Tuesday, February 25, 2025
Homeರಾಷ್ಟ್ರೀಯ | Nationalಬಂಗಾಳ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ

ಬಂಗಾಳ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ

Kolkata earthquake: 5.1 magnitude quake hits Bay of Bengal, tremors felt in Kolkata, other places

ಕೋಲ್ಕತ್ತಾ/ಭುವನೇಶ್ವರ, ಫೆ.25-ಒಡಿಶಾದ ಪುರಿ ಬಳಿ ಮಂಗಳವಾರ ಬೆಳಗ್ಗೆ 5.1 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳಕೊಲ್ಲಿಯಲ್ಲಿ 91 ಕಿಮೀ ಆಳದಲ್ಲಿ ಬೆಳಗ್ಗೆ 6.10ರ ಸುಮಾರಿಗೆ ಭೂಕಂಪ ಸಂಭವಿಸಿದೆ.

ಇದುವರೆಗೆ ಯಾವುದೇ ಆಸ್ತಿಪಾಸ್ತಿ ಅಥವಾ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ಒಡಿಶಾ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಭೂಕಂಪದ ಕೇಂದ್ರವು ಬಂಗಾಳಕೊಲ್ಲಿಯಲ್ಲಿರುವುದರಿಂದ ಅದರ ಪರಿಣಾಮವು ನಗಣ್ಯ ಎಂದು ಹೇಳಿದರು.

ಒಡಿಶಾದ ಪರದೀಪ್, ಪುರಿ, ಬರ್ಹಾಂಪುರ ಮತ್ತು ಇತರ ಕೆಲವು ಸ್ಥಳಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News