Wednesday, January 8, 2025
Homeಕ್ರೀಡಾ ಸುದ್ದಿ | Sportsಶುಭಮನ್‌ ಗಿಲ್‌ಗೆ ತಂಡದಲ್ಲಿ ಸ್ಥಾನ ನೀಡಬೇಡಿ : ಶ್ರೀಕಾಂತ್‌

ಶುಭಮನ್‌ ಗಿಲ್‌ಗೆ ತಂಡದಲ್ಲಿ ಸ್ಥಾನ ನೀಡಬೇಡಿ : ಶ್ರೀಕಾಂತ್‌

Kris Srikkanth calls Shubman Gill ‘highly overrated’

ನವದೆಹಲಿ,ಜ.7- ಆಸ್ಟ್ರೇಲಿಯಾದಂತಹ ಪಿಚ್‌ ಗಳಲ್ಲಿ ರನ್‌ ಗಳಿಸಲು ಪದೇ ಪದೇ ಎಡವುತ್ತಿರುವ ಟೀಮ್‌ ಇಂಡಿಯಾದ ಆಟಗಾರ ಶುಭಮನ್‌ ಗಿಲ್‌ ಗೆ ವಿದೇಶಿ ಸರಣಿಗಳಲ್ಲಿ ಸ್ಥಾನ ಕಲ್ಪಿಸಬೇಡಿ ಎಂದು ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಕೃಷ್ಣಮಾಚಾರಿ ಶ್ರೀಕಾಂತ್‌ ಕಟುವಾಗಿ ಹೇಳಿದ್ದಾರೆ.

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದ ಪ್ರಿನ್ಸ್ , ಒಂದು ಇನಿಂಗ್ಸ್ ನಲ್ಲೂ 40 ರನ್‌ ಗಳಿಸುವಲ್ಲಿ ಎಡವಿರುವುದು ಶ್ರೀಕಾಂತ್‌ ರ ಕಣ್ಣನ್ನು ಕೆಂಪಾಗಿಸಿದೆ.

`ನಾನು ಯಾವಾಗಲು ಹೇಳುತ್ತಾ ಬರುತ್ತಿರುವುದು ಏನೆಂದರೆ ಶುಭಮನ್‌ ಗಿಲ್‌ ಗೆ ಹೆಚ್ಚು ಮಾನ್ಯತೆ ನೀಡಬೇಡಿ, ಅದಕ್ಕೆ ಆತ ಅರ್ಹನಲ್ಲ’ ಎಂದು ಶ್ರೀಕಾಂತ್‌ ಹೇಳಿದ್ದಾರೆ.

ಸೂರ್ಯಕುಮಾರ್‌ ಯಾದವ್‌ ಗೆ ಸ್ಥಾನ ನೀಡಿ:
ವಿದೇಶಿ ಪಿಚ್‌ ಗಳಲ್ಲಿ ರನ್‌ ಬರ ಎದುರಿಸುತ್ತಿರುವ ಶುಭಮನ್‌ ಗಿಲ್‌ ಬದಲಿಗೆ, ಸೂರ್ಯಕುಮಾರ್‌ ಯಾದವ್‌, ಋತುರಾಜ್‌ ಗಾಯಕ್ವಾಡ್‌ ಅಥವಾ ಸಾಯಿಸುದರ್ಶನ್‌ ಗೆ ಸ್ಥಾನ ಕಲ್ಪಿಸಬೇಕೆಂದು ಶ್ರೀಕಾಂತ್‌ ಅವರು ಆಯ್ಕೆ ಮಂಡಳಿಗೆ ಸಲಹೆ ನೀಡಿದ್ದಾರೆ.

`ಶುಭಮನ್‌ ಗಿಲ್‌ ಅವರು ಸುದೀರ್ಘ ಕಾಲದವರೆಗೂ ರನ್‌ ಗಳಿಸದಿದ್ದರೂ ಕೂಡ ಆತನಿಗೆ ತಂಡದಲ್ಲಿ ಏಕೆ ಸ್ಥಾನ ನೀಡುತ್ತಿದ್ದಾರೆ ಎಂಬುದು ಕೆಲವರಲ್ಲಿ ಆಶ್ಚರ್ಯ ಮೂಡಿಸಿದೆ. ಅಲ್ಲದೆ ಸೂರ್ಯಕುಮಾರ್‌ ಗೆ ಏಕೆ ಅವಕಾಶ ನೀಡಬಾರದು ಎಂಬ ಪ್ರಶ್ನಿ ಕೇಳುತ್ತಿದ್ದಾರೆ’ ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

`ಸೂರ್ಯಕುಮಾರ್‌ ಯಾದವ್‌ ಅವರ ಆರಂಭಿಕ ಟೆಸ್ಟ್‌ ಜೀವನ ಅಷ್ಟೇನೂ ಆಶಾದಾಯಕವಾಗಿಲ್ಲ. ಆದರೆ ಆತನಲ್ಲಿ ಈ ಮಾದರಿಯಲ್ಲಿ ಮಿಂಚಬಲ್ಲ ಸಾಮರ್ಥ್ಯ ಹಾಗೂ ಕೌಶಲ್ಯ ಹೊಂದಿದ್ದಾನೆ. ಆದರೆ ಆಯ್ಕೆ ಮಂಡಳಿಯು ಆತನನ್ನು ವೈಟ್‌ ಬಾಲ್‌ ಸ್ಪೆಷಾಲಿಸ್ಟ್‌ ಪಟ್ಟ ಕಟ್ಟಿಬಿಟ್ಟಿರುವುದರಿಂದ ಟೆಸ್ಟ್‌ ಗೆ ಹೊಸ ಮುಖಗಳನ್ನು ಕರೆತರಬೇಕು’ ಎಂದು ಹೇಳಿದರು.

ಋತುರಾಜ್‌ ಗಾಯಕ್ವಾಡ್‌ ಹಾಗೂ ಸಾಯಿ ಸುದರ್ಶನ್‌ಅವರು ಪ್ರಥಮ ದರ್ಜೆ ಹಾಗೂ ವಿದೇಶಗಳಲ್ಲಿ ನಡೆಯುವಎ’ ಗ್ರೂಪ್‌ ನ ಪಂದ್ಯಗಳಲ್ಲಿ ಹೇರಳವಾಗಿ ರನ್‌ ಗಳಿಸುತ್ತಿದ್ದು ಗಿಲ್‌ ಬದಲಿಗೆ ಈ ಆಟಗಾರರಿಗೆ ಅವಕಾಶ ಕಲ್ಪಿಸಬೇಕು’ ಎಂದು ಶ್ರೀಕಾಂತ್‌ ಹೇಳಿದ್ದಾರೆ.

RELATED ARTICLES

Latest News