Sunday, October 19, 2025
Homeಕ್ರೀಡಾ ಸುದ್ದಿ | Sportsಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ಶರ್ಮಾ ಅಟ್ಟರ್‌ ಪ್ಲಾಪ್‌

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ಶರ್ಮಾ ಅಟ್ಟರ್‌ ಪ್ಲಾಪ್‌

Kohli, Sharma at flop in first ODI against Australia

ಪರ್ತ್‌, ಅ.19- ಏಳು ತಿಂಗಳ ಬಿಡುವಿನ ನಂತರ ಬ್ಯಾಟ್‌ ಹಿಡಿದ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕರಾದ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೋಹ್ಲಿ ಅಟ್ಟರ್‌ ಪ್ಲಾಪ್‌ ಆಗಿದ್ದಾರೆ. ಪರ್ತ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಈ ಇಬ್ಬರು ಘಟಾನುಘಟಿ ನಾಯಕರು ಎರಡಂಕಿ ದಾಟುವಲ್ಲಿ ವಿಫಲರಾಗಿದ್ದಾರೆ.

2027 ರ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುವ ಹಂಬಲದೊಂದಿಗೆ ಕಣಕ್ಕಿಳಿದ ರೋಹಿತ್‌ ಶರ್ಮಾ ಅವರು 14 ಎಸೆತಗಳಲ್ಲಿ ಕೇವಲ ಎಂಟು ರನ್‌ ಗಳಿಗೆ ಹ್ಯಾಜಲ್‌ವುಡ್‌ಗೆ ವಿಕೇಟ್‌ ಒಪ್ಪಿಸಿದರು.ಇವರ ನಂತರ ಕಣಕ್ಕಿಳಿದ ವಿರಾಟ್‌ ಕೋಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಶೆ ಮೂಡಿಸಿದರು.

ಅಭಿಮಾನಿಗಳ ಜೈಕಾರದೊಂದಿಗೆ ಬ್ಯಾಟ್‌ ಹಿಡಿದು ಮೈದಾನಕ್ಕೆ ಬಂದ ಕೊಹ್ಲಿ ಏಳು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಪಂದ್ಯ ಆರಂಭಕ್ಕೂ ಮುನ್ನ ಫಾಕ್‌್ಸ ಕ್ರಿಕೆಟ್‌ನೊಂದಿಗೆ ಮಾತನಾಡುತ್ತಾ, ಕೊಹ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ನೊಂದಿಗಿನ ತಮ್ಮ ಪ್ರೀತಿಯ ಸಂಬಂಧ ಮತ್ತು ಆಸ್ಟ್ರೇಲಿಯಾ ಅವರಿಗೆ ಏನು ಅರ್ಥ ಎಂದು ತಿಳಿಸಿದ್ದರು.ಇಲ್ಲಿ ಆರಂಭದಲ್ಲಿ ತುಂಬಾ ಕಠಿಣವಾಗಿತ್ತು ಎಂದು ಅವರು ಒಪ್ಪಿಕೊಂಡರು.

ಇದು ನನ್ನನ್ನು ಕ್ರಿಕೆಟಿಗನಾಗಿ ರೂಪಿಸಿತು. ಯುಕೆಯಲ್ಲಿ ನನ್ನ ಇತ್ತೀಚಿನ ಸಮಯವು ನಾನು ದೀರ್ಘಕಾಲದಿಂದ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿತು ಎಂದಿದ್ದರು.ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿಯವರ ಟ್ರ್ಯಾಕ್‌ ರೆಕಾರ್ಡ್‌ ಕೂಡ ಅಷ್ಟೇ ಪ್ರಭಾವಶಾಲಿಯಾಗಿದೆ. ಆಸ್ಟ್ರೇಲಿಯಾ ನೆಲದಲ್ಲಿ, ಅವರು 29 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಐದು ಶತಕಗಳೊಂದಿಗೆ 1,327 ರನ್‌ ಗಳಿಸಿದ್ದಾರೆ.

ಅದೇ ರೀತಿ ರೋಹಿತ್‌ ಆಸ್ಟ್ರೇಲಿಯಾ ನೆಲದಲ್ಲಿ ಬಹಳ ಹಿಂದಿನಿಂದಲೂ ಯಶಸ್ಸನ್ನು ಅನುಭವಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಏಕದಿನ ಪಂದ್ಯಗಳಲ್ಲಿ, ಅವರು 53.12 ಕ್ಕಿಂತ ಸ್ವಲ್ಪ ಹೆಚ್ಚು ಸರಾಸರಿಯೊಂದಿಗೆ 1,300 ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ.

ಹೀಗಾಗಿಯೇ ಈ ಇಬ್ಬರು ಮಾಜಿ ನಾಯಕರನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಮೊದಲ ಪಂದ್ಯದಲ್ಲಿ ಇಬ್ಬರು ಹತಾಶರಾಗಿದ್ದರೂ ಉಳಿದಿರುವ ಪಂದ್ಯಗಳಲ್ಲಿ ತಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶವಿದೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.

RELATED ARTICLES

Latest News