ಶ್ರೀನಗರ,ಅ.9-ಲಡಾಕ್-ಕಾರ್ಗಿಲ್ ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. 26 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನಿರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟವು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು, ಬಿಜೆಪಿ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ ಇದಾಗಿದೆ. ನ್ಯಾಷನಲ್ ಕಾನರೆನ್ಸ್ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಎಂಟು ಸ್ಥಾನಗಳನ್ನು ಗೆದ್ದಿದೆ. ಮೂರು ಸ್ಥಾನಗಳಲ್ಲಿ ಪಕ್ಷೇತರರು ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಇನ್ನೂ ಎರಡು ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಪಿಡಿಪಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ.
ಎನ್‌ಸಿಯಿಂದ 17 ಮತ್ತು ಕಾಂಗ್ರೆಸ್‍ನ 22 ಸೇರಿದಂತೆ ಒಟ್ಟು 85 ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ 17 ಸ್ಥಾನಗಳಲ್ಲಿ ಸ್ರ್ಪಧಿಸಿತ್ತು. ಎನ್‌ಸಿಪಿ-ಕಾಂಗ್ರೆಸ್ ಎರಡು ಪ್ರಬಲ ಧಾರ್ಮಿಕ ಸಂಸ್ಥೆಗಳ ಬೆಂಬಲವನ್ನು ಹೊಂದಿತ್ತು ಎಂದು ಹೇಳಲಾಗುತ್ತಿದೆ. ಜಮಿಯತ್ ಉಲೇಮಾ ಕಾರ್ಗಿಲ್ ಮತ್ತು ಇಮಾಮ್ ಖುಮೈನಿ ಸ್ಮಾರಕ ಟ್ರಸ್ಟ್‌ಗಳು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಿದ್ದವು. ಎರಡು ಧಾರ್ಮಿಕ ಸಂಸ್ಥೆಗಳ ಧರ್ಮ ಗುರುಗಳು ಬಿಜೆಪಿ ವಿರುದ್ಧ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದರು ಎನ್ನಲಾಗಿದೆ.
ಬಹುಜನರನ್ನು ಗುಲಾಮಗಿರಿಯಿಂದ ಹೊರತರುವಲ್ಲಿ ಕಾನ್ಶಿರಾಮ್ ಪಾತ್ರ ಮಹತ್ವದ್ದು : ಮಾಯಾವತಿ
ಜನರ ತೀರ್ಪಿಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನಿರೆನ್ಸ್ ನಾಯಕ ಒರ್ಮ ಅಬ್ದುಲ್ಲಾ, ನ್ಯಾಷನಲ್ ಕಾನಿರೆನ್ಸ್ -ಕಾಂಗ್ರೆಸ್ ಮೈತ್ರಿಯಿಂದ ಬಿಜೆಪಿ ಹೀನಾಯ ಸೋಲನ್ನು ಕಂಡಿದೆ ಎಂದು ಹೇಳಿದ್ದಾರೆ. ಈ ಫಲಿತಾಂಶವು ಪ್ರಜಾಸತ್ತಾತ್ಮಕವಾಗಿದೆ. ಅಸಾಂವಿಧಾನಿಕವಾಗಿ ಜನರ ಒಪ್ಪಿಗೆಯಿಲ್ಲದೆ ರಾಜ್ಯವನ್ನು ವಿಭಜಿಸಿದ ಎಲ್ಲಾ ಶಕ್ತಿಗಳು ಮತ್ತು ಪಕ್ಷಗಳಿಗೆ ಇದು ಸಂದೇಶವನ್ನು ಕಳುಹಿಸಿದೆ. ಚುನಾವಣಾ ಫಲಿತಾಂಶ ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಜಯವು ನ್ಯಾಷನಲ್ ಕಾನರನ್ಸ್-ಕಾಂಗ್ರೆಸ್ ಮೈತ್ರಿಯನ್ನು ಬೆಂಬಲಿಸಿದೆ ಝನ್ಸ್ಕಾರ್, ಕಾರ್ಗಿಲ್ ಮತ್ತು ಡ್ರಾಸ್ ಜನರಿಗೆ ಸೇರಿದೆ. ಚುನಾಯಿತ ಎಲ್ಲಾ ಕೌನ್ಸಿಲರ್‍ಗಳಿಗೆ ನಾವು ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಜನರ ಸೇವೆಗಾಗಿ ಅವರ ಸಮರ್ಪಣೆಯನ್ನು ಗೌರವಿಸುತ್ತೇವೆ. ಅವಿರತ ಬೆಂಬಲಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.