Saturday, October 5, 2024
Homeಜಿಲ್ಲಾ ಸುದ್ದಿಗಳು | District Newsಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ : ಕೆಆರ್‌ಎಸ್‌‍ ಒಳಹರಿವು ಹೆಚ್ಚಳ

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ : ಕೆಆರ್‌ಎಸ್‌‍ ಒಳಹರಿವು ಹೆಚ್ಚಳ

ಮೈಸೂರು,ಜೂ.29- ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಕೃಷ್ಣರಾಜ ಜಲಶಾಯಕ್ಕೆ 18,644 ಕ್ಯೂಸೆಕ್‌ ಒಳಹರಿವು ಹೆಚ್ಚಳವಾಗಿದೆ. ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಜಲಾಶಯದಲ್ಲಿ 92.80 ಅಡಿ ನೀರು ಸಂಗ್ರಹವಾಗಿದೆ. 124.8 ಅಡಿ ಗರಿಷ್ಠ ಮಟ್ಟದ ಕೆಆರ್‌ಎಸ್‌‍ ಡ್ಯಾಮ್‌ 93 ಅಡಿ ತಲುಪುವ ಸನ್ನಿಹದಲ್ಲಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಕಾವೇರಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರದಿಂದ ಕೆಆರ್‌ಎಸ್‌‍ಗೆ ಒಳಹರಿವು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ.

ನಿನ್ನೆ 13,437 ಕ್ಯೂಸೆಕ್‌ ಒಳಹರಿವು ಇತ್ತು. ಇಂದು ಒಳಹರಿವಿನ ಪ್ರಮಾಣ 18,644 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಇದೇ ರೀತಿ ಮಳೆಯ ಪ್ರಮಾಣ ಹೆಚ್ಚಾಗಿ ಒಳಹರಿವಿನ ಪ್ರಮಾಣ ಹೆಚ್ಚಾದರೆ ಜಲಾಶಯದಲ್ಲಿ ನೀರು ಸಂಗ್ರಹವು ಹೆಚ್ಚಾಗುತ್ತದೆ. ಸದ್ಯ ಒಳಹರಿವು 478 ಕ್ಯೂಸೆಕ್‌ ಮಾತ್ರ ಇದೆ.

RELATED ARTICLES

Latest News