ದುಬೈ, ಜು.1- ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಮೆಕಾನ್ ಹಾಗೂ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮದ ಸಾಗರೋತ್ತರ ಕಚೇರಿಗಳನ್ನು ಉದ್ಘಾಟಿಸಿದ ಕೇಂದ್ರದ ಉಕ್ಕುವ ಹೆಚ್.ಡಿ. ಕುಮಾರಸ್ವಾಮಿ ಅವರು ದುಬೈನ ಪ್ರಮುಖ ಆಡಳಿತಗಾರರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.
ನಿನ್ನೆ ದುಬೈನಲ್ಲಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಅವರು, ಎರಡೂ ವ್ಯೂಹಾತ್ಮಕ ಕಚೇರಿಗಳನ್ನು ಉದ್ಘಾಟಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸುಪ್ರೀಂ ಕೌನ್ಸಿಲ್ ಸದಸ್ಯ ಮತ್ತು ರಾಸ್ ಅಲ್ ಖೈಮಾಹ್ ಆಡಳಿತಗಾರ ಶೇಖ್ ಸೌದ್ ಬಿನ್ ಸಕ್ಸ್ ಅಲ್ ಖಾಸಿಮಿ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದರು.
ದುಬೈನಲ್ಲಿ ನೆಲೆಯಾಗಿರಿಸಿಕೊಂಡು ಕೊಲ್ಲಿ ಭಾಗದಲ್ಲಿ ಕಾರ್ಯನಿರ್ವಹಿಸುವ ಎನ್ ಎಂಡಿಸಿ ಮತ್ತು ಮೆಕಾನ್ ಗಳ ಅಂತಾರಾಷ್ಟ್ರೀಯ ಕಚೇರಿಗಳ ಉದ್ಘಾಟನೆ ಮಾಡಿದರು. ನನ್ನ ಭೇಟಿಯು ಭಾರತ ಮತ್ತು ಯುಎಇ ನಡುವೆ ಆಳವಾಗಿ ಬೇರೂರಿರುವ ಮತ್ತು ವಿಕಸನಗೊಳ್ಳುತ್ತಿರುವ ಸದೃಢವಾದ ಪಾಲುದಾರಿಕೆಯನ್ನು ಒತ್ತಿ ಹೇಳುತ್ತದೆ. ಇದು ಪರಸ್ಪರ ಆರ್ಥಿಕ ಹಿತಾಸಕ್ತಿಗಳು, ಸಾಂಸ್ಕೃತಿಕ ಬಾಂಧವ್ಯಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಮುದಾಯದ ಕೊಡುಗೆಯ ಮೇಲೆ ಅವಲಂಭಿತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ವ್ಯೂಹಾತ್ಮಕ ಖನಿಜ ಪಾಲುದಾರಿಕೆ ಹಾಗೂ ಕೈಗಾರಿಕಾ ಸಹಯೋಗ ಮತ್ತು ಯುಎಇಯಲ್ಲಿ ವಾಸಿಸುವ 3.5 ಮಿಲಿಯನ್ಗಿಂತಲೂ ಹೆಚ್ಚು ಭಾರತೀಯರ ಕಲ್ಯಾಣದ ಮೇಲೆ ಕೇಂದ್ರೀಕರಿಸುವ ಮೂಲಕ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ.ರಾಸ್ ಅಲ್ ಖೈಮಾಡ್‌ದಿಂದ ಸುಣ್ಣದ ಕಲ್ಲಿನ ದೀರ್ಘಾವಧಿಯ ಆಮದು, ಭಾರತದಿಂದ ಮೌಲ್ಯವರ್ಧಿತ ಉಕ್ಕಿನ ರಫ್ತುಗಳ ಮೂಲಕ ವ್ಯಾಪಾರ ಪಾಲುದಾರಿಕೆ ವಿಸ್ತರಿಸುವುದು, ಹಸಿರು ಹೈಡೋಜನ್ ಮತ್ತು ಗ್ರೀನ್ ಸ್ಟೀಲ್ ಸಹಯೋಗವನ್ನು ಅನ್ವೇಷಿಸುವುದು, ರಾಸ್ ಅಲ್ ಬೈಮಾಹ್ದಿಂದ ಸ್ಥಳೀಯ ಸುಣ್ಣದ ಕಲ್ಲು ಮತ್ತು ನೈಸರ್ಗಿಕ ಅನಿಲವನ್ನು ಬಳಸಿಕೊಂಡು ಸುಣ್ಣದ ಉತ್ಪಾದನಾ ಘಟಕಗಳ ಸ್ಥಾಪನೆ. ಭಾರತೀಯ ಉಕ್ಕು ಪ್ರಾಧಿಕಾರ, ರಾಷ್ಟ್ರೀಯ ಖನಿಜಾವೃದ್ಧಿ ನಿಗಮ ಮತ್ತು ಮೆಕಾನ್‌ನಂತಹ ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಗಳ ಮೂಲಕ ಹೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಪ್ರಮುಖ ಅಂಶಗಳ ಬಗ್ಗೆ ಸಚಿವರು ಚರ್ಚೆ ನಡೆಸಿದ್ದಾರೆ.
ಭಾರತವು ಉಕ್ಕನ್ನು ಕೇವಲ ಒಂದು ವಸ್ತುವನ್ನಾಗಿ ನೋಡುವುದಿಲ್ಲ. ಮೂಲಸೌಕರ್ಯ, ಚಲನಶೀಲತೆ, ಇಂಧನ ಮತ್ತು ಉತ್ಪಾದನಾ ವಲಯಗಳ ಬೆನ್ನೆಲುಬಾಗಿ ಉಕ್ಕನ್ನು ನಾವು ಗುರುತಿಸುತ್ತೇವೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಒತ್ತಿ ಹೇಳಿದ್ದಾರೆ. ರಾಸ್ ಅಲ್ ಖೈಮಾಕ್ನ ಖನಿಜ ಸಂಪತ್ತು, ಕೈಗಾರಿಕಾ ಸಾಮರ್ಥ್ಯ ಮತ್ತು ಶುದ್ಧ ಇಂಧನವು ಭಾರತದ ಮುಂದಿನ ಪೀಳಿಗೆಯ ಉಕ್ಕು ಮತ್ತು ಸಂಪನ್ಮೂಲ ಕಾರ್ಯತಂತ್ರಕ್ಕೆ ಆದರ್ಶ ಪಾಲುದಾರನನ್ನಾಗಿ ಮಾಡುತ್ತದೆ ಎಂಬ ಅಂಶವನ್ನು ಅಲ್ಲಿನ ಆಡಳಿತಾರರ ಗಮನಕ್ಕೆ ಅವರು ತಂದಿದ್ದಾರೆ.
ಭಾರತದ ಅತಿದೊಡ್ಡ ಉಕ್ಕು ಉತ್ಪಾದಕ ಸಂಸ್ಥೆಗಳಲ್ಲಿ ಒಂದಾದ, ಪ್ರಸ್ತುತ ರಾಸ್ ಅಲ್ ಖೈಮಾಹ್ಯದ ಆಧಾರಿತ ಸ್ಟೀವಿನ್ ರಾಕ್ ನಿಂದ ವಾರ್ಷಿಕವಾಗಿ ಸುಮಾರು 2.5 ದಶಲಕ್ಷ ಟನ್ ಸುಣ್ಣದ ಕಲ್ಲನ್ನು ಆಮದು ಮಾಡಿಕೊಳ್ಳುತ್ತಿದೆ. ಭವಿಷ್ಯದಲ್ಲಿ ಸಾಮರ್ಥ್ಯದ ವಿಸ್ತರಣೆಯ ಭಾಗವಾಗಿ ವಾರ್ಷಿಕ 20 ರಿಂದ 35 ದಶಲಕ್ಷ ಟನ್‌ಗಳಿಗೆ ಆಮದು ಹೆಚ್ಚಾಗಲಿದೆ. ಮೂಲಸೌಕರ್ಯ ಅಭಿವೃದ್ಧಿ, ಇಂಧನ ಘಟಕಗಳು ಮತ್ತು ಕಚ್ಚಾ ವಸ್ತುಗಳ ಮೌಲ್ಯ ಸರಪಳಿಗಳಲ್ಲಿ ಸಹಯೋಗವನ್ನು ಅನ್ವೇಷಿಸಲು ಸಚಿವರು, ರಾಸ್ ಅಲ್ ಖೈಮಾಹ್ಗೆ ಆಹ್ವಾನ ನೀಡಿದ್ದಾರೆ.
- ಐದು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ಪ್ರಧಾನಿ ಮೋದಿ, ಟೀಕಿಸಿದ ಕಾಂಗ್ರೆಸ್
- ರಾಜ್ಯದಲ್ಲಿ ಮೂರು ದಿನಗಳ ಕಾಲ ಸಾಧಾರಣ ಮಳೆ ನಿರೀಕ್ಷೆ
- ಬಿಎಸ್ಎಫ್ ಯೋಧನ ಪತ್ನಿ ಮೇಲೆ ಅತ್ಯಾಚಾರ
- ನನಗೆ ಮಂತ್ರಿಗಿರಿಯ ಆಸೆಯಿಲ್ಲ : ರಾಜುಕಾಗೆ
- ಕೋಲಾರದಲ್ಲಿ ರಾಜಕೀಯ ಕಾದಾಟ, ಶಾಸಕರ ನಡುವೆ ಬಹಿರಂಗ ವಾಕ್ಸಮರ