Saturday, August 16, 2025
Homeರಾಜ್ಯಸ್ಥಾಯಿ ಸಮಿತಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.18 ಕಡೆಯ ದಿನ

ಸ್ಥಾಯಿ ಸಮಿತಿಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.18 ಕಡೆಯ ದಿನ

Last date for filing nominations for the elections to standing committees is August 18

ಬೆಂಗಳೂರು, ಆ.16-ಕರ್ನಾಟಕ ವಿಧಾನಮಂಡಲ/ ವಿಧಾನಸಭೆಯ ವಿವಿಧ ಸ್ಥಾಯಿ ಸಮಿತಿಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದೆ.

ಸೋಮವಾರ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಆ.19ರಂದು ಮಧ್ಯಾಹ್ನ ಮೂರು ಗಂಟೆಯವರೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಅವಕಾಶವಿದೆ ಎಂದು ವಿಧಾನಸಭೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಆ.12ರಂದು ವಿಧಾನಸಭೆಯ ಸದನದಲ್ಲಿ ಅಂಗೀಕರಿಸಿದ ಪ್ರಸ್ತಾವದಂತೆ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಚುನಾವಣೆ ಅವಶ್ಯವಿದಲ್ಲಿ ಚುನಾವಣೆ ನಡೆಯುವ ಸ್ಥಳ, ದಿನಾಂಕ ಮತ್ತು ವೇಳೆಯನ್ನು ತಿಳಿಸುವುದಾಗಿ ಹೇಳಿದೆ.

ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ, ಅಂದಾಜುಗಳ ಸಮಿತಿ, ಸಾರ್ವಜನಿಕ ಉದ್ದಿಮೆಗಳ ಸಮಿತಿ, ಹಕ್ಕುಬಾಧ್ಯತೆಗಳ ಸಮಿತಿ, ಅಧೀನ ಶಾಸನ ರಚನಾ ಸಮಿತಿ, ಸರ್ಕಾರಿ ಭರವಸೆಗಳ ಸಮಿತಿ, ಖಾಸಗಿ ಸದಸ್ಯರುಗಳ ವಿಧೇಯಕ ಹಾಗೂ ನಿರ್ಣಯಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ, ಸದನ ಸಮಿತಿ (ವಸತಿ ಸೌಕರ್ಯಗಳ ಸಮಿತಿ)ಗಳಿಗೆ ಸದಸ್ಯರನ್ನು ಚುನಾಯಿಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ.

RELATED ARTICLES

Latest News