ಬೆಂಗಳೂರು, ಜ.19– ಗಣರಾಜ್ಯೋತ್ಸವ ಅಂಗವಾಗಿ ಸಸ್ಯಕಾಶಿ ಲಾಲ್ಬಾಗ್ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಇಂದು ಸಾವಿರಾರು ಜನರು ಬಂದಿದ್ದರು.ಗಾಜಿನ ಮನೆಯಲ್ಲಿ ಆದಿಕವಿ ಮಹರ್ಷಿ ವಾಲೀಕಿ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಇಂದು ಭಾನುವಾರವಾದ್ದರಿಂದ ಸಾವಿರಾರು ಜನರು ಭೇಟಿ ನೀಡಿ ವಿವಿಧ ಬಗೆಯ ಹೂಗಳಿಂದ ಮೂಡಿಬಂದ ಕಲಾಕೃತಿಗಳನ್ನು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲಾ-ಕಾಲೇಜುಗಳಿಗೆ ರಜೆ ಇದ್ದುದರಿಂದ ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರು ಲಾಲ್ಬಾಗ್ಗೆ ಆಗಮಿಸಿದ್ದರು. ಹೆಚ್ಚಿನ ಜನರು ಆಗಮಿಸಿದ್ದರಿಂದ ಉದ್ಯಾನವನದ ನಾಲ್ಕು ದ್ವಾರಗಳ ಟಿಕೆಟ್ ಕೌಂಟರ್ಗಳಲ್ಲಿ ಸರದಿ ಸಾಲು ಕಂಡು ಬಂತು.
ನಿನ್ನೆ ಒಂದೇ ದಿನ 36 ಲಕ್ಷ ಜನರು ಭೇಟಿ ನೀಡಿದ್ದು, ಒಟ್ಟು 21.44 ಲಕ್ಷ ರೂ. ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆ ಇದೆ. ಬಾಳೆ ಎಲೆ, ತೆಂಗಿನ ಗರಿಗಳಲ್ಲಿ ಅರಳಿದ ಅಮೃತಸರದ ವಾಲೀಕಿ ಆಶ್ರಮ, ರಾಮ-ಸೀತೆ ಹಾಗೂ ಲಕ್ಷ್ಮಣರ ಕಲಾಕೃತಿಗಳು ಪ್ರೇಕ್ಷಕರ ಗಮನ ಸೆಳೆದವು.
ಲಾಲ್ಬಾಗ್ನ ತೋಟಗಾರಿಕಾ ಮಾಹಿತಿ ಕೇಂದ್ರದಲ್ಲಿ ಈ ವಿಶೇಷ ಪ್ರದರ್ಶನ ಕಂಡುಬಂದಿತು.
ಜಾನೂರ್ ಕಲೆಯ ಮೂಲಕ ಕಪ್ಪು ಸುಂದರಿ ಪ್ರತಿಮೆಗೆ ತೆಂಗಿನ ಗರಿಗಳಿಂದ ಅಲಂಕಾರ ಮಾಡಿದ್ದು ಆಕರ್ಷಿಸುವಂತಿತ್ತು.ವಿವಿಧ ಬಗೆಯ ತರಕಾರಿಗಳಿಂದ ಮೂಡಿಬಂದ ಕಲಾಕೃತಿಗಳು ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.
ಹೂವು, ಬಾಳೆ ಎಲೆ, ತೆಂಗಿನ ಗರಿ, ತರಕಾರಿಗಳಲ್ಲಿ ಬಗೆಬಗೆಯ ವಿನ್ಯಾಸದ ಕಲಾಕೃತಿಗಳು ಎಂಥವರನ್ನೂ ಸಹ ಆಕರ್ಷಿಸುತ್ತವೆ.ಈಕೆ ಬಾನ, ಪುಷ್ಪ ಭಾರತಿ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಡಜ್ ಹೂವಿನ ಜೋಡಣೆ, ಥಾಯ್ಹಾರ್ಟ್, ಬೋನ್ಸಾಯ್ ಗಿಡಗಳ ಪ್ರದರ್ಶನ ಕಂಡು ಜನರು ಪುಳಕಿತರಾಗಿದ್ದಾರೆ.
ನಿನ್ನೆ ಈ ಕಲಾಕೃತಿಗಳ ಪ್ರದರ್ಶನಕ್ಕೆ ನಟಿ ಪ್ರೇಮಾ ಚಾಲನೆ ನೀಡಿ ಮಾತನಾಡಿ, ಹೂವು, ಬಾಳೆ, ತೆಂಗಿನ ಗರಿಯಲ್ಲಿ ವಿವಿಧ ಬಗೆಯ ವಿನ್ಯಾಸದ ಕಲಾಕೃತಿಗಳನ್ನು ಮಾಡುವುದೆಂದರೆ ಒಂದು ಧ್ಯಾನವಿದ್ದಂತೆ ಎಂದು ಹೇಳಿದ್ದಾರೆ.
ಸುಮಾರು ನೂರಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿದ್ದು,
ಇದಕ್ಕೆ ಯಾವುದೇ ಪ್ರತ್ಯೇಕ ಶುಲ್ಕವಿರುವುದಿಲ್ಲ. ಫಲಪುಷ್ಪ ಪ್ರದರ್ಶನಕ್ಕೆ ಪಡೆದ ಟಿಕೆಟ್ನಲ್ಲಿ ಪೂರಕ ಕಲೆಗಳನ್ನು ವೀಕ್ಷಿಸಬಹುದು. ಇಂದು ಕೂಡ ಈ ಪ್ರದರ್ಶನವಿದ್ದು, ಲಾಲ್ಬಾಗ್ನ ಬಂಡೆ ಸಮೀಪದಲ್ಲಿರುವ ಸಿದ್ದಾಪುರ ಗೇಟ್ ಮಾಹಿತಿ ಕೇಂದ್ರದಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.
ಮಹರ್ಷಿ ವಾಲೀಕಿ ವಿಷಯಾಧಾರಿತ ಕಲೆಗಳು ಅನಾವರಣಗೊಂಡಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಬಣ್ಣಬಣ್ಣದ ವಿವಿಧ ಹೂಗಳಿಂದ ಕಲಾಕೃತಿಗಳನ್ನು ರಚಿಸಲಾಗಿದೆ. ಮಹರ್ಷಿ ವಾಲೀಕಿಯ ಸಾಕಷ್ಟು ವಿಷಯಗಳು ಹೂವಿನಲ್ಲಿ ಅನಾವರಣಗೊಂಡಿದೆ. ಮಕ್ಕಳಿಗೆ ರಾಮಾ ಯಣದ ಮಹಾಕಾವ್ಯದ ಕುರಿತು ಗೊತ್ತಿಲ್ಲದ ಹಲವಾರು ವಿಷಯಗಳ ಬಗ್ಗೆ ಹೂಗಳ ಮೂಲಕ ತಿಳಿಸುವ ಪ್ರಯತ್ನವಾಗಿದೆ.
ಲಕ್ಷಾಂತರ ಹೂಗಳಿಂದ ರಾಮಾಯಣ ಬರೆದ ಶ್ರೀ ಮಹರ್ಷಿ ವಾಲೀಕಿ ಅವರ ಆಶ್ರಮ ದೃಶ್ಯ, ಹುತ್ತ, ಜಟಾಯು ಪಕ್ಷಿ, ರಾಮಾಯಣ ಮಹಾಕಾವ್ಯ ಕೃತಿಯ ಪ್ರತಿಕೃತಿ ಹಾಗೂ ಅವರು ತಪಸ್ಸಿಗೆ ಕುಳಿತ ದೃಶ್ಯಗಳು ಸೇರಿದಂತೆ ಅನೇಕ ವಿಷಯಗಳು ಹೂಗಳಲ್ಲಿ ಅನಾವರಣಗೊಂಡಿವೆ.