Sunday, May 4, 2025
Homeಬೆಂಗಳೂರುಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮಗ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೇ ಫಸ್ಟ್

ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮಗ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೇ ಫಸ್ಟ್

KSRTC bus driver's son tops school in SSLC exam

ಬೆಂಗಳೂರು,ಮೇ3- ಮೈಸೂರು ಜಿಲ್ಲೆ ಕೆಆರ್‌ನಗರ ತಾಲ್ಲೂಕು ಸಾಲಿಗ್ರಾಮ ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಬಿ.ಎಂ.ಪುಟ್ಟರಾಜು ಅವರ ಮಗ ಯಶಸ್.ಪಿ ಗೌಡ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣನಾಗಿ ಗಮನ ಸೆಳೆದಿದ್ದಾನೆ.

ಸಾಲಿಗ್ರಾಮ ಸರ್ಕಾರಿ ಜೂನಿಯರ್ ಕಾಲೇಜ್ (ಜಿಜೆಸಿ)ನಲ್ಲಿ ಓದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 566 ಅಂಕ ಗಳಿಸಿ (ಶೇ.91) ಶಾಲೆಗೆ ಮೊದಲಿಗನಾಗಿ ತೇರ್ಗಡೆಯಾಗಿ ಪೋಷಕರಿಗೆ, ಶಿಕ್ಷಕರಿಗೆ ಕೀರ್ತಿ ತಂದಿದ್ದಾನೆ.

ಸರ್ಕಾರಿಶಾಲೆಯಲ್ಲಿ ವಿದ್ಯಾಭ್ಯಾಸಮಾಡಿಗ್ರಾಮೀಣ ವಿದ್ಯಾರ್ಥಿಯಾಗಿ ಯಶಸ್ ಮಾಡಿರುವ ಸಾಧನೆ ಅನುಕರಣೀಯ. ಮುಂದೆ ಪಿಸಿಎಂಬಿ ಐಚ್ಛಿಕ ವಿಷಯಗಳನ್ನು ತೆಗೆದುಕೊಂಡು ಡಾಕ್ಟರ್ ಆಗುವ ಹಂಬಲ ಹೊಂದಿದ್ದಾನೆ.

RELATED ARTICLES

Latest News