ಬೆಂಗಳೂರು,ಅ.11– ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರವಾಸಿತಾಣಗಳನ್ನು ಪರಿಚಯಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಆರ್ಟಿಸಿ) ವತಿಯಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಸ್ಥಳಗಳಿಂದ ಟೂರ್ ಪ್ಯಾಕೇಜ್ ಕಲ್ಪಿಸಿದೆ.
ವೋಲ್ವೋ, ಅಶ್ವಮೇಧ ಹಾಗೂ ಕರ್ನಾಟಕ ಸಾರಿಗೆಗಳಲ್ಲಿ ಟೂರ್ ಪ್ಯಾಕೇಜ್ ರೂಪಿಸಿದ್ದು, ಅ.22ರವರೆಗೆ ಈ ಸೌಲಭ್ಯವಿರುತ್ತದೆ. ಬೆಂಗಳೂರಿನಿಂದ ವೋಲ್ವೊ ಬಸ್ ಮೂಲಕ ಹಾಸನ ತಲುಪಿ, ಹಾಸನಾಂಬೆದೇವಿ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯದ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು 470 ಕಿ.ಮೀ ಪ್ರಯಾಣವಿದ್ದು, ಬೆಳಗ್ಗೆ 6 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡಲಿದೆ.
ವಯಸ್ಕರಿಗೆ (ಹಾಸನಾಂಬದೇವಿ 1000 ರೂ. ಟಿಕೆಟ್ ದರ್ಶನ ಸೌಲಭ್ಯ ಸೇರಿದಂತೆ) 2500 ರೂ, ಮಕ್ಕಳಿಗೆ 1000 ರೂ. ಟಿಕೆಟ್ನ ದರ್ಶನ ಸೌಲಭ್ಯ ಸೇರಿದಂತೆ 2200 ರೂ. ದರ ನಿಗದಿ ಮಾಡಲಾಗಿದೆ.
ಇನ್ನು ಇದೇ ಮಾರ್ಗದಲ್ಲಿ ಹೊರಡುವ ಅಶ್ವಮೇಧ ಬಸ್ನಲ್ಲಿ ವಯಸ್ಕರಿಗೆ ಸಾವಿರ ರೂ. ಟಿಕೆಟ್, ದೇವಿಯ ದರ್ಶನ ಸೇರಿದಂತೆ 2 ಸಾವಿರ ರೂ, ಮಕ್ಕಳಿಗೆ 1100 ರೂ. ಟಿಕೆಟ್ನ ದರ್ಶನ ಸೌಲಭ್ಯ ಸೇರಿದಂತೆ 1900 ರೂ. ದರ ಇರಲಿದೆ.
ಸಾರಿಗೆ ಬಸ್ ಮೂಲಕ ಹಾಸನ, ಆಲೂರು ಮಾರ್ಗವಾಗಿ ಹಾಸನಾಂಬೆ ದೇವಾಲಯ, ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮನ ಹೊಸಕೋಟೆ ದೇವಾಲಯ ಸ್ಥಳಗಳನ್ನು ವೀಕ್ಷಿಸಬಹುದಾಗಿದ್ದು, ಒಟ್ಟು 90 ಕಿ.ಮೀ ಪ್ರಯಾಣದರವಿದ್ದು, ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಬಸ್ ಹೊರಡಲಿದ್ದು, ಹಾಸನಾಂಬೆದೇವಿಯ 1000 ರೂ. ಟಿಕೆಟ್ ದರ್ಶನ ಸೌಲಭ್ಯ ಸೇರಿದಂತೆ 1400 ರೂ, ಮಕ್ಕಳಿಗೆ 1300 ರೂ, ಟಿಕೆಟ್ ದರ ಇರಲಿದೆ.
ಜಿಲ್ಲೆಯ ಪ್ರವಾಸಿ ತಾಣಗಳಾದ ಬೇಲೂರು ಚನ್ನಕೇಶದೇವಾಲಯ,ಯಗಚ ಜಲಾಶಯ, ಪುಷ್ಪಗಿರಿ, ಹೊಯ್ಸಳೇಶ್ವರ ದೇವಾಲಯ, ಶ್ರವಣಬೆಳಗೊಳ, ವಿಂದ್ಯಾಗಿರಿ ಬೆಟ್ಟ, ಚಂದಗಿರಿಬೆಟ್ಟ, ಮಾಲೆಕಲ್ಲು ತಿರುಪತಿ, ಜೇನುಕಲ್ಲು ಸಿದ್ದೇಶ್ವರ, ಹೇಮಾವತಿ ಜಲಾಶಯ, ಗೊರೂರು ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿಗೆ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ದೂರವಾಣಿ ಸಂಖ್ಯೆ 7760990518, 7760990519, 7760990523 ನಂಬರ್ಗೆ ಸಂಪರ್ಕಿಸಬಹುದು. ಜೊತೆಗೆ ಸಂಸ್ಥೆಯ ವೆಬ್ಸೆಟ್ ಮುಖಾಂತರ ಮಾಹಿತಿ ಪಡೆಯಬಹುದಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.