು.

ನಂದಿನಿ ಹಾಲಿನ ಸೇವನೆಯಿಂದಾಗುವ ಅನುಕೂಲಗಳು ಮತ್ತು ಹಾಲಿನಲ್ಲಿರುವ ಪೋಷ್ಟಿಕಾಂಶಗಳ ಮಹತ್ವದ ಬಗ್ಗೆ ಸಾರ್ವಜನಿಕರು ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ನಂದಿನಿ ಪನೀರ್ ರಾಜ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಒಗ್ಗರಣೆ ಡಬ್ಬಿ ಖ್ಯಾತಿಯ ಶ್ರೀಮುರಳಿ, ಮಾರುಕಟ್ಟೆ ವಿಭಾಗದ ನಿರ್ದೇಶಕ ರಘುನಂದನ್, ಅಧಿಕಾರಿಗಳಾದ ನವೀನ್, ಪರಮ್ ಮತ್ತಿತರು ಹಾಜರಿದ್ದರು.

RELATED ARTICLES

Latest News