Friday, September 20, 2024
Homeಬೆಂಗಳೂರುಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆ.8ರಿಂದ ಫಲಪುಷ್ಪ ಪ್ರದರ್ಶನ

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆ.8ರಿಂದ ಫಲಪುಷ್ಪ ಪ್ರದರ್ಶನ

ಬೆಂಗಳೂರು, ಆ.6– ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಬಾರಿ ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪರಿಕಲ್ಪನೆಯಡಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆ.8ರಿಂದ 19ರ ವರೆಗೆ ಫಲಪುಷ್ಪ ಪ್ರದರ್ಶನ ಹಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಮತ್ತು ರೇಷೆ ಇಲಾಖೆ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ನೂತನ ಸಂಸತ್‌ ಭವನದ ವಿಷಯಾಧಾರಿತ ಕಲಾಕೃತಿಗಳನ್ನು ರಚಿಸಲಾಗಿದೆ.ಸುಮಾರು 6 ಲಕ್ಷ ಹೂಗಳಿಂದ ಸಂಸತ್‌ ಭವನವನ್ನು ನಿರ್ಮಾಣ ಮಾಡಲಾಗಿದ್ದು, 3.4 ಲಕ್ಷ ಡಚ್‌ ಗುಲಾಬಿ ಹೂಗಳನ್ನು ಬಳಸಲಾಗುತ್ತಿದ್ದು, ಅಂಬೇಡ್ಕರ್‌ ಅವರ ಪ್ರತಿಕೃತಿ ಮತ್ತು ಚೈತನ್ಯ ಭೂಮಿ ನಿರ್ಮಾಣಕ್ಕೆ ವಿವಿಧ ಬಗೆಯ ಹೂಗಳನ್ನು ಬಳಸಲಾಗಿದೆ ಎಂದು ತಿಳಿಸಿದರು.

ಗ್ಲಾಸ್‌‍ಹೌಸ್‌‍ನಲ್ಲಿ ಈ ಪ್ರತಿಕೃತಿಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ವಿವಿಧ ದೇಶಗಳಿಂದ 85 ಬಗೆಯ ಹೂಗಳನ್ನು ಬಳಸಲಾಗಿದೆ ಎಂದು ಹೇಳಿದರು.ಅಂಬೇಡ್ಕರ್‌ ಅವರಿಗೆ ಸಂಬಂಧಿಸಿದ 15 ವಿಭಿನ್ನ ವಿಚಾರಗಳನ್ನು ಫಲಪುಷ್ಪ ಪ್ರದರ್ಶನದ ಮೂಲಕ ಬಿಂಬಿಸಲಾಗುವುದು.

ಆ.8ರಿಂದ 19ರ ವರೆಗೆ ಪ್ರದರ್ಶನ ನಡೆಯಲಿದ್ದು, ಮೊದಲ ಆರು ದಿನಗಳ ನಂತರ ಹೂಗಳನ್ನು ಬದಲಾಯಿಸಲಾಗುವುದು. ನಂತರ 3 ಲಕ್ಷ ಹೊಸ ಹೂಗಳನ್ನು ಬಳಸಲಾಗುತ್ತಿದ್ದು, ಇದಕ್ಕೆ ಸಂಸತ್‌ ಭವನಕ್ಕೆ 1.80 ಲಕ್ಷ, ಅಂಬೇಡ್ಕರ್‌ ಜನಸ್ಥಳ ಸ್ಥಾಪನೆಗೆ 1.70 ಲಕ್ಷ ಹೂಗಳನ್ನು ಬಳಸಲಾಗುವುದು ಎಂದರು.

ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ನಿರೀಕ್ಷಿಸಲಾಗಿದೆ ಎಂದರು. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎನ್.ಜಗದೀಶ್ ಮಾತನಾಡಿ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು
ಆಗಮಿಸಲಿದ್ದು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಭದ್ರತೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶಾಲೆಯ ಗುರುತಿನ ಚೀಟಿ ಹಾಗೂ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರಲಿದ್ದು, ವಯಸ್ಕರಿಗೆ 80ರೂ., ಮತ್ತು ಮಕ್ಕಳಿಗೆ 30ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

216ನೆ ಫಲಪುಷ್ಪ ಪ್ರದರ್ಶನ ಇದಾಗಿದ್ದು, ಈಗಾಗಲೇ ತೋಟಗಾರಿಕೆ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಆ.8ರಿಂದ 19ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಮೋಡಕವಿದ ವಾತಾವರಣವಿದ್ದು, ಇದೇ ವಾತಾವರಣ ಮುಂದುವರೆದರೆ ಹೂಗಳು ಅಷ್ಟೇನೂ ಬಾಡುವುದಿಲ್ಲ ಎಂದರು.

ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ ಅವರ ಮಾರ್ಗದರ್ಶನದಲ್ಲಿ ಹಮಿಕೊಳ್ಳಲಾಗಿದೆ. 8ರಂದು ಸಿಎಂ ಸಿದ್ದರಾಮಯ್ಯ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ್‌, ಉಪನಿರ್ದೇಶಕರಾದ ಕುಸುಮಾ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

RELATED ARTICLES

Latest News