Friday, May 23, 2025
Homeರಾಷ್ಟ್ರೀಯ | Nationalಕುಮಾರಸ್ವಾಮಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ : ಡಿಕೆಶಿ ತಿರುಗೇಟು

ಕುಮಾರಸ್ವಾಮಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ : ಡಿಕೆಶಿ ತಿರುಗೇಟು

Kumaraswamy is mentally ill: DK Shivakumar's retort

ವಿಜಯಪುರ,ಮೇ 23- ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಮಾನಸಿಕ ಅಸ್ವಸ್ಥತೆ ಕಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳಿಗೆ ಮತ್ತೊಂದು ಹೆಸರೇ ಕುಮಾರಸ್ವಾಮಿ. ಅವರು ಮೆಂಟಲ್‌ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಟಿ ರನ್ಯಾರಾವ್‌ ದುಬೈನಿಂದ ಚಿನ್ನ ತರುತ್ತಿರುವ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದೇ ಕಾಂಗ್ರೆಸ್‌‍ನ ಮಹಾನಾಯಕ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ಇದಕ್ಕೆ ಡಿ.ಕೆ.ಶಿವಕುಮಾರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಬೇರೆ ಜಿಲ್ಲೆಯಿಂದ ಬಂದವರು, ನಾವು ಬೆಂಗಳೂರಿನವರು, ನಮ ಅಸಿತೆಯನ್ನು ಉಳಿಸಿಕೊಳ್ಳಲು ರಾಮನಗರ ಹೆಸರನ್ನು ಬದಲಾವಣೆ ಮಾಡಲಾಗಿದೆ, ಇದರಿಂದ ಅವರಿಗಾಗಿರುವ ತೊಂದರೆಯೇನು? ರಾಮನಗರವನ್ನು ಬದಲಾವಣೆ ಮಾಡುತ್ತಿಲ್ಲ. ರಾಮನಗರ ರಾಮನಗರವಾಗಿಯೇ ಉಳಿಯುತ್ತದೆ. ಕುಮಾರಸ್ವಾಮಿ ಯವರೇಕೆ ಹಾಸನ ಜಿಲ್ಲೆಯಿಂದ ಇಲ್ಲಿಗೆ ಬಂದರು. ಹಾಸನದಲ್ಲೇ ರಾಜಕಾರಣ ಮಾಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ ಮೊದಲು ಹೆಸರು ಬದಲಾವಣೆ ಮಾಡಿಕೊಳ್ಳಲಿ. ಅವರ ಹೆಸರ ಮುಂದಿರುವ ಊರಿನ ಇನ್ಶಿಲ್‌ ಅನ್ನು ಬದಲಾವಣೆ ಮಾಡಿಕೊಳ್ಳಲಿ. ಈಗಲೂ ಅವರು ಎಚ್‌ಡಿ ಎಂದು ಇಟ್ಟುಕೊಂಡಿರುವುದೇಕೆ? ಎಂದರು.ಮದ್ರಾಸ್‌‍ಗೆ ಚೆನ್ನೈ ಎಂದು ಗುಲ್ಬರ್ಗವನ್ನು ಕಲಬುರಗಿ ಎಂದು ಬಿಜಾಪುರವನ್ನು ವಿಜಯಪುರ ಎಂದು ಬದಲಾವಣೆ ಮಾಡಲಾಗಿದೆ. ಇದರಿಂದ ಅವರಿಗಾಗುವ ತೊಂದರೆಯೇನು ಎಂದು ಪ್ರಶ್ನಿಸಿದರು.

ರಿಯಲ್‌ ಎಸ್ಟೇಟ್‌ ಅಭಿವೃದ್ಧಿಗಾಗಿ ಹೆಸರು ಬದಲಾವಣೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಹೌದು. ರೈತರ, ಹಳ್ಳಿಜನಗಳ ಅಭಿವೃದ್ಧಿಯಾಗಬೇಕು. ನಮ ಆಸ್ತಿಗಳ ಬೆಲೆ ಜಾಸ್ತಿಯಾಗಬೇಕು. ಪ್ರತಿಯೊಬ್ಬ ರೈತನಿಗೂ ಒಳ್ಳೆಯದಾಗಬೇಕು. ವಿದೇಶಗಳಿಂದ ಬಂದು ಬಂಡವಾಳ ಹೂಡಿಕೆ ಮಾಡಬೇಕು. ಉದ್ಯೋಗ ಸಿಗಬೇಕು ಎಂಬುದು ನಮ ಆಸೆ ಎಂದರು.

ನ್ಯಾಷನಲ್‌ ಹೆರಾಲ್ಡ್ ಸಂಸ್ಥೆಗೆ ನಾನು 25 ಲಕ್ಷ ರೂ. ನೀಡಿದ್ದೇನೆ. ನಮ ಟ್ರಸ್ಟ್‌ನಿಂದ 2.50 ಕೋಟಿ ರೂ. ನೀಡಿದ್ದೇವೆ. ನಾವೇನು ಕದ್ದು ಕೊಟ್ಟಿಲ್ಲ. ಸಂಪಾದನೆ ಮಾಡಿದ ಆಸ್ತಿಯಲ್ಲಿ ರಾಜಾರೋಷವಾಗಿ ನಮ ಪಕ್ಷ ನಡೆಸುವ ಪತ್ರಿಕೆಗೆ ಕೊಟ್ಟಿದ್ದೇವೆ. ಇದರಲ್ಲಿ ತಪ್ಪೇನು ಎಂದು ಸಮರ್ಥಿಸಿಕೊಂಡರು.

RELATED ARTICLES

Latest News