Friday, June 6, 2025
Homeಕ್ರೀಡಾ ಸುದ್ದಿ | Sportsಅಭಿಮಾನಿಗಳ ಸಾವಿಗೆ ಕಂಬನಿ ಮಿಡಿದ ಕೊಹ್ಲಿ

ಅಭಿಮಾನಿಗಳ ಸಾವಿಗೆ ಕಂಬನಿ ಮಿಡಿದ ಕೊಹ್ಲಿ

Kohli mourns the death of fans

ಬೆಂಗಳೂರು, ಜೂ.5- ಟಿ-20 ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆ ವೇಳೆ ನಗರದ ಚಿನ್ನಸ್ವಾಮಿ ಕ್ರೆಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತಕ್ಕೆ ಅಭಿಮಾನಿಗಳ ಸಾವು-ನೋವಿಗೆ ಟೀಂ ಇಂಡಿಯಾದ ಆಟಗಾರ ವಿರಾಟ್‌ ಕೊಹ್ಲಿ ತೀವ್ರ ಕಂಬನಿ ಮಿಡಿದಿದ್ದಾರೆ.ತಮ ನೋವಿನ ಜೊತೆಗೆ ಆರ್‌ಸಿಬಿಯ ನೋವಿನ ಸಂದೇಶವನ್ನು ಎಕ್‌್ಸಪ್ಟೋ್‌ನಲ್ಲಿ ಹಂಚಿಕೊಂಡಿದ್ದಾರೆ.

ನಗರದಲ್ಲಿ ಸಂಭವಿಸಿದ ದುರಂತದ ಬಗ್ಗೆ ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿರುವ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.

ಚಿನ್ನಸ್ವಾಮಿ ಕ್ರೆಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತದಿಂದ ಉಂಟಾದ ಸಾವು-ನೋವಿನಿಂದ ತೀವ್ರ ದುಃಖಿತನಾಗಿದ್ದೇನೆ. ಬಾಯಿಂದ ಮಾತುಗಳೇ ಹೊರಡುತ್ತಿಲ್ಲ.ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ್ರಾಂಚೈಸಿ, ಬೆಂಗಳೂರಿನಾದ್ಯಂತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಲ್ಲಿ ಅನಾಹುತ ನಡೆದಿದೆ.

ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ.ಪ್ರಾಣ ಕಳೆದುಕೊಂಡವರಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಪೀಡಿತ ಕುಟುಂಬಗಳಿಗೆ ನಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ರಾಜೀವ್‌ ಶುಕ್ಲಾ ಸಂತಾಪ:
ಬಿಸಿಸಿಐ ಉಪಾಧ್ಯಕ್ಷ ಮತ್ತು ಕಾಂಗ್ರೆಸ್‌‍ ಸಂಸದ ರಾಜೀವ್‌ ಶುಕ್ಲಾ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ರಾಜಕೀಯ ದೂಷಣೆಯನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ. ಎಎನ್‌ಐಗೆ ನೀಡಿದ ಹೇಳಿಕೆಯಲ್ಲಿ, ಇಂತಹ ಘಟನೆ ಯಾವುದೇ ರಾಜ್ಯದಲ್ಲಿ ಸಂಭವಿಸಬಹುದು. ಆಡಳಿತ ಪಕ್ಷವನ್ನು ಇದಕ್ಕೆ ದೂಷಿಸಬಾರದು. ಇದನ್ನು ರಾಜಕೀಯಗೊಳಿಸಬಾರದು. ಇದು ಬಿಜೆಪಿ ಆಡಳಿತದ ರಾಜ್ಯದಲ್ಲಿ ಸಂಭವಿಸಿದರೆ, ನಾವು ಅವರನ್ನೂ ದೂಷಿಸಬಾರದು.

ಜನಸಂದಣಿಯು ತುಂಬಾ ದೊಡ್ಡದಾಗಿತ್ತು. ನಾನು ್ರಾಂಚೈಸಿಯೊಂದಿಗೆ ಮಾತನಾಡಿದ್ದೇನೆ, ಇಷ್ಟೊಂದು ದೊಡ್ಡ ಜನಸಮೂಹ ಬರುತ್ತದೆ ಎಂದು ಅವರಿಗೂ ಊಹೆಯಿರಲಿಲ್ಲ. ಈ ಘಟನೆ ಇದ್ದಕ್ಕಿದ್ದಂತೆ ಸಂಭವಿಸಿದ್ದರಿಂದ ಅನಾಹುತ ಸಂಭವಿಸಿದೆ. ಮೃತರ ಕುಟುಂಬಗಳಿಗೆ ಗರಿಷ್ಠ ಸಹಾಯವನ್ನು ಒದಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರವು ಕಾಲ್ತುಳಿತದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಓಪನ್‌-ಟಾಪ್‌ ಬಸ್‌‍ ಮೆರವಣಿಗೆಯನ್ನು ಈಗಾಗಲೇ ರದ್ದುಗೊಳಿಸಿತ್ತು. ಆದರೆ, ಕ್ರೆಡಾಂಗಣದ ಹೊರಗೆ ಜನಸಂದಣಿಯ ಒತ್ತಡವನ್ನು ಯಾರೂ ಊಹಿಸಿರಲಿಲ್ಲ, ಇದು ದುರಂತಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ ಟ್ರೋಫಿ ಜಯಗಳಿಸಿದೆ. ಅದೇ ಖುಷಿಯಲ್ಲಿ ನಿನ್ನೆ ನಗರದಲ್ಲಿ ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಿರೀಕ್ಷೆಯಂತೆ ಬೆಂಗಳೂರು ಆರ್‌ಸಿಬಿ ತಂಡದ ಆಟಗಾರರು ಆಗಮಿಸಿದ್ದರು. ಅವರನ್ನು ಸರ್ಕಾರದಿಂದ ಅಭಿನಂದಿಸಲಾಯಿತು. ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ದುರಂತ ಸಂಭವಿಸಿ, 11 ಮಂದಿ ಮೃತಪಟ್ಟರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

RELATED ARTICLES

Latest News