ಬೆಂಗಳೂರು,ಜ.14:-ಕರ್ನಾಟಕ ಹಾಲು ಮಹಾಮಂಡಳಿ (ನಂದಿನಿ)ಯ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ನಂದಿನಿ ಯು.ಹೆಚ್.ಟಿ ಗುಡ್ ಲೈಫ್ ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಮೆಚಾಯ್ ಪಾಯಿಂಟ್ ರವರೊಂದಿಗೆ ಪಾಲುದಾರಿಕೆ ಘೋಷಿಸಿದೆ.
ಜಗತ್ತಿನಾದ್ಯಂತ ಕೋಟ್ಯಾಂತರ ಪ್ರವಾಸಿಗರನ್ನು ಆಕರ್ಷಿಸುವ ನಿರೀಕ್ಷಿಸಲಾಗಿದ್ದು ,ಚಾಯ್ ಪಾಯಿಂಟ್ ಭಾರತ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿರುವುದಲ್ಲದೇ, ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದಲ್ಲಿ ಪಾನೀಯ ಮಾರಾಟ ಮುಂಚೂಣಿಯಲ್ಲಿರುತ್ತದೆ ಹಾಗಾಗಿ ಈ ಸಹಯೋಗ ಮಹತ್ವ ಪಡೆದಿದೆ ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕರಾದ ಬಿ. ಶಿವಸ್ವಾಮಿ ತಿಳಿಸಿದ್ದಾರೆ.
ಮೆಚಾಯ್ ಪಾಯಿಂಟ್ ರವರು ಮಹಾ ಕುಂಭ ಮೇಳದ ಸಂಕೀರ್ಣದಲ್ಲಿ 10 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ಸದರಿ ಮಳಿಗೆಗಳ ಮೂಲಕ ಪ್ರವಾಸಿಗರಿಗೆ ಒಂದು ಕೋಟಿ ಕಪ್ ಗಳಿಗಿಂತಲೂ ಹೆಚ್ಚು ಚಹಾವನ್ನು ತಯಾರಿಸಿ, ಒದಗಿಸಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಇದು ಗಿನ್ನೀಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಸಹ ಹೊಂದಿರುತ್ತದೆ ಎಂದರು.
ಮಹಾ ಕುಂಭ ಮೇಳದಲ್ಲಿ ಸಿದ್ಧಪಡಿಸಲಾಗುವ ಪ್ರತಿಯೊಂದು ಕಪ್ ಚಹಾವು ನಂದಿನಿಯ ಪರಿಶುದ್ಧ ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಇದು ಚಹಾ ಉತ್ಸಾಹಿಗಳಿಗೆ ಆಹ್ಲಾದಕರ ಅನುಭವವನ್ನು ನೀಡಲಿರುತ್ತದೆ.
ಚಹಾದ ಜೊತೆಗೆ ಮೆಚಾಯ್ ಪಾಯಿಂಟ್ ಮಳಿಗೆಗಳು ಸಿಹಿ ಉತ್ಪನ್ನ ಮತ್ತು ಮಿಲ್‌್ಕ ಶೇಕ್‌ಗಳು ಸೇರಿದಂತೆ ವಿವಿಧ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಿರುತ್ತವೆ. ಈ ಭವ್‌ಯವಾದ ಆಧ್ಯಾತ್ಮಿಕ ಮಹಾಕೂಟದಲ್ಲಿ ನಂದಿನಿ ಬ್ರಾಂಡ್ ನ ಉಪಸ್ಥಿತಿಯು ಮತ್ತಷ್ಟು ಹೆಚ್ಚಾಗಲಿರುತ್ತದೆ.
ಕಹಾಮ ಮತ್ತು ಮೆಚಾಯ್ ಪಾಯಿಂಟ್ ಪಾಲುದಾರಿಕೆಯು ರಾಷ್ಟ್ರದ ಉತ್ತರ ಭಾಗದ ರಾಜ್ಯ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಹಾಗೂ ರಾಷ್ಟ್ರವ್ಯಾಪ್ತಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ದೇಶ ಹೊಂದಿದ್ದು, ಇದು ಕಹಾಮದ ಬದ್ಧತೆ ಹಾಗೂ ಸಮರ್ಪಣೀಯ ಮನೋಭಾವವನ್ನು ಸಾರಿದಂತಾಗುತ್ತದೆ.
ಮೆಚಾಯ್ ಪಾಯಿಂಟ್ ರವರು ಕಹಾಮದ ನಂದಿನಿಯ ದೀರ್ಘಾವಧಿಯ ಗ್ರಾಹಕರಾಗಿರುವುದಲ್ಲದೇ, ಸದರಿಯವರು ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಹೆಚ್ ಗುಡ್ ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನಿರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿರುತ್ತಾರೆ ಎಂದು ಬಿ. ಶಿವಸ್ವಾಮಿ ತಿಳಿಸಿದರು.
ಈ ಸಂಸ್ಥೆ ಜೊತೆ ಪಾಲುದಾರರಾಗಲು ಅತ್ಯಂತ ಉತ್ಸುಕರಾಗಿದ್ದು, ಸದರಿ ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರದರ್ಶಿಸಿ, ವೈವಿಧ್ಯಮಯ ಗ್ರಾಹಕರಿಗೆ ಒದಗಿಸುವ ಮತ್ತು ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆಯನ್ನು ಬಲಪಡಿಸಲು ಒಂದು ಸುವರ್ಣ ಅವಕಾಶವಾಗಿದೆ. ಈ ಐತಿಹಾಸಿಕ ಮೇಳದಲ್ಲಿ ನಂದಿನಿಯ ಉತ್ಪನ್ನಗಳ ಲಭ್ಯತೆಯೊಂದಿಗೆ ಮಹಾ ಕುಂಭ ಮೇಳದ ಯಶಸ್ಸನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಲಿಯ ನಿರ್ದೇಶಕರು(ಮಾರುಕಟ್ಟೆ) ರಘು ನಂದನ್ ಕೂಡ ಮಹಾ ಕುಂಭ ಮೇಳದಲ್ಲಿ ನಂದಿನಿ ಹಾಲು ಬಳಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.