ಚೇಳೂರು, ಏ.12- ದ್ವಿಚಕ್ರ ವಾಹನಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಯರಬಳ್ಳಿ ಗ್ರಾಮದ ಬಳಿ ರಾತ್ರಿ ನಡೆದಿದೆ.
ಮಂಜುನಾಥ (35) ಮೃತಪಟ್ಟ ವ್ಯಕ್ತಿ.
ಬಾಣಂತನಕ್ಕೆ ಪತ್ನಿ ತವರೂರಾದ ಮಚ್ಚೂರಳ್ಳಿಗೆ ತೆರಳಿದ್ದು, ರಾತ್ರಿ 20 ದಿನದ ಮಗು ಹಾಗೂ ಪತ್ನಿಯನ್ನು ನೋಡಿಕೊಂಡು ಬೈಕ್‌ನಲ್ಲಿ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾಗ ತುಮಕೂರು ಕಡೆಯಿಂದ ಮನ್ಸೂರಳ್ಳಿ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಅವಘಡ ನಡೆದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಬೇಳೂರು ಠಾಣೆಯ ಪಿಎಸ್‌ಐ ನಾಗರಾಜು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.