Friday, July 5, 2024
Homeರಾಷ್ಟ್ರೀಯಕೋಟಾದಲ್ಲಿ ಆತಹತ್ಯೆಗೆ ಶರಣಾದ ಜೆಇಇ ವಿದ್ಯಾರ್ಥಿ

ಕೋಟಾದಲ್ಲಿ ಆತಹತ್ಯೆಗೆ ಶರಣಾದ ಜೆಇಇ ವಿದ್ಯಾರ್ಥಿ

ಜೈಪುರ,ಜೂ.16- ಐಐಟಿ-ಜೆಇಇ ಸ್ಪರ್ಧಾತಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 17 ವರ್ಷದ ಯುವಕನೊಬ್ಬ ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿ ನಡೆದಿದೆ.

ಬಿಹಾರದ ಮೋತಿಹಾರಿ ನಿವಾಸಿ ಆಯುಷ್‌ ಜೈಸ್ವಾಲ್‌ ಅವರು ಆತಹತ್ಯೆ ಮಾಡಿಕೊಂಡ ದುರ್ದೈವಿ. ಸ್ಪರ್ಧಾತಕ ಪರೀಕ್ಷೆಗೆ ತಯಾರಿ ನಡೆಸಲು ಎರಡು ವರ್ಷಗಳಿಂದ ಮಹಾವೀರ್‌ ನಗರ ಪ್ರದೇಶದ ಸಾವ್ರಾಟ್‌ ಚೌಕ್‌ ಬಳಿಯ ಪೇಯಿಂಗ್‌ ಗೆಸ್ಟ್‌‍ ಹೌಸ್‌‍ನಲ್ಲಿ ತಂಗಿದ್ದ ಜೈಸ್ವಾಲ್‌ ತಡರಾತ್ರಿಯವರೆಗೂ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಆತನ ಸ್ನೇಹಿತರು ಪೇಯಿಂಗ್‌ ಗೆಸ್ಟ್‌ಹೌಸ್‌‍ ಮಾಲೀಕರಿಗೆ ಮಾಹಿತಿ ನೀಡಿದ್ದರು.ವಿದ್ಯಾರ್ಥಿ ಬಾಗಿಲು ತೆರೆಯದಿದ್ದಾಗ ಪೇಯಿಂಗ್‌ ಗೆಸ್ಟ್‌‍ ಹೌಸ್‌‍ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದರು.

ಸ್ಪರ್ಧಾತಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕ ತಡರಾತ್ರಿ ಆತಹತ್ಯೆಗೆ ಶರಣಾಗಿದ್ದಾನೆ. ಆತನ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇನ್ನೂ ಯಾವುದೇ ಸೂಸೈಡ್‌ ನೋಟ್‌ ಪತ್ತೆಯಾಗಿಲ್ಲ. ಕುಟುಂಬ ಸದಸ್ಯರು ಇಲ್ಲಿಗೆ ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮಹಾವೀರ್‌ ನಗರ ಎಸ್‌‍ಎಚ್‌ಒ ಮಹೇಂದ್ರ ತಿಳಿಸಿದ್ದಾರೆ.

ಕೋಟಾ ಪೊಲೀಸರು ವಿದ್ಯಾರ್ಥಿಗಳ ಆತಹತ್ಯೆಯನ್ನು ತಡೆಯಲು ಫೇಸ್‌‍ಬುಕ್‌‍-ಪೋಷಕ ಮೆಟಾದೊಂದಿಗೆ ಟೈ ಅಪ್‌ ಮಾಡಿಕೊಂಡಿದ್ದು ಆತಹತ್ಯೆಗೆ ಶರಣಾಗದಂತೆ ಮನವಿ ಮಾಡಿಕೊಳ್ಳುತ್ತಿದ್ದರು ದಿನೇ ದಿನೇ ಆತಹತ್ಯೆ ಪ್ರಕರಣಗಳು ಹೆಚ್ಚುತ್ತಲೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ಶಿಕ್ಷಣ ಹಬ್‌ ಕೋಟಾದಲ್ಲಿ ಈ ವರ್ಷ ಸ್ಪರ್ಧಾತಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ 11 ವಿದ್ಯಾರ್ಥಿಗಳು ಇದುವರೆಗೂ ಆತಹತ್ಯೆಗೆ ಶರಣಾಗಿದ್ದಾರೆ.

RELATED ARTICLES

Latest News