Saturday, August 23, 2025
Homeರಾಜ್ಯನವೆಂಬರ್‌ನಲ್ಲಿ ಕೆಸೆಟ್‌-25ರ ಪರೀಕ್ಷೆ

ನವೆಂಬರ್‌ನಲ್ಲಿ ಕೆಸೆಟ್‌-25ರ ಪರೀಕ್ಷೆ

KSET-25 exam in November

ಬೆಂಗಳೂರು, ಆ.23-ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯು ನ.2ರಂದು ನಡೆಯಲಿದ್ದು, ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಆಹ್ವಾನಿಸಲಾಗಿದೆ. ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆ.28ರಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದೆ.

ಕೆಸೆಟ್‌-25ರ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸೆ.18 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಪಾವತಿಗೆ ಸೆ.19ರವರೆಗೆ ಅವಕಾಶವಿರುತ್ತದೆ. ಅ.24ರಂದು ಪ್ರವೇಶ ಪತ್ರ ಬಿಡುಗಡೆಯಾಗಲಿದೆ. ಆನ್‌ ಲೈನ್‌ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬಹುದಾಗಿದ್ದು, ಇತರ ಯಾವುದೇ ವಿಧದಲ್ಲಿ ಅರ್ಜಿ ಸ್ವೀಕರಿಸುವುದಿಲ.್ಲ ಒಟ್ಟು 33 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಎಂಡಿಎಸ್‌‍: ಅರ್ಜಿ ಸಲ್ಲಿಸಲು ನಾಳೆ ಕಡೇ ದಿನ
ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಲಭ್ಯವಿರುವ ಸೀಟುಗಳಿಗೆ ಸ್ಟ್ರೇ ವೇಕೆನ್ಸಿಸುತ್ತಿನ ಸೀಟು ಹಂಚಿಕೆ ಮಾಡುತ್ತಿದ್ದು, ಅರ್ಹರು ನಾಳೆಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ಎಂಸಿಸಿಯು ಕನಿಷ್ಠ ಅರ್ಹತೆಯ ಅಂಕಗಳನ್ನು ಕಡಿಮೆ ಮಾಡಿದ್ದು, ಅರ್ಹರಾಗುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿರುವವರು ಕೂಡ ಭಾಗವಹಿಸಬಹುದು.ಮೂಲ ದಾಖಲೆಗಳ ಪರಿಶೀಲನೆ ಸಂಬಂಧ ನಂತರ ಮಾಹಿತಿ ನೀಡಲಾಗುವುದು ಎಂದು ಕೆಇಎ ಹೇಳಿದೆ.

ಹೆಚ್ಚುವರಿ ಸೀಟ್‌ ಮ್ಯಾಟ್ರಿಕ್ಸ್ : ಯುಜಿಸಿಇಟಿ/ನೀಟ್‌ ಪ್ರವೇಶ ಕುರಿತ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್‌ಗಳನ್ನು ಮರು ಕ್ರಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚುವರಿ ಸೀಟ್‌ ಮ್ಯಾಟ್ರಿಕ್‌್ಸಬಂದಿರುವ ಕಾರಣಕ್ಕೆ ಕೆಲವು ಕೋರ್ಸ್‌ಗಳಿಗೆ ಆಪ್ಷನ್ಸ್ ದಾಖಲಿಸುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಒಟ್ಟು 14 ಬಿಎಸ್‌‍ಸಿ ನರ್ಸಿಂಗ್‌, 12 ಆಯುರ್ವೇದ ಮತ್ತು ಎರಡು ಆರ್ಕಿಟೆಕ್ಚರ್‌ ಕಾಲೇಜುಗಳು ಹೆಚ್ಚುವರಿಯಾಗಿ ಸೀಟ್‌ ಮ್ಯಾಟ್ರಿಕ್‌್ಸಗೆ ಸೇರ್ಪಡೆಯಾಗಿವೆ. ಈ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಇಚ್ಛಿಸುವವರು ವೆಬ್‌ಸೈಟ್‌ನಲ್ಲಿ ಲಭ್ಯ ಸೀಟುಗಳ ಮಾಹಿತಿ ಪಡೆದು ಆಪ್ಷನ್‌್ಸ ದಾಖಲಿಸಬಹುದು ಎಂದು ಹೇಳಲಾಗಿದೆ.

RELATED ARTICLES

Latest News