Friday, November 22, 2024
Homeರಾಜ್ಯಕೆಎಂಎಫ್ ಹೊಸ ಉತ್ಪನ್ನಗಳ ಬಿಡುಗಡೆ

ಕೆಎಂಎಫ್ ಹೊಸ ಉತ್ಪನ್ನಗಳ ಬಿಡುಗಡೆ

ಬೆಂಗಳೂರು,ಡಿ.21- ಜಿಡ್ಡಿನಂಶ ಕಡಿಮೆ ಇರುವ ಉತ್ಕøಷ್ಟ ಗುಣಮಟ್ಟ ಕೆನೆಭರಿತ ಎಮ್ಮೆಯ ಹಾಲನ್ನು ಕೆಎಂಎಫ್ ಸಂಸ್ಕರಿಸಿ ಇಂದಿನಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ನಂದಿನಿ ಎಮ್ಮೆ ಹಾಲನ್ನು ಬಿಡುಗಡೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಕೆಎಂಎಫ್‍ನ ರಾಯಭಾರಿ ನಟ ಶಿವರಾಜ್‍ಕುಮಾರ್, ಗೀತಾ ಶಿವರಾಜ್‍ಕುಮಾರ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಪನ್ನಗಳನ್ನು ಉನ್ನತೀಕರಿಸುತ್ತಿರುವ ಕೆಎಂಎಫ್ ಸ್ಪರ್ಧಾತ್ಮಕ ಬೆಲೆಯಲ್ಲಿ ಬೆಂಗಳೂರಿನ ನಾಗರಿಕರಿಗೆ ಎಮ್ಮೆ ಹಾಲು ಪೂರೈಸಲು ಮುಂದಾಗಿದೆ.

ಬೆಳಗಾವಿ, ವಿಜಯಪುರ ಹಾಲು ಒಕ್ಕೂಟಗಳಿಂದ ಎಮ್ಮೆ ಹಾಲನ್ನು ಪಡೆದು, ಸಂಸ್ಕರಿಸಿ, ವಿನೂತನ ಪ್ಯಾಕ್‍ನಲ್ಲಿ 35 ರೂ.ಗಳಿಗೆ ಅರ್ಧ ಲೀಟರ್‍ನಂತೆ ಮಾರಾಟ ಮಾಡಲು ಮುಂದಾಗಿದೆ. ಈ ಹಾಲು ಪೌಷ್ಠಕಾಂಶಗಳ ಖನಿಜವಾಗಿದ್ದು, ಮಕ್ಕಳ ಶಕ್ತಿವರ್ಧನೆಗೆ ಸಹಾಯವಾಗಲಿದೆ. ಯುವಕರಿಗೂ ಆರೋಗ್ಯಪೂರ್ಣವಾಗಿರಲಿದೆ ಎಂದು ಕೆಎಂಎಫ್ ತಿಳಿಸಿದೆ. ಗಟ್ಟಿಯಾದ ಮೊಸರು, ಸಿಹಿ ಉತ್ಪನ್ನಗಳ ತಯಾರಿಕೆಗೆ ಹೆಚ್ಚು ಪೆÇ್ರೀಟೀನ್, ಲವಣಾಂಶ ಹಾಗೂ ಕ್ಯಾಲ್ಶಿಯಂ ಭರಿತವಾಗಿದೆ.

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತೆ ನಿರಾಸೆ

ಇದೇ ವೇಳೆ ನಂದಿನಿ ಮೊಸರು ಲೈಟ್ ಬ್ರಾಂಡ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು 2 ವಿಶೇಷ ಪ್ಯಾಕ್‍ಗಳಲ್ಲಿ ಲಭ್ಯವಿದ್ದು, ಕಡಿಮೆ ಜಿಡ್ಡಿನಂಶವಿರುವಂತಹ ಅಧಿಕ ಪ್ರೋಟೀನ್ ಹಾಗೂ ಪೋಷಕಾಂಶಗಳ ಭರಿತ 180 ಗ್ರಾಂ.ಗೆ 10 ರೂ. ಅರ್ಧ ಲೀಟರ್ ಹಾಲಿಗೆ 25 ರೂ. ಗರಿಷ್ಠ ಮಾರಾಟ ದರವನ್ನು ನಿಗದಿಪಡಿಸಲಾಗಿದೆ.

ಈ ಮೊಸರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮೂಳೆಯನ್ನು ಗಟ್ಟಿಗೊಳಿಸುವುದಲ್ಲದೆ, ಸಂವಾತ, ರಕ್ತದೊತ್ತಡದಂತಹ ಜೀವನಶೈಲಿಯ ರೋಗಗಳನ್ನು ನಿವಾರಿಸುತ್ತದೆ ಎಂದು ತಿಳಿಸಲಾಗಿದೆ. ನಂದಿನಿ ಮೈಸೂರುಪಾಕ್, ಹಾಲಿನ ಪೇಡ, ಧಾರವಾಡ ಪೇಡ, ಕೇಸರಿ ಪೇಡ, ಏಲಕ್ಕಿ ಪೇಡ, ಕಾಜು ಕಟ್ಲೆಟ್, ಸಿರಿಧಾನ್ಯ ಲಡ್ಡು, ಬೇಸನ್ ಲಡ್ಡುಗಳಿಗೆ ಹೊಸ ಪ್ಯಾಕಿಂಗ್ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಸಮರ್ಪಿಸಲಾಗಿದೆ ಎಂದು ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ತಿಳಿಸಿದ್ದಾರೆ.

RELATED ARTICLES

Latest News