Saturday, August 2, 2025
Homeರಾಜ್ಯಹೂವಿನಲ್ಲಿ ಅರಳಲಿದ್ದಾರೆ ಕಿತ್ತೂರು ರಾಣಿ ಚೆನ್ನಮ ಮತ್ತು ಸಂಗೊಳ್ಳಿ ರಾಯಣ್ಣ

ಹೂವಿನಲ್ಲಿ ಅರಳಲಿದ್ದಾರೆ ಕಿತ್ತೂರು ರಾಣಿ ಚೆನ್ನಮ ಮತ್ತು ಸಂಗೊಳ್ಳಿ ರಾಯಣ್ಣ

Lalbagh Flower Show 2025: Tribute to Rani Chennamma and Rayanna on Independence Day

ಬೆಂಗಳೂರು, ಆ.1- ವೀರನಾರಿ ಕಿತ್ತೂರು ರಾಣಿ ಚೆನ್ನಮ ಹಾಗೂ ವೀರಸೇನಾನಿ ಸಂಗೋಳ್ಳಿ ರಾಯಣ್ಣ ಅವರು ಹೂವಿನಲ್ಲಿ ಅರಳಲಿದ್ದಾರೆ.ಆ. 7 ರಿಂದ 15ರ ವರೆಗೆ ನಗರದ ಲಾಲ್‌ಭಾಗ್‌ನಲ್ಲಿ ಆಯೋಜಿಸಲಾಗಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಚೆನ್ನಮ ಹಾಗೂ ರಾಯಣ್ಣ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದ ವಿಷಯಾಧಾರಿತ ಕಥೆಯನ್ನು ಹೂವಿನಲ್ಲಿ ಬಿಡಿಸಲು ತೀರ್ಮಾನಿಸಲಾಗಿದೆ.

218ನೇ ಪ್ರದರ್ಶನದಲ್ಲಿ ಹೊಸ ಥೀಮ್‌ನಲ್ಲಿ ಹೂವಿನ ಲೋಕವನ್ನು ಧರೆಗಿಳಿಸಲು ಪ್ಲಾನ್‌ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ ಜಗದೀಶ್‌ ತಿಳಿಸಿದ್ದಾರೆ.ಸ್ವಾತಂತ್ರ್ಯ ದಿನದ ಅಂಗವಾಗಿ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಆಗಸ್ಟ್‌ 7ರಿಂದ ಆಗಸ್ಟ್‌ 18ರ ವರೆಗೆ ಪ್ಲವರ್‌ ಶೋ ನಡೆಯಲಿದೆ. 218ನೇ ಫ್ಲವರ್‌ ಶೋನಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಪ್ರದರ್ಶನ ಇರಲಿದೆ ಎಂದರು.

ಚೆನ್ನಮ್ಮ ಮತ್ತು ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ ಕಥೆ ಪ್ರದರ್ಶನ ಹೂವಿನಲ್ಲಿ ಅರಳಲಿದೆ. ಲಾಲ್‌ಭಾಗ್‌ನಲ್ಲಿ ಬೆಳದ ಹೂಗಳು ಹಾಗೂ ಬೇರೆ ರಾಜ್ಯದ ಹೂಗಳಿಂದ ಅಲಂಕಾರ ಮಾಡಲಾಗುವುದು.ಈಗಾಗಲೇ ಪಾರ್ಕ್‌ನಲ್ಲಿ ಪಾರ್ಕಿಂಗ್‌ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.ಈ ಬಾರಿ 11 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.

RELATED ARTICLES

Latest News